ವಿಶ್ವ ಕ್ರಿಕೆಟ್ ನ ದಂತ ಕತೆ ಡೋನಾಲ್ಡ್ ಬ್ರಾಡ್ಮನ್ ಹುಟ್ಟು ಹಬ್ಬದ ವರ್ಷಾಚರಣೆ ಹಿನ್ನೆಲೆಯಲ್ಲಿ ಗೂಗಲ್ ತನ್ನ ಹೋಮ್ಪೇಜ್ನಲ್ಲಿ ಡೂಡಲ್ ಹಾಕಿ ಗೌರವ ಸೂಚಿಸಿದೆ.
ಡೋನಾಲ್ಡ್ ಬ್ರಾಡ್ಮನ್ ಬ್ಯಾಟಿಂಗ್ ಮಾಡುತ್ತಿರುವ ಆ್ಯನಿಮೇಷನ್ ಚಿತ್ರವೊಂದನ್ನ ಹಾಕಿ ” ಸರ್ ಡೋನಾಲ್ಡ್ ಜಾರ್ಜ್” “ದಿ ಡೋನಾಲ್ಡ್ ಬ್ರಾಡ್ಮನ್ ಅವರ 110ನೇ ಜನ್ಮಾದಿನಾಚರಣೆ” ಎಂದು ಬರೆದಿದೆ.
ಬ್ರಾಡ್ಮನ್ ನೆನಸಿಕೊಂಡ ಕ್ರಿಕೆಟ್ ದೇವರು
ಡೋನಾಲ್ಡ್ ಬ್ರಾಡ್ಮನ್ ಅವರ 110 ನೇ ಜನ್ಮದಿನಾಚರಣೆ ಹಿನ್ನಲೆಯಲ್ಲಿ ಅವರನ್ನ ಭೇಟಿಯಾದ ಸಂದರ್ಭವನ್ನ ಗಾಡ್ ಆಫ್ ಕ್ರಿಕೆಟ್ ಸಚಿನ್ ತೆಂಡೂಲ್ಕರ್ ನೆನಪಿಸಿಕೊಂಡಿದ್ದಾರೆ. 20 ವರ್ಷಗಳ ಹಿಂದೆ ಸ್ಫೂರ್ತಿಯ ಚಿಲುಮೆ ಸರ್ ಬ್ರಾಡ್ಮನ್ ಅವರನ್ನ ಭೇಟಿ ಮಾಡಿದ್ದೆ . ಆ ವಿಶೇಷ ಅನುಭವ ಇನ್ನು ಕಣ್ಣಿಗೆ ಕಟ್ಟಿದಂತಿದೆ. ಅವರ
110ನೇ ಹುಟ್ಟುಹಬ್ಬದ ಸಂದರ್ಭದಲ್ಲಿ ಅವರನ್ನ ನೆನಪಿಸಿಕೊಳ್ಳುತ್ತಿದ್ದೇನೆ ಎಂದು ಟ್ವಿಟರ್ ನಲ್ಲಿ ಬರೆದುಕೊಂಡಿದ್ದಾರೆ.
ಆಸ್ಟ್ರೇಲಿಯಾದ ಡೋನಾಲ್ಡ್ ಬ್ರಾಡ್ಮನ್ ವಿಶ್ವ ಕ್ರಿಕೆಟ್ ಕಂಡ ಸರ್ವ ಶ್ರೇಷ್ಠ ಬ್ಯಾಟ್ಸ್ ಮನ್ 52 ಟೆಸ್ಟ್ ಪಂದ್ಯಗಳನ್ನಾಡಿ 6,996 ರನ್ 99.94 ಎವರೇಜ್ ಹೊಂದಿದ್ದಾರೆ. ಒಟ್ಟು 29 ಶತಕ 13 ಅರ್ಧ ಶತಕ 334 ಹೈಯೆಸ್ಟ್ ಸ್ಕೋರ್ ಆಗಿದೆ.