ಚೆನ್ನೈ ಜೈಲಿನಲ್ಲಿ ಖೈದಿಗಳ ಐಷಾರಾಮಿ ಜೀವನ

ಚೆನೈ: ಚೆನ್ನೈನ ಪುಝಾಲ್​ ಜೈಲಿನಲ್ಲಿ ಖೈದಿಗಳು ಐಷಾರಾಮಿ ಜೀವನ ನಡೆಸುತ್ತಿದ್ದು ಈ ಕುರಿತಾದ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್​ ಆಗಿವೆ.

ಕೊಯಮ್ಮತ್ತೂರು ಸರಣಿ ಬಾಂಬ್​ ಸ್ಫೋಟ ಹಾಗೂ ಇನ್ನಿತರೆ ಉಗ್ರಗಾಮಿ ಚಟುವಟಿಕೆ ಆರೋಪದಲ್ಲಿ ಬಂಧಿಯಾಗಿರುವ ಅಪರಾಧಿಗಳು ಜೈಲಿನಲ್ಲಿಯೇ ಐಷಾರಾಮಿ ಜೀವನ ನಡೆಸುತ್ತಿದ್ದಾರೆ.

ಈ ಕೈದಿಗಳಿಗೆ ಜೈಲಿನ ಕೊಠಡಿಗಳು ಯಾವ ಸ್ಟಾರ್​ ಹೋಟೆಲ್​ಗೂ ಕಡಿಮೆಯಿಲ್ಲ. ಮಲಗಲು ಹಾಸಿಗೆ, ಕುಡಿಯಲು ಮದ್ಯ, ಬೇಕಾದ ರೀತಿಯ ತಿಂಡಿ-ತಿನಿಸುಗಳು, ಗಾಂಜಾ ಸೇರಿದಂತೆ ಟಿವಿ, ಎಸಿ, ವಾಷಿಂಗ್​ ಮೆಷಿನ್​ ಹಾಗೂ ಎಲೆಕ್ಟ್ರಾನಿಕ್​ ಕುಕ್ಕಿಂಗ್​ ಸ್ಟೌವ್​ ಒಳಗೊಂಡಂತೆ 4ಜಿ ಸ್ಮಾರ್ಟ್​ ಪೋನ್​ಗಳನ್ನು ಕೂಡ ಈ ಅಪರಾಧಿಗಳು ಹೊಂದಿದ್ದಾರೆ.

ಈ ಸಂಬಂಧ ನಕಲಿ ಪಾಸ್​ಪೋರ್ಟ್​ ಪ್ರಕರಣದಲ್ಲಿ ಬಂಧಿಯಾಗಿರುವ ರಸಲುದ್ದೀನ್​ ಎಂಬ ಖೈದಿಯ ಮೊಬೈಲ್​ನ್ನು ಪೊಲೀಸರು ವಶಪಡಿಸಿಕೊಂಡಿದ್ದು, ಈ ಫೋನ್​ನಲ್ಲಿ ಅಚ್ಚರಿ ಪಡುವ ಪೋಟೋಗಳು ಕಂಡುಬಂದಿವೆ.

ಈ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದ್ದು ಜೈಲಿನಲ್ಲಿ ಯಾವ ರೀತಿಯ ಭದ್ರತೆ ಇದೆ ಎಂದು ಸಾರ್ವಜನಿಕ ವಲಯದಲ್ಲಿ ಈಗ ಭಾರೀ ಚರ್ಚೆಗೆ ಕಾರಣವಾಗಿದೆ.

ಘಟನೆ ಸಬಂಧ ಪೊಲೀಸ್​ ಹಿರಿಯ ಅಧಿಕಾರಿಗಳು ತನಿಖೆಗೆ ಆದೇಶ ಮಾಡಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ