ಬೆಂಗಳೂರು, ಆ.29- ಆಸ್ತಿಗಾಗಿ ತಂದೆಯ ಕಣ್ಣನ್ನೇ ಕಿತ್ತ ಪುತ್ರ ಪೆÇಲೀಸ್ ಲಾಕಪ್‍ನಲ್ಲಿ ಪಶ್ಚಾತಾಪ ಪಡುತ್ತಿದ್ದರೆ, ಇತ್ತ ಕಣ್ಣು ಕಳೆದುಕೊಂಡಿರುವ ತಂದೆ ಪರಮೇಶ್ ಅವರು ಆಸ್ಪತ್ರೆಯಲ್ಲಿ ನರಳುತ್ತಿದ್ದಾರೆ.
ಖಾಸಗಿ ಆಸ್ಪತ್ರೆಯಲ್ಲಿ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿರುವ ಪರಮೇಶ್ ಅವರ ಹೇಳಿಕೆ ಪಡೆದಿರುವ ಜೆಪಿನಗರ ಪೆÇಲೀಸರು, ಆರೋಪಿ ಚೇತನ್ ಅಲಿಯಾಸ್ ಅಭಿಷೇಕ್‍ನನ್ನು ತೀವ್ರ ವಿಚಾರಣೆಗೆ ಒಳಪಡಿಸಿದ್ದಾರೆ.
ಪತ್ನಿಯನ್ನು ಕಳೆದುಕೊಂಡು ದುಃಖದಲ್ಲಿದ್ದ ಪರಮೇಶ್ ಅವರು ಇದೀಗ ಮಗನ ಕೌರ್ಯದಿಂದ ತೀವ್ರ ನೋವು ಅನುಭವಿಸುತ್ತಿದ್ದಾರೆ.
ತಂದೆಯೊಂದಿಗೆ ಆಸ್ತಿ ವಿಚಾರ ಪ್ರಸ್ತಾಪಿಸಲು ಮುಂದಾದಾಗ ಅವರು ನನಗೆ ಬಯ್ದಿದ್ದರಿಂದ ಅವರ ಮುಖ ಪರಚಲು ಮುಂದಾದೆ. ಆಗ ಕೈ ಅವರ ಕಣ್ಣಿಗೆ ತಗುಲಿತು. ಕೋಪದ ಬರದಲ್ಲಿ ಕಣ್ಣು ಕಿತ್ತೆ ಎಂದು ವಿಚಾರಣೆಯ ಸಂದರ್ಭದಲ್ಲಿ ಚೇತನ್ ಹೇಳಿದ್ದಾನೆ ಎಂದು ತಿಳಿದುಬಂದಿದೆ.
ಸರ್ಕಾರಿ ನೌಕರಿಯಲ್ಲಿದ್ದ ಪರಮೇಶ್ ಅವರು ತಮ್ಮ ಮೂರು ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಿ ಸಮಾಜದಲ್ಲಿ ಗೌರವಯುತ ಬದುಕು ನಡೆಸುತ್ತಿದ್ದರು. ಮಕ್ಕಳಿಗಾಗಿ ತಮ್ಮ ಸರ್ವಸ್ವವನ್ನು ತ್ಯಾಗ ಮಾಡಿದ ಪರಮೇಶ್ ಜೀವಮಾನವಿಡೀ ದುಡಿದು ಸಂಪಾದಿಸಿದ ಆಸ್ತಿಯನ್ನು ಮೂವರು ಮಕ್ಕಳಿಗೆ ಸಮಾನವಾಗಿ ಹಂಚಿದ್ದರು. ಆದರೆ ಹಿರಿಯ ಪುತ್ರ ಪರಮೇಶ್‍ನ ಅತಿಯಾಸೆಗೆ ಅವರು ತನ್ನೆರಡು ಕಣ್ಣುಗಳನ್ನು ಕಳೆದುಕೊಂಡು ಈಗ ಯಾತನೆ ಅನುಭವಿಸುತ್ತಿದ್ದಾರೆ.
ಪರಮೇಶ್ ಅವರು ಇಬ್ಬರು ಮಕ್ಕಳಿಗೆ ಮದುವೆ ಮಾಡಿದ್ದರು. ಆದರೆ ಹಿರಿಯ ಪುತ್ರ ಚೇತನ್ ಮದುವೆಯಾಗಿರಲಿಲ್ಲ. ಅಗರಬತ್ತಿ ವ್ಯಾಪಾರ ಮಾಡುತ್ತಿದ್ದ ಆತ ಮದ್ಯವ್ಯಸನಿಯಾಗಿದ್ದ. ಇತ್ತೀಚೆಗೆ ಮನೆಯಲ್ಲೆ ಮದ್ಯ ಸೇವಿಸುತ್ತಾ ಕಾಲ ಕಳೆಯುತ್ತಿದ್ದ.
ಜೆ.ಪಿ.ನಗರದ ಶಾಕಾಂಬರಿನಗರದಲ್ಲಿರುವ ಮನೆಯನ್ನು ಹೇಗಾದರೂ ಮಾಡಿ ತನ್ನ ಹೆಸರಿಗೆ ಮಾಡಿಸಿಕೊಳ್ಳಬೇಕು ಎಂಬ ದೃಢ ನಿರ್ಧಾರಕ್ಕೆ ಬಂದಿದ್ದ ಚೇತನ್, ಹಲವು ಬಾರಿ ತಂದೆಯೊಂದಿಗೆ ವಾಗ್ವಾದಕ್ಕೆ ಇಳಿದಿದ್ದ. ಆದರೆ ಮಗನ ಬೇಡಿಕೆಯನ್ನು ಅವರು ಸಾರಾಸಗಟಾಗಿ ತಳ್ಳಿಹಾಕುತ್ತಿದ್ದರು. ಇದರಿಂದ ತಂದೆ-ಮಗನ ಸಂಬಂಧ ಅಷ್ಟಕ್ಕಷ್ಟೆ ಇತ್ತು. ಕಟ್ಟಡದ ಒಂದನೇ ಮಹಡಿಯಲ್ಲಿ ತಂದೆ ನೆಲೆಸಿದ್ದರು. ನೆಲಮಹಡಿಯಲ್ಲಿ ಆರೋಪಿ ಚೇತನ ವಾಸಿಸುತ್ತಿದ್ದ. ಪತ್ನಿಯನ್ನು ಕಳೆದುಕೊಂಡು ದುಃಖದಲ್ಲಿದ್ದ ಪರಮೇಶ್ ಅವರು ಒಬ್ಬರೇ ಮನೆಯಲ್ಲಿ ನೆಲೆಸಿದ್ದರು. ಪುತ್ರನೇ ತಂದೆಯ ಕಣ್ಣು ಕಿತ್ತ ಘಟನೆಯಿಂದ ಇಡೀ ನಗರವೇ ಬೆಚ್ಚಿ ಬಿದ್ದಿದೆ.