ಹೊಸ ದಾಖಲೆ ಬರೆದ ಟೀಂ ಇಂಡಿಯಾ, ಕ್ಯಾಪ್ಟನ್ ಕೊಹ್ಲಿ

ನಾಟಿಂಗ್ಯಾಮ್: ಟ್ರೆಂಟ್ ಬ್ರಿಡ್ಜ್ ಅಂಗಳದಲ್ಲಿ  ಟೀಂ ಇಂಡಿಯಾ ಗೆಲ್ಲುವ ಮೂಲಕ ಟೀಂ ಇಂಡಿಯಾ ಮತ್ತು ಕ್ಯಾಪ್ಟನ್ ವಿರಾಟ್ ಕೊಹ್ಲಿ ಹೊಸ ದಾಖಲೆಗಳನ್ನ ಬರೆದಿದ್ದಾರೆ.

ಅತಿ ಹೆಚ್ಚು ಟೆಸ್ಟ್ ಪಂದ್ಯ ಗೆದ್ದ ಮೂರನೇ ನಾಯಕ

ಆಂಗ್ಲರ ವಿರುದ್ಧ ಮೂರನೇ ಟೆಸ್ಟ್ ಪಂದ್ಯ ಗೆಲ್ಲುವ ಮೂಲಕ ಕ್ಯಾಪ್ಟನ್ ಕೊಹ್ಲಿ ನಾಯಕತ್ವದಲ್ಲಿ ಹೊಸ ದಾಖಲೆ ಬರೆದಿದ್ದಾರೆ. ೩೮ ಟೆಸ್ಟ್ ಪಂದ್ಯಗಳಲ್ಲಿ ೨೨ ಪಂದ್ಯಗಳನ್ನ ಗೆದ್ದ ಮೂರನೇ ನಾಯಕನೆಂಬ ಹೆಗ್ಗಳಿಕೆಗೆ ಪಾತ್ರರಾದರು. ಆಸ್ಟ್ರೆಲಿಯಾದ ಮಾಜಿ ನಾಯಕರುಗಳಾದ ರಿಕಿ ಪಾಂಟಿಂಗ್ ೩೦, ಸ್ಟೀವ್ ವ್ಹಾ ೨೭ ಪಂದ್ಯಗಳನ್ನ ಗೆದ್ದಿದ್ದರು.

ಗಂಗೂಲಿ ದಾಖಲೆ ಹಿಂದಿಕ್ಕಿದ ಅಗ್ರೆಸಿವ್ ಕ್ಯಾಪ್ಟನ್

ಟ್ರೆಂಟ್‌ಬ್ರಿಡ್ಜ್ ಟೆಸ್ಟ್ ಪಂದ್ಯ ಗೆಲ್ಲುವ ಮೂಲಕ ನಾಯಕ ವಿರಾಟ್ ಕೊಹ್ಲಿ ಮಾಜಿ ಕ್ಯಾಪ್ಟನ್ ಸೌರವ್ ಗಂಗೂಲಿ ದಾಖಲೆಯನ್ನ ಅಳಿಸಿ ಹಾಕಿದ್ದಾರೆ.

ಸೌರವ್ ಗಂಗೂಲಿ ೨೯ ಟೆಸ್ಟ್ ಪಂದ್ಯಗಳಿಂದ ೨೧ ಪಂದ್ಯಗಳನ್ನ ಗೆದ್ದರೆ

ವಿರಾಟ್ ಕೊಹ್ಲಿ ೩೮ ಟೆಸ್ಟ್ ಪಂದ್ಯಗಳಿಂದ ೨೨ ಪಂದ್ಯಗಳನ್ನ ಗೆದ್ದುಕೊಂಡಿದ್ದಾರೆ. ಮಾಜಿ ನಾಯಕ ಎಂ.ಎಸ್.ಧೋನಿ ೬೦ ಪಂದ್ಯಗಳಿಂದ ೨೭ ಪಂದ್ಯಗಳನ್ನ ಗೆದಿದ್ದಾರೆ.

ಅತಿ ದೊಡ್ಡ ಗೆಲುವು ಕಂಡ ಟೀಂ ಇಂಡಿಯಾ

ನಿನ್ನೆ ಆಂಗ್ಲರ ವಿರುದ್ಧ ಕೊಹ್ಲಿ ಪಡೆ ಗೆಲ್ಲುವ ಮೂಲಕ ಆಂಗ್ಲರ ವಿರುದ್ಧ ಮೂರನೇ ಅತಿ ದೊಡ್ಡ ಗೆಲುವು ಕಂಡಿದೆ. ಟ್ರೆಂಟ್ ಬ್ರಿಡ್ಜ್ ಅಂಗಳದಲ್ಲಿ  ಭಾರತ ೨೦೩ ರನ್‌ಗಳ ಗೆಲುವು ಕಂಡಿದೆ. ಈ ಹಿಂದೆ ೧೯೮೬ರಲ್ಲಿ ಲೀಡ್ಸ್‌ನಲ್ಲಿ ೨೭೯ ರನ್ ಅಂತರದಿಂದ ಮೊದಲ ಬಾರಿಗೆ ಭಾರೀ ಅಂತರದ ಗೆಲುವನ್ನ ಕಂಡಿತ್ತು. ನಂತರ ೨೦೧೬ರಲ್ಲಿ ವಿಜಾಗ್‌ನಲ್ಲಿ ನಲ್ಲಿ ೨೪೬ ರನ್‌ಗಳ ಅಂತರದಿಂದ ಗೆಲುವು ಪಡೆದಿತ್ತು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ