ಬೆಂಗಳೂರು: ಉಪಮುಖ್ಯಮಂತ್ರಿ ಹಾಗೂ ನಗರಾಭಿವೃದ್ಧಿ ಸಚಿವ ಡಾ.ಜಿ. ಪರಮೇಶ್ವರ್ ಅವರು ಸೋಮವಾರ ಸಿ.ವಿ. ರಾಮನ್ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಇಂದಿರಾನಗರ ಬಿಡಿಎ ಕಾಂಪ್ಲೆಕ್ಸ್, ಜೀವನ್ ಭೀಮಾನಗರ ಸೇರಿದಂತೆ ವಿವಿಧ ಬಡಾವಣಿಗಳಿಗೆ ಭೇಟಿ ಕೊಟ್ಟು ಪರಿಶೀಲನೆ ನಡೆಸಿದರು.
ಮೇಯೋ ಹಾಲ್ನಲ್ಲಿರುವ ಬಿಬಿಎಂಪಿ ಪೂರ್ವ ವಲಯದಿಂದ ಹೊರಟು ಜೀವನ್ ಭೀಮ ನಗರಕ್ಕೆ ತೆರಳಿದ ಅವರು, ಮೊದಲಿಗೆ ಕೋರಮಂಗಲ ಹಾಗೂ ಚಲ್ಲಘಟ್ಟ ವ್ಯಾಲಿ ರಾಜಕಾಲುವೆ ವೀಕ್ಷಣೆ ಮಾಡಿದರು. ರಾಜಕಾಲುವೆಯಲ್ಲಿ ತುಂಬಿದ ಹೂಳು ನೋಡಿದ ಅವರು, ಕೂಡಲೇ ತೆಗೆಯಲು ಸೂಚನೆ ನೀಡಿದರು. ಸೆಪ್ಟೆಂಬರ್ ಹಾಗೂ ಅಕ್ಟೋಬರ್ ನಲ್ಲಿ ಹೆಚ್ಚು ಮಳೆಯಾಗಲಿದ್ದು, ಆ ಒಳಗಾಗಿ ರಾಜಕಾಲುವೆಯಲ್ಲಿನ ಹೂಳು ತೆಗೆಯಬೇಕು ಎಂದರು.
ಅಲ್ಲಿಂದ ಬೆಮಲ್ ಮುಖ್ಯರಸ್ತೆ ನ್ಯೂ ತಿಪ್ಪಸಂದ್ರಕ್ಕೆ ತೆರಳಿದ ಅವರು, ಅಲ್ಲಿ ನಿರ್ಮಾ ಣವಾಗುತ್ತಿರುವ ರಾಜಕಾಲುವೆ ವೀಕ್ಷಣೆ ಮಾಡಿ, ನ್ಯೂ ಬೈಯ್ಯಪ್ಪನಹಳ್ಳಿ ಬಳಿಯ ಸುರಂಜನ್ದಾಸ್ ರಸ್ತೆಯಲ್ಲಿ ಅಂಡರ್ಪಾಸ್ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಿದರು.
ಬಳಿಕ ಇಂದಿರಾ ನಗರ ಬಿಡಿಎ ಕಾಂಪ್ಲೆಕ್ಸ್ಗೆ ತೆರಳಿದರು. ಇಲ್ಲಿನ ಹಳೇ ಬಿಡಿಎ ಕಾಂಪ್ಲೆಕ್ಸ್ ಒಡೆದು ನೂತನವಾಗಿ ಶಾಪಿಂಗ್ ಕಾಂಪ್ಲೆಕ್ಸ್ ತೆರೆಯುವ ಪ್ರಸ್ತಾವನೆಗೆ ಅಲ್ಲಿನ ಸ್ಥಳೀತ ನಿವಾಸಿಗಳು ಆಕ್ಷೇಪ ವ್ಯಕ್ತಪಡಿಸಿದರು. ಚೇಂಜ್ ಇಂದಿರಾನಗರ ಒಕ್ಕೂಟದ ಸದಸ್ಯರು ಬಿಡಿಎ ಕಾಂಪ್ಲೆಕ್ಸ್ಗೆ ಪರಮೇಶ್ವರ್ ಅವರ ಆಗಮನಕ್ಕೆ ಕಾದು, ನೂತನ ಶಾಪಿಂಗ್ ಕಾಂಪ್ಲೆಕ್ಸ್ ಬೇಡವೆಂದು ಮನವಿ ಮಾಡಿದರು. ಇದಕ್ಕೆ ಪ್ರತಿಕ್ರಿಯಿಸಿದ ಅವರು, ಬೆಂಗಳೂರನ್ನು ಸುಂದರ ನಗರವನ್ನಾಗಿ ಮಾಡುವುದೇ ನನ್ನ ಉದ್ದೇಶ. ಆದರೆ, ಕಳೆದ 20 ವರ್ಷದಲ್ಲಿ ನಗರ ವೇಗವಾಗಿ ಬೆಳೆದು, ಎಲ್ಲೆಡೆ ಕಾಂಪ್ಲೆ ಕಮರ್ಷಿಯಲ್ ಕಾಂಪ್ಲೆಕ್ಸ್ ಗಳೇ ಹೆಚ್ಚಾಗಿವೆ. ಇಲ್ಲಿನ ನಿವಾಸಿಗಳು ಮೊದಲೇ ವಿರೋಧ ವ್ಯಕ್ತಪಡಿಸಿದ್ದರೆ ಇಷ್ಟೆಲ್ಲ ಸಮಸ್ಯೆ ತಲೆದೂರುತ್ತಿರಲಿಲ್ಲ. ಈಗಿರುವ ಬಿಡಿಎ ಕಾಂಪ್ಲೆಕ್ಸ್ ಕೆಡವಿ ನೂತನ ಮಾಲ್ ನಿರ್ಮಿಸಲು ಈಗಾಗಲೇ ಟೆಂಡರ್ ಪ್ರಕ್ರಿಯೆ ಪೂರ್ಣಗೊಂಡಿದೆ. ಟೆಂಡರ್ನಲ್ಲಿ ಯಾವುದೇ ಅಕ್ರಮ ನಡೆದಿಲ್ಲ. ಅರ್ಹರಿಗೇ ಟೆಂಡರ್ ನೀಡಿದ್ದೇವೆ ಎಂದು ಹೇಳಿದರು. ಆದರೂ ಇಲ್ಲಿನ ನಿವಾಸಿಗಳು ಕಾಂಪ್ಲೆಕ್ಸ್ ನಿಮರ್ಾಣದ ಬಗ್ಗೆ ಚರ್ಚಿಸಲು ಮುಂದಿನವಾರ ಬರುವಂತೆ ಆಹ್ವಾನಿಸಿದರು.
ಇದಾದ ಬಳಿಕ ಮಫರ್ಿಟೌನ್ ಮಾರುಕಟ್ಟೆಗೆ ಭೇಟಿ ನೀಡದ ಅವರು, ಅಲ್ಲಿನ ವ್ಯಾಪಾರಸ್ಥರ ಸಮಸ್ಯೆ ಆಲಿಸಿದರು. ಹತ್ತಾರು ವರ್ಷಗಳಿಂದ ಇಲ್ಲಿಯೇ ವ್ಯಾಪಾರ ನಡೆಸುತ್ತಿದ್ದರೂ ಹಕ್ಕುಪತ್ರ ಸಿಕ್ಕಿಲ್ಲ ಎಂದು ದೂರು ಸಲ್ಲಿಸಿದರು. ಇದಕ್ಕೆ ಕೂಡಲೇ ಸ್ಪಂದಿಸಿದ ಅವರು, ಕ್ರಮಬದ್ಧವಾಗಿ ಹಕ್ಕುಪತ್ರ ವಿತರಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು. ಇದೇ ಭಾಗದಲ್ಲಿರುವ ಅಂಬೇಡ್ಕರ್ ಮೈದಾನವನ್ನೂ ಅಭಿವೃದ್ಧಿ ಪಡಿಸಲು ಸೂಚಿಸಿದರು.
ನಗರ ವೀಕ್ಷಣೆ ವೇಳೆ ಸಂಸದ ಪಿ.ಸಿ. ಮೋಹನ್, ಮೇಯರ್ ಸಂಪತ್ ರಾಜ್, ಆಯುಕ್ತ ಮಂಜುನಾಥ್ ಪ್ರಸಾದ್ ಇತರೆ ಅಧಿಕಾರಿಗಳು ಇದ್ದರು.