ರೈತರ ರಾಷ್ಟ್ರೀಕೃತ ಬ್ಯಾಂಕುಗಳ ಸಾಲ ಮನ್ನಾ

ಬೆಂಗಳೂರು: ಬಜೆಟ್ ನಲ್ಲಿ ಘೋಷಣೆ ಮಾಡಿದಂತೆ ಸಹಕಾರಿ ಸಾಲದ ಜೊತೆಗೆ ರಾಷ್ಟ್ರೀಕೃತ ಬ್ಯಾಂಕುಗಳ ರೈತರ 2 ಲಕ್ಷ ರೂ ಸಾಲ ಮನ್ನಾ ಮಾಡಲು ರಾಜ್ಯ ಸರ್ಕಾರ ತೀರ್ಮಾನಿಸಿದೆ.

ಜೊತೆಗೆ ರಾಷ್ಟ್ರೀಕೃತ ಬ್ಯಾಂಕುಗಳ ಚಾಲ್ತಿ ಸಾಲ ಕೂಡ ಮನ್ನಾವಾಗಲಿದ್ದು,ಇದರಿಂದ ಸರ್ಕಾರದ ಬೊಕ್ಕಸಕ್ಕೆ32,000 ಕೋಟಿ ರೂ.ಹೊರೆಯಾಗಲಿದೆ.

ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ನೇತೃತ್ವದಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಯಿತು.

ಸಭೆಯ ಬಳಿಕ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಕುಮಾರಸ್ವಾಮಿ ಅವರು,ಮೊದಲು ಸಾಲ ಮನ್ನಾಗೆ ಬ್ಯಾಂಕುಗಳು ಒಪ್ಪಿಗೆ ನೀಡಿದ್ದವು.ನಂತರ ಹಿಂದಕ್ಕೆ ಸರಿದಿದ್ದವು ಎಂದು ತಿಳಿಸಿದರು.

ಸುಸ್ತಿ ಸಾಲ, ಚಾಲ್ತಿ ಸಾಲ 25,000/- ವರೆಗೆ ನಾಲ್ಕು ವರ್ಷದಲ್ಲಿ ಹಂತ ಹಂತವಾಗಿ ಸಾಲ ಮನ್ನಾ ಮಾಡಲಾಗುವುದೆಂದು ಪ್ರಕಟಿಸಿದರು.

ಹಿಂದಿನ ಅವಧಿಯಲ್ಲಿ ಸರ್ಕಾರದಲ್ಲಿ ಮಾಡಿದ ಸಾಲ ಸೇರಿ 43,000 ಕೋಟಿ ಸಾಲ ಇದೆ.ಅದಕ್ಕಾಗಿ ಇಬ್ಬರು ನೋಡೆಲ್ ಅಧಿಕಾರಿ ನೇಮಕ ಮಾಡಿ ಪ್ರೊಸಸ್ ಮಾಡಲು ಸಂಪುಟದಲ್ಲಿ ಚರ್ಚೆ ನಡೆಸಲಾಗಿದೆ ಎಂದರು.

ಆರ್ಥಿಕ ಸಂಪನ್ಮೂಲಗಳ ಹೊಂದಾಣಿಕೆಯನ್ನ ಸರ್ಕಾರದ ಖಜಾನೆಯಿಂದ ಹೊಂದಾಣಿಕೆ ಮಾಡಿಕೊಳ್ಳಲು ಈಗಾಗಲೇ ತೀರ್ಮಾನ ಆಗಿದೆ ಎಂದು ವಿವರಿಸಿದರು.
6,500 ಕೋಟಿ ರೂ. ಸಾಲ ಮನ್ನಾಗಾಗಿಯೇ ತೆಗೆದು ಇಟ್ಟಿದ್ದೀವಿ. 2018-19ಕ್ಕೆ 6500 ಕೋಟಿ ರೂ.2019-20 8656ಕೋಟಿ ರೂ.2020-21 ಕ್ಕೆ 7876ಕೋಟಿ ರೂ.2021-22ಕ್ಕೆ 7231ಕೋಟಿ ರೂ.ಬಡ್ಡಿ ದರ 12% ಬ್ಯಾಂಕುಗಳು ಚಾರ್ಜ್ ಮಾಡಿವೆ. 7419ಕೋಟಿ ರೂ ಬಡ್ಡಿಯನ್ನ ಸರ್ಕಾರ ತುಂಬುತ್ತಿದೆ ಎಂದು ಅಂಕಿ ಅಂಶಗಳ ವಿವರ ನೀಡಿದರು.

ಚಾಲ್ತಿ ಸಾಲ ಇರುವವರಿಗೆ ೨೫ ಸಾವಿರ ಪ್ರೋತ್ಸಾಹಧನ ನೀಡಲಾಗುವುದು. ಒಟ್ಟು ೩೨ ಸಾವಿರ ಕೋಟಿ ಇದರಿಂದ ಸರ್ಕಾರಕ್ಕೆ ಹೊರೆಯಾಗುವುದು. ಆದರೂ ಸರ್ಕಾರ ಸುಸ್ತಿ,ರಿಸ್ಟ್ರಕ್ಚರ್ ಸಾಲ ಮನ್ನಾಗೆ ನಿರ್ಧರಿಸಿದೆ.ಸುಮಾರು ೩೨ ಸಾವಿರ ಕೋಟಿ ಬರಲಿದೆ. ೪ ವರ್ಷಗಳಲ್ಲಿ ಹೇಗೆ ತೀರಿಸಬೇಕೆಂದು ಚರ್ಚೆ ನಡೆದಿದೆ ಎಂದು ಹೇಳಿದರು.

ಇದು ಒಂದು ಕುಟುಂಬಕ್ಕೆ ಅನ್ವಯವಾಗಲಿದೆ. ಋಣಪರಿಹಾರ ಅಧಿನಿಯಮವನ್ನ ೧೯೭೬ ರಲ್ಲಿ ತಂದಿದ್ದರು.ಮಾಜಿ ಮುಖ್ಯಮಂತ್ರಿ ದೇವರಾಜು ಅರಸು ಕಾಲದಲ್ಲಿ ತಂದಿದ್ದರು.ಈ ಆ್ಯಕ್ಟ್ ಅನ್ನ ಜಾರಿಗೆ ತರಲು ಸರ್ಕಾರ ನಿರ್ಧರಿಸಿದ್ದು,ಸುಗ್ರೀವಾಜ್ನೆ ಕೋರಿ ರಾಷ್ಟ್ರಪತಿಗಳಿಗೆ ಶಿಫಾರಸು ಸಂಪುಟ ಸಭೆ ತೀರ್ಮಾನಿಸಿದೆ‌.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ