ದಾವಣಗೆರೆ, ಮಾ.3-ಸರ್ಕಾರ ಪ್ರತ್ಯೇಕ ಲಿಂಗಾಯಿತ ಧರ್ಮಕ್ಕೆ ಯಾವಾಗ ಸಮಿತಿ ನೇಮಿಸಿದರೋ ಆಗಲೇ ಅವರೆಲ್ಲಾ ಕಮಿಟ್ ಆಗಿದ್ದಾರೆ ಎಂದು ಅಖಿಲ ಭಾರತ ವೀರಶೈವ ಮಹಾಸಭಾದ ರಾಷ್ಟ್ರಧ್ಯಕ್ಷ ಶಾಮನೂರು ಶಿವಶಂಕರಪ್ಪ ವ್ಯಂಗ್ಯವಾಡಿದ್ದರು.
ಲಿಂಗಾಯಿತ ಪ್ರತ್ಯೇಕ ಧರ್ಮ ಸ್ಥಾನಮಾನ ವಿಚಾರ ಕುರಿತು ತಜ್ಞರ ಸಮಿತಿ ಅಲ್ಪಸಂಖ್ಯಾತರ ಆಯೋಗಕ್ಕೆ ವರದಿ ಸಲ್ಲಿಸಿದ ಹಿನ್ನೆಲೆಯಲ್ಲಿ ಪ್ರತಿಕ್ರಿಯೆ ನೀಡಿದ ಅವರು, ನಾವುಗಳು ತಟಸ್ಥವಾಗಿರುತ್ತೇವೆ. ಸಮಿತಿ ಹಾಗೂ ಸರ್ಕಾರ ಶಿಫಾರಸು ಮಾಡುತ್ತದೆ ಎಂದು ನಮಗೆ ಮುಚೆಯೇ ಗೊತ್ತಿತ್ತು. ಆದರೆ, ಅದು ಮುಂದೆ ಏನೂ ಆಗುವುದಿಲ್ಲ, ನಾವು ಕೊನೆಯವರೆಗೂ ವೀರಶೈವ ಲಿಂಗಾಯತರೇ ಎಂದು ತಿಳಿಸಿದರು.