ಮುಂಬೈ: ಆಂಗ್ಲರ ವಿರುದ್ಧದ ಮುಂದಿನ ಎರಡು ಟೆಸ್ಟ್ ಪಂದ್ಯಗಳಿಗೆ ತಂಡದವನ್ನ ಆಯ್ಕೆ ಸಮಿತಿ ತಂಡವನ್ನ ಪ್ರಕಟಿಸಿದೆ ಯುವ ಬ್ಯಾಟ್ಸ್ ಮನ್‌ಳಾದ ಟೀಂ ಇಂಡಿಯಾದ ಫ್ಯೂಚರ್ ಸ್ಟಾರ್ ಪೃಥ್ವಿ ಶಾ ಮತ್ತು ಆಲ್‌ರೌಂಡರ್ ಹನುಮ ವಿಹಾರಿ ಮಣೆ ಹಾಕಿದೆ.
ಮೊದಲೆರಡು ಟೆಸ್ಟ್ ಪಂದ್ಯಗಳಲ್ಲಿ ಫ್ಲಾಪ್ ಆಗಿದ್ದ ಸ್ಟೈಲಿಶ್ ಓಪನರ್ ಮುರಳಿ ವಿಜಯ್ ಮತ್ತು ಚೈನಾಮನ್ ಸ್ಪಿನ್ನರ್ ಕುಲ್‌ದೀಪ್ ಯಾದವ್ ಗೆ ತಂಡದಿಂದ ಗೇಟ್ ಪಾಸ್ ನೀಡಲಾಗಿದೆ. ಈ ಇಬ್ಬರು ಆಟಗಾರರು ಮುಂಬರುವ ಆಸ್ಟ್ರೇಲಿಯಾ ಎ ತಂಡದ ವಿರುದ್ಧ ನಡೆಯಲಿರುವ ನಾಲ್ಕು ದಿನಗಳ ಪಂದ್ಯದಲ್ಲಿ ಆಡಲಿದ್ದಾರೆ.
ಫೃಥ್ವಿ ಶಾ ಎರಡು ವರ್ಷಗಳ ಹಿಂದೆ ತಮ್ಮ ೧೬ನೇ ವಯಸ್ಸಿನಲ್ಲೆ ಮುಂಬೈ ಪರ ರಣಜಿ ಟೂರ್ನಿಯನ್ನ ಆಡಿ ಗಮನ ಸೆಳೆದಿದ್ದರು. ೧೪ ಫಸ್ಟ್ ಕ್ಲಾಸ್ ಕ್ರಿಕೆಟ್ ಟೂರ್ನಿ ಆಡಿರುವ ೧,೪೧೮ ರನ್ ಗಳಿಸಿದ್ದಾರೆ. ಇದರಲ್ಲಿ ೭ ಶತಕ ಹಾಗೂ ೫ ಶತಕ ಒಳಗೊಂಡಿದೆ. ಇತ್ತಿಚೆಗೆ ಇಂಗ್ಲೆಂಡ್ ಎ ತಂಡದ ವಿರುದ್ಧ ೧೦ ಇನ್ನಿಂಗ್ಸ್‌ಗಳಿಂದ ೬೦೩ ರನ್ ಬಾರಿಸಿದ್ದರು.
ಇನ್ನು ಹೈದ್ರಾಬಾದ್ ಬ್ಯಾಟ್ಸ್ ಮನ್ ಹನುಮ ವಿಹಾರಿ ಫಸ್ಟ್ ಕ್ಲಾಸ್ ಕ್ರಿಕೆಟ್‌ನಲ್ಲಿ ೫,೧೪೨ ರನ್ ಬಾರಿಸಿದ್ದು ೧೫ ಶತಕ ಮತ್ತು ೨೪ ಅರ್ಧಶತಕಗಳನ್ನ ಬಾರಿಸಿದ್ದಾರೆ. ಇತ್ತಿಚೆಗೆ ಇಂಡಿಯಾ ಎ ಪರ ದಕ್ಷಿಣ ಆಫ್ರಿಕಾ ವಿರುದ್ಧ ಸಾಲಿಡ್