ಹಾಸನ: ಜಿಲ್ಲೆಯಲ್ಲಿ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿಯೂ ಜೆಡಿಎಸ್ ಪ್ರಾಬಲ್ಯ ಮೆರೆದಿದೆ. ಎರಡು ನಗರಸಭೆ, ಪುರಸಭೆಗಳನ್ನು ತನ್ನ ಕೈವಶ ಮಾಡಿಕೊಂಡಿದೆ. ಹೊಳೆನರಸೀಪುರದ ಪುರಸಭೆಯಲ್ಲಿ ಜೆಡಿಎಸ್ ಎಲ್ಲ ಸ್ಥಾನಗಳನ್ನು ತನ್ನದಾಗಿಸಿಕೊಂಡು ಭರ್ಜರಿ ಜಯ ಸಾಧಿಸಿದೆ.
ಭಾರಿ ಕುತೂಹಲ ಕೆರಳಿಸಿದ್ದ ಸ್ಥಳೀಯ ಸಂಸ್ಥೆಗಳ ಚುನಾವಣಾ ಫಲಿತಾಂಶ ಪ್ರಕಟಗೊಂಡಿದ್ದು ಹಾಸನ ನಗರಸಭೆಯ ಒಟ್ಟು 35 ಸ್ಥಾನಗಳಲ್ಲಿ ಜೆಡಿಸ್ -17 ಪಡೆದರೆ, ಬಿಜೆಪಿ -13, ಕಾಂಗ್ರೆಸ್ -03 ಹಾಗೂ ಪಕ್ಷೇತರ – 02 ಸ್ಥಾನ ಪಡೆದಿವೆ.
ಅರಸೀಕೆರೆ ನಗರಸಭಾ ಫಲಿತಾಂಶ ಕೂಡ ಪ್ರಕಟಕೊಂಡಿದ್ದು ಒಟ್ಟು 31 ಸ್ಥಾನಗಳಲ್ಲಿ ಜೆಡಿಎಸ್ -22, ಬಿಜೆಪಿ -05, ಕಾಂಗ್ರೆಸ್ -01, ಪಕ್ಷೇತರ 03 ಸ್ಥಾನ ಪಡೆದಿದೆ.
ಇದಲ್ಲದೆ ಒಟ್ಟು 23 ಸ್ಥಾನ ಹೊಂದಿದ ಚನ್ನರಾಯಪಟ್ಟಣ ಪುರಸಭೆಯಲ್ಲಿಯೂ ಜೆಡಿಎಸ್ -15, ಕಾಂಗ್ರೆಸ್ – 08, ಬಿಜೆಪಿ -00 ಸ್ಥಾನ ಗಳಿಸುವ ಮೂಲಕ ಹಿಂದೆ ಬಿದ್ದಿದೆ.
ಇನ್ನು ಸಕಲೇಶಪುರ ಪುರಸಭೆ ಫಲಿತಾಂಶ ಕೂಡ ಹೊರಬಿದ್ದಿದ್ದು ಒಟ್ಟು 23 ಸ್ಥಾನ ಹೊಂದಿದ ಜೆಡಿಸ್ -14, ಬಿಜೆಪಿ -02, ಪಕ್ಷೇತರ – 03, ಕಾಂಗ್ರೆಸ್ -04 ಸ್ಥಾನ ಗಳಿಸಿದೆ. ಒಟ್ಟು 23 ಸ್ಥಾನ ಹೊಂದಿರುವ ಹೊಳೆನರಸೀಪುರದ ಪುರಸಭೆಯಲ್ಲಿ ಜೆಡಿಸ್ ಎಲ್ಲ 23 ಸ್ಥಾನಗಳನ್ನು ಬಾಚಿಕೊಂಡಿದೆ.