ಕೆಸಿಆರ್ ಜಾಣ ನಡೆಯ ಹಿಂದೆ ಗೆಲುವೇ ಗುರಿ !

ಆಂಧ್ರಪ್ರದೇಶದಿಂದ ವಿಭಜಿತ ತೆಲಂಗಾಣದಲ್ಲಿ ನಾಟಕೀಯ ಮುಗಿದು ರಾಜಕೀಯ ಮೊದಲಾಗಿದೆ. ತೆಲಂಗಾಣದ ಹಂಗಾಮಿ ಮುಖ್ಯಮಂತ್ರಿ ಹಾಗೂ ತೆಲಂಗಾಣ ರಾಷ್ಟ್ರೀಯ ಸಮಿತಿ(ಟಿಆರ್ ಎಸ್) ಅಧ್ಯಕ್ಷ ಕೆ. ಚಂದ್ರಶೇಖರ ರಾವ್ 7 ತಿಂಗಳ ಮೊದಲೇ ವಿಧಾನಸಭೆ ವಿಸರ್ಜನೆ ಮಾಡಿ ಚುನಾವಣಾ ರಂಗಕ್ಕೆ ಇಳಿದಿದ್ದಾರೆ. ಚುನಾವಣಾ ಸಮರಕ್ಕೂ ಮುನ್ನವೇ ಮಾತಿನ ಚಾಟಿ ಕೂಡ ಬೀಸಿದ್ದಾರೆ. ಸಮೀಕ್ಷೆಗಳು ತನಗೆ ಅನುಕೂಲವಾಗಿವೆ ಎಂದು ಗೆಲುವೊಂದನ್ನು ಗುರಿಯಾಗಿಸಿಕೊಂಡು ವಿಧಾನಸಭೆ ವಿಸರ್ಜನೆಗೆ ಶಿಫಾರಸು ಮಾಡಿ ಅದಕ್ಕೆ ರಾಜ್ಯಪಾಲರ ಒಪ್ಪಿಗೆಯನ್ನೂ ಪಡೆದಿರುವುದು ತಿಳಿದ ವಿಷಯವೆ.

ಆದರೆ ವಿಧಾನಸಭೆ ವಿಸರ್ಜನೆಗೆ ಸುಮ್ಮನಾಗದ ಕೆಸಿಆರ್ ಅದಾಗಲೇ ಗರಿಷ್ಠ ಪ್ರಮಾಣ ಅಭ್ಯರ್ಥಿಗಳ ಪಟ್ಟಿಯನ್ನು ಪ್ರಕಟಿಸಿ, ಅಮಾವಾಸ್ಯೆಗೆ ಮೊದಲೇ ಆಶೀರ್ವಾದ ಸಭೆಗಳನ್ನೂ ಆರಂಭಿಸುತ್ತಿದ್ದಾರೆ.  ಇದೆಲ್ಲಾ ಅತಿ ವಿಶ್ವಾಸದಿಂದಲೋ ಅಥವಾ ಅಭದ್ರತೆಯಿಂದಲೋ..?

ಈ ಹಿಂದೆ ಬಹುತೇಕ ಎಲ್ಲ ಪಕ್ಷಗಳು ಕೇಂದ್ರ ಹಾಗೂ ರಾಜ್ಯಗಳಲ್ಲೂ ಸಹ ಅವಧಿ ಮುನ್ನವೇ ಚುನಾವಣೆಗೆ ಹೋದ ಸಂದರ್ಭಗಳು ಅನೇಕ. ಅಖಂಡ ಆಂಧ್ರಪ್ರದೇಶ(ವಿಭಜನೆ ಮುನ್ನ)ದಲ್ಲಿ ಎನ್ ಟಿ ಆರ್, ಚಂದ್ರಬಾಬು ಸಹ ಆ ಕೆಲಸ ಮಾಡಿದ್ದವರೇ. ಆದರೆ ಆದರ್ಶ ಬೇರೆ. ಲೋಕಸಭೆ ಜತೆ ಚುನಾವಣೆ ನಡೆಯಲು ಅವರು ವಿಧಾನಸಭೆ ವಿಸರ್ಜನೆ ಮಾಡಿದರೇ ಹೊರತು ಪ್ರತ್ಯೇಕವಾಗಿ ಹೋಗಲು ಅಲ್ಲ. 1984ರಲ್ಲಿ ಮಾತ್ರ ನಾದೇಂಡ್ಲ ಭಾಸ್ಕರರಾವ್ರ ಕುತಂತ್ರದ ಬಳಿಕ ಮತ್ತೆಬಂದ ಎನ್ ಟಿಆರ್ 55 ಶಾಸಕರನ್ನು ಕಳೆದುಕೊಂಡ ಹಿನ್ನೆಲೆಯಲ್ಲಿ ಅವಧಿ ಮುನ್ನವೇ ವಿಧಾನಸಭೆ ವಿಸರ್ಜನೆ ಮಾಡಿದರು. ನವೆಂಬರ್ 22ರಂದು ವಿಧಾನಸಭೆ ವಿಸರ್ಜನೆಗೆ ಶಿಫಾರಸು ಮಾಡಿದ ಅವರು ಡಿಸೆಂಬರ್ ನಲ್ಲಿ ಲೋಕಸಭೆ ಚುನಾವಣೆ ಜತೆ ಅಲ್ಲದೇ 1985 ಮಾರ್ಚ್ ನಲ್ಲಿ ವಿಧಾನಸಭೆ ಚುನಾವಣೆ ನಡೆಸಬೇಕೆಂದು ಮನವಿಮಾಡಿದರು. (ಇಂದಿರಾಗಾಂಧಿ ಹತ್ಯೆ ಬಳಿಕ ಅನುಕಂಪದ ಪರಿಣಾಮ ಬಗ್ಗೆ ಸಂದೇಹದಿಂದಲೇ ಅವರು ಹಾಗೆ ಮಾಡಿದರು, ಏನಾದರೂ, ಆ ಚುನಾವಣೆಯಲ್ಲಿ ಎಂದೂ ಇಲ್ಲದ ಟಿಡಿಪಿ ಲೋಕಸಭೆಯಲ್ಲಿ ಪ್ರಧಾನ ವಿಪಕ್ಷವಾವಾಯಿತು) ಅದೇ 1989ರಲ್ಲಿ ಲೋಕಸಭೆ ಜತೆ ಚುನಾವಣೆಗೆ ಹೋಗಲು ವಿಧಾನಸಭೆ ವಿಸರ್ಜಿಸಿದರು.

2002ರಲ್ಲಿ ಮುಖ್ಯಮಂತ್ರಿ ನರೇಂದ್ರ ಮೋದಿಯವರು ಕೂಡ ವಿಧಾನಸಭೆ ವಿಸರ್ಜನೆ ಮಾಡಿ ಚುನಾವಣೆ ಎದುರಿಸಿದ್ದರು.

ಇನ್ನು 2003ರಲ್ಲಿ ಚಂದ್ರಬಾಬು ತನ್ನ ಮೇಲಿನ ಹತ್ಯೆ ಯತ್ನದ ಬಳಿಕ ಉದ್ರಿಕ್ತ ರಾಜಕೀಯ ವಾತಾವರಣದಲ್ಲಿ ಅವಧಿ ಮುನ್ನವೇ ಚುನಾವಣೆಗೆ ಹೋಗುವುದು ಒಳಿತು ಎಂದುಕೊಂಡಿದ್ದರು. ಕೇಂದ್ರದಲ್ಲಿ ವಾಜಪೇಯಿ ಅವರು ಕೂಡ 2004ರಲ್ಲಿ ನಡೆಯಬೇಕಿದ್ದ ಚುನಾವಣೆಯನ್ನು 6 ತಿಂಗಳ ಮೊದಲೆ ನಡೆಸಲಾದ ಕಾರಣ ಲೋಕಸಭೆ ಮತ್ತು ಆಂಧ್ರಪ್ರದೇಶ ವಿಧಾನಸಭೆಗೆ ಒಂದೇ ಬಾರಿ ಚುನಾವಣೆಗಳು ನಡೆದವು.

ಅಲ್ಲಿಂದ ಕೇಂದ್ರ ಮತ್ತು ರಾಜ್ಯಗಳಲ್ಲೂ ಕೂಡ ಅವಧಿ ಮುನ್ನ ಚುನಾವಣೆ ಸಾಮಾನ್ಯವಾಗಿವೆ.  ಕೆಸಿಆರ್ ನೀಡುತ್ತಿರುವ ಸಂಕೇತಗಳನ್ನು ಕೂಡ ಗಂಭೀರವಾಗಿ ತೆಗೆದುಕೊಳ್ಳಲು ಸಮಯ ತೆಗೆದುಕೊಂಡಿತು. ಚುನಾವಣೆ ವಿಷಯದಲ್ಲಿ ಇಷ್ಟು ನಾಟಕವಾಡಲು ಟಿಆರ್ ಎಸ್ ಬಲವರ್ಧನೆ ಸೂಚಿಸುವ ವಿಷಯವೇನು ಅಲ್ಲ.

ಕೆಸಿಆರ್ ಕಳೆದ 10 ವರ್ಷಗಳಿಂದ ರಾಜೀನಾಮೆ, ಉಪ ಚುನಾವಣೆಯನ್ನು ರಾಜಕೀಯ ತಂತ್ರವಾಗಿ ಬಳಸುತ್ತಿದ್ದಾರೆ. ಮುಖ್ಯಮಂತ್ರಿಯಾಗಿ ಕೂಡ ಅದೇ ತಂತ್ರವನ್ನು ಅವರು ಪುನರ್ ಬಳಸುತ್ತಿದ್ದಾರೆ ಎಂದುಕೊಳ್ಳಬೇಕು. ಆದರೆ ಪ್ರಸ್ತುತ ರಾಜ್ಯ ಆಡಳಿತವನ್ನು 7 ತಿಂಗಳ ಮೊದಲೇ ಏಕೆ ಕೈಬಿಟ್ಟರು ಎನ್ನುವುದಕ್ಕೆ ಸಮರ್ಥನೆ ಇಲ್ಲ. ಡಿಸೆಂಬರ್ ನಲ್ಲಿ ನಡೆಯುವ ಮೂರು ರಾಜ್ಯಗಳ ವಿಧಾನಸಭೆ ಚುನಾವಣೆಯಲ್ಲಿ ಒಂದು ವೇಳೆ ಕಾಂಗ್ರೆಸ್ ಗೆದ್ದರೆ, ಇಲ್ಲೂ ಕೂಡ ಅದರ ಬಲವರ್ಧನೆಯಾಗುತ್ತೆ ಎಂಬ ಮುಂದಾಲೋಚನೆ ಇರಬೇಕು. ಆಂಧ್ರಪ್ರದೇಶದ ಜತೆ ಅಲ್ಲದೇ ಪ್ರತ್ಯೇಕವಾಗಿ ಚುನಾವಣೆ ನಡೆದರೆ ಟಿಆರ್ ಎಸ್ ಗೆ ಲಾಭ ಎಂದು ಭಾವಿಸಿರಬೇಕು.

 

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ