ವಿವಿಧತೆಯಲ್ಲಿ ಏಕತೆ ಕಾಂಗ್ರೆಸ್ ಚಿಂತನೆ; ದ್ವೇಷವನ್ನು ಹರಡುದು ಬಿಜೆಪಿ ಸಂಸ್ಕೃತಿ: ರಾಹುಲ್ ವಾಗ್ದಾಳಿ

ಬರ್ಲಿನ್ : ಬಿಜೆಪಿ ಮತ್ತು ಆರ್ ಎಸ್ ಎಸ್ ದೇಶ ವಿಭಜಿಸುವ ಮೂಲಕ ದ್ವೇಷವನ್ನು ಬಿತ್ತುತ್ತಿವೆ ಎಂದು ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ವಾಗ್ದಾಳಿ ಮುಂದುವರೆಸಿದ್ದಾರೆ.

ಭಾರತೀಯ ಸಾಗರೋತ್ತರ ಕಾಂಗ್ರೆಸ್ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ವೈವಿಧ್ಯತೆಯಲ್ಲಿ ಏಕತೆ ಕಾಂಗ್ರೆಸ್ ಚಿಂತನೆ. ಕಾಂಗ್ರೆಸ್ ಎಲ್ಲರ ಒಳಿತಿಗಾಗಿ ಕಾರ್ಯನಿರ್ವಹಿಸುತ್ತಿದೆ. ಆದರೆ. ಬಿಜೆಪಿ ಸರ್ಕಾರ ಇದಕ್ಕೆ ವಿರುದ್ಧವಾಗಿ ಕಾರ್ಯನಿರ್ವಹಿಸುತ್ತಿದೆ ಎಂದರು.

ಎನ್ ಡಿಎ ಸರ್ಕಾರದ ನಡೆಯಿಂದ ಭಾರತದಲ್ಲಿ ದ್ವೇಷ ಹರಡುತ್ತಿದೆ. ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಯುವಜನಾಂಗಕ್ಕೆ ಉದ್ಯೋಗ ಇಲ್ಲದಂತಾಗಿದ್ದು, ಭವಿಷ್ಯ ಅತಂತ್ರದಿಂದ ಕೂಡಿದೆ ಎಂದು ಆರೋಪಿಸಿದರು.

ಬಿಜೆಪಿ ಎಲ್ಲೆಡೆ ದ್ವೇಷ ಹರಡುವ ಮೂಲಕ ದೇಶದ ಸಂಸ್ಕೃತಿಯನ್ನು ಹಾಳುಮಾಡುತ್ತದೆ, ಭಾರತವನ್ನು ಪ್ರಗತಿಪಥದಲ್ಲಿ ಕೊಂಡೊಯ್ಯಬೇಕಾಗಿದ್ದು, ಜರ್ಮನಿಯಲ್ಲಿರುವ ಭಾರತೀಯರು ಕಾಂಗ್ರೆಸ್ ಪಕ್ಷ ಬೆಂಬಲಿಸುವಂತೆ ಮನವಿ ಮಾಡಿಕೊಂಡರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ