ಕಾಂಗ್ರೇಸ್ ಮತ್ತು ಜೆಡಿಎಸ್ ಕಾರ್ಯಕರ್ತರ ನಡುವೆ ಮಾರಾಮಾರಿ

ಚನ್ನರಾಯಪಟ್ಟಣ: ಚುನಾವಣೆ ಬಳಿಕವೂ ರಾಜಕೀಯ ಪಕ್ಷಗಳ ಬಡಿದಾಟ ಮುಂದುವರೆದಿದೆ. ಇಂತಹದೊಂದು ಘಟನೆ ಮತ್ತೆ ಹಾಸನ ಜಿಲ್ಲೆಯ ಚನ್ನರಾಯಪಟ್ಟಣದಲ್ಲಿ ನಡೆದಿದೆ. ಕಾಂಗ್ರೇಸ್ ಮತ್ತು ಜೆಡಿಎಸ್ ನಡುವೆ ಮಾರಾಮಾರಿಯಾಗಿದ್ದು, ಗಾಯಗೊಂಡ ಎರಡು ಪಕ್ಷದವರು ಕೂಡಾ ಖಾಸಗಿ ಮತ್ತು ಸರ್ಕಾರಿ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ.

ಬಹುತೇಕ ಅಲ್ಪಸಂಖ್ಯಾಂತರು ಕಾಂಗ್ರೇಸ್ ಪರವಾಗಿದ್ದಾರೆಂಬುದು ಗುಟ್ಟಾಗಿ ಉಳಿದಿಲ್ಲ. ಆದ್ರೆ ಜಿಲ್ಲೆಯಲ್ಲಿ ಜೆಡಿಎಸ್ ಪಕ್ಷ ಇದೆ.ಮೊದಲಿಂದಲೂ ಕೂಡಾ ಕಾಂಗ್ರೇಸ್ ಮತ್ತು ಜೆಡಿಎಸ್ ಚುನಾವಣೆಯ ಸಮಯದಲ್ಲಿ ಹಾವು ಮುಂಗುಸಿಯಂತೆ ಆಡ್ತಾರೆ. ನೆನ್ನೆ ಕೂಡಾ ಇಂತಹದೊಂದು ಘಟನೆ ನಡೆದಿದ್ದು, 17ನೇ ವಾರ್ಡ ನ ನಾಗರಾಜುರವರ ಕುಮ್ಮಕ್ಕಿನಿಂದ ಘಟನೆ ನಡೆದಿದೆ ಎನ್ನಲಾಗಿದೆ.

ಘಟನೆಯಲ್ಲಿ ಜೆಡಿಎಸ್ ಪಕ್ಷದ ಕಾರ್ಯಕರ್ತನಾಗಿರೋ ಸಫೀರ್, ಯುನಸ್, ಸೈಪ್ ಎಂಬ ಒಂದೇ ಕುಟುಂಬದ ಮೂರು ಮಂದಿ ತಮ್ಮ ಬೆಂಬಲಿಗರು ಕಾಂಗ್ರೇಸ್ ಪಕ್ಷದ ಮುಬಾರಕ್, ನಕೃತ್, ತಾಸೀಮ್, ಎಂಬುವರ ನಡುವೆ ಮಾತಿನ ಚಕಮಕಿ ನಡೆದಿದೆ. ಮಾತು ಮಾತಾಗಿರದೇ ಕೈ ಕೈ ಮೀಲಾಯಿಸಿದ್ದಲ್ಲದೇ ಜೆಡಿಎಸ್ ಕಾರ್ಯಕರ್ತರು ಸೇವಿಂಗ್ ಬ್ಲೇಡ್ ಬಳಸಿ ಕುತ್ತಿಗೆ,ಎದೆ,ಕೈ ಮತ್ತು ಕಾಲುಗಳಿಗೆ ಕಾಂಗ್ರೆಸ್ ಕಾರ್ಯಕರ್ತರ ಮೇಲೆ ಹಲ್ಲೆ ಮಾಡಿದ್ದಾರೆ. ನಂತ್ರ ಕಲ್ಲು, ಇಟ್ಟಿಗೆಯಿಂದಲೂ ಕೂಡಾ ಹಲ್ಲೆ ನಡೆಸಿದ್ದಾರೆ ಎನ್ನಲಾಗಿದ್ದು ರಾತ್ರಿ 10ಗಂಚೆಯ ಸಮಯದಲ್ಲಿ ನಡೆದಿದೆ.

ಸದ್ಯ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಚನ್ನರಾಯಪಟ್ಟಣದ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮುನ್ನೆಚ್ಚರಿಕೆಯಾಗಿ ಟಿಪ್ಪು ಸರ್ಕಲ್ ಬಳಿ ಪೊಲೀಸ್ ತುಕಡಿ ನಿಯೋಜಿಸಲಾಗಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ