ಹನಿಮೂನ್​ಗಾಗಿ ಈ ಜೋಡಿ ಮಾಡಿದ್ದೇನು ಗೊತ್ತಾ?!

ಕೊಯಿಮತ್ತೂರ್: ಹನಿಮೂನ್​ಗಾಗಿ ವಿಭಿನ್ನ ಪ್ಲಾನ್​ಗಳನ್ನು ಮಾಡಿ ಹಲವರು ಸುದ್ದಿಯಾಗಿದ್ದಾರೆ. ವೈವಾಹಿಕ ಜೀವನದ ಆರಂಭಿಕ ದಿನಗಳನ್ನು ಕಳೆಯಲು ಸ್ಪೆಷಲ್ ಯೋಜನೆ ಮಾಡುವ ಜೋಡಿಗಳ ಸಂಖ್ಯೆ ಹೆಚ್ಚಾಗಿದೆ. ಅದೇ ರೀತಿ ಇಲ್ಲೊಂದು ಜೋಡಿ ಹನಿಮೂನ್ ವಿಚಾರಕ್ಕೆ ಸುದ್ದಿಯಾಗಿದ್ದಾರೆ.

ಬ್ರಿಟಿಷ್ ಮೂಲದ ಜೋಡಿ ಹನಿಮೂನ್​ಗಾಗಿ ತಮಿಳುನಾಡಿನ ಊಟಿಯನ್ನು ಆರಿಸಿಕೊಂಡಿದ್ದರು. ಮೆಟ್ಟುಪಾಳ್ಯಂ ರೈಲು ನಿಲ್ದಾಣದಿಂದ ಉದಕಮಂಡಲ(ಊಟಿ)ಗೆ ತೆರಳುವ ರೈಲನ್ನು ಬುಕ್ ಮಾಡಿದ್ದರು. ಇದಿಷ್ಟೇ ಆಗಿದ್ದರೆ ಇದರಲ್ಲಿ ವಿಶೇಷ ಏನೂ ಇರುತ್ತಿರಲಿಲ್ಲ. ಆದರೆ ಈ ಜೋಡಿ ಒಂದಿಡೀ ರೈಲನ್ನೇ ಬುಕ್ ಮಾಡಿದ್ದರು.

ಗ್ರಹಾಂ ವಿಲಿಯಂ ಲಿನ್​ ಹಾಗೂ ಸಿಲ್ವಿಯ ಪ್ಲಾಸಿಕ್ ಜೋಡಿ ಬರೋಬ್ಬರಿ ಮೂರು ಲಕ್ಷ ತೆತ್ತು ಸಂಪೂರ್ಣ ರೈಲನ್ನು ಬುಕ್ ಮಾಡಿದ್ದರು. ಈ ರೀತಿಯಾಗಿ ಒಂದಿಡೀ ರೈಲು ಬುಕ್ ಮಾಡಿರುವ ಘಟನೆ ಇದೇ ಮೊದಲಾಗಿದೆ. ಮೆಟ್ಟುಪಾಳ್ಯಂನಿಂದ ಬೆಳಗ್ಗೆ 9.10ಕ್ಕೆ ಹೊರಟಿದ್ದ ರೈಲು ಮಧ್ಯಾಹ್ನ 2.10ಕ್ಕೆ ಊಟಿ ತಲುಪಿದೆ.

 

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ