ಏರ್​ಶೋ ಸ್ಥಳಾಂತರ ಗೊಂದಲಕ್ಕೆ ತೆರೆ; ಬೆಂಗಳೂರಲ್ಲೆ ಲೋಹದ ಹಕ್ಕಿಗಳ ಹಾರಾಟ

ಬೆಂಗಳೂರು: ಏರ್ ಗೆ ಸಂಬಧಸಿದಂತೆ ಉಂಟಾಗಿದ್ದ ಗೊಂದಲಕ್ಕೆ ಈಗ ತೆರೆ ಎಳೆಯಲಾಗಿದೆ. ಎರಡು ವರ್ಷಕ್ಕೊಮ್ಮೆ ನಡೆಯುವ ವೈಮಾನಿಕ ಪ್ರದರ್ಶನ ಸ್ಥಳಾಂತರಕ್ಕೆ ಸಾಕಷ್ಟು ವಿರೋಧಗಳು ವ್ಯಕ್ತವಾಗಿತ್ತು. ಈ ಹಿನ್ನೆಲೆ ಎಂದಿನಂತೆ ಬೆಂಗಳೂರಿನಲ್ಲೇ ಏರ್​ಶೋ ನಡೆಯಲಿದೆ.
ಈ ಏರ್ ಶೋ 2019 ಫೆಬ್ರವರಿ 20 ರಿಂದ 24 ರವೆಗೆ ನಡೆಯಲಿದೆ ಎಂದು ಏರ್ ಶೋ ಮಿನಿಸ್ಟರಿ ಆಫ್ ಡಿಫೆನ್ಸ್​ನಿಂದ ಅಧಿಕೃತ ಮಾಹಿತಿ ಹೊರಬಿದ್ದಿದೆ.
ಇದುವರೆಗೂ ಏರ್​ ಶೋ ನಗರದಲ್ಲೇ ನಡೆಯುತ್ತಿತ್ತು. ಆದರೆ ಈ ಬಾರಿ ಲಖನೌಗೆ ಸ್ಥಳಾಂತರ ಮಾಡುವುದಾಗಿ ಭಾರೀ ಚರ್ಚೆಗಳು ಉಂಟಾಗಿದ್ದವು. ಈ ಬಗ್ಗೆ ಹಲವಾರು ರಾಜಕೀಯ ಮುಖಂಡರು ಚಕಾರ ಎತ್ತಿದ್ದರು. ಈ ಎಲ್ಲಾ ಘಟನೆಯ ನಂತರ ಏರ್​ಶೋ ಬೆಂಗಳೂರಿನಲ್ಲೇ ನಡೆಯಲಿದೆ ಎಂದು ಅಧೀಕೃತ ಆದೇಶ ಹೊರಬಿದ್ದಿದೆ.
ಈ ಸಂಬಂಧ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಪ್ರತಿಕ್ರಿಯೆ ನೀಡಿದ್ದು, ಏರ್ ಶೋ ಸ್ಥಳಾಂತರಗೊಳಿಸದಂತೆ  ನಾವು ಸತತ ಹೋರಾಟ ಮಾಡಿದ್ದೇವೆ. ಬೆಂಗಳೂರಿನಲ್ಲೆ ಏರ್ ಶೋ ನಡೆಸಲು ನಿರ್ಧರಿಸಿರೋದು ಖುಷಿ ವಿಚಾರ. ಇದನ್ನು ನಾವು ಸ್ವಾಗತಿಸುತ್ತೇವೆ. ಅದರೆ, ಕೇಂದ್ರ ಸರ್ಕಾರ ಈ ರೀತಿಯ ಅಭಿವೃದ್ಧಿ ಕಾರ್ಯಗಳಿಗೆ ಒತ್ತಡ ಹೇರಬಾರದು ಎಂದು ತಿಳಿಸಿದರು.

 

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ