ಕೆಂಗೇರಿ, ಆ.21- ಮಡಿಕೇರಿ ಹಾಗೂ ಕೊಡಗು ನೆರೆ ಸಂತ್ರಸ್ತರ ಸಂಕಷ್ಟಗಳಿಗೆ ಸ್ಪಂದಿಸಲು ಯಶವಂತಪುರ ವಿಧಾನಸಭಾ ಕ್ಷೇತ್ರದ ಬಿಜೆಪಿ ಕಾರ್ಯಕರ್ತರು ಸಾರ್ವಜನಿಕರಿಂದ ದೇಣಿಗೆ ಸಂಗ್ರಹಿಸಿ ಕಳುಹಿಸಿಕೊಟ್ಟರು.
ಸಾರ್ವಜನಿಕರು ಹಾಗೂ ಬಿಜೆಪಿ ಮುಖಂಡರು ಸೇರಿದಂತೆ 15 ಶಕ್ತಿ ಕೇಂದ್ರಗಳ ವತಿಯಿಂದ ದೇಣಿಗೆ ಸಂಗ್ರಹಿಸಿ 4 ಲಾರಿಗಳಲ್ಲಿ 4 ಟನ್ ಅಕ್ಕಿ, 6 ಲಕ್ಷ ಬೆಲೆ ಬಾಳುವ ಬಟ್ಟೆ, 12 ಲಕ್ಷ ದಿನಬಳಕೆಯ ಸಾಮಗ್ರಿಗಳನ್ನು ಸಂಗ್ರಹಿಸಿ 44 ಕಾರ್ಯಕರ್ತರು ತೆರಳಿದರು.
ಕ್ಷೇತ್ರದ ಬಿಜೆಪಿ ಅಧ್ಯಕ್ಷ ಸಿ.ಎಂ.ಮಾರೆÉೀಗೌಡ, ಬಿಬಿಎಂಪಿ ಸದಸ್ಯರಾದ ವಿ.ವಿ.ಸತ್ಯನಾರಾಯಣ, ಶಾರದ ಮುನಿರಾಜು, ಮಾಜಿ ಸದಸ್ಯ ರ.ಆಂಜನಪ್ಪ ನಗರ ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿಗಳಾದ ಜಿ.ರಮೇಶ್, ಸುಧೀರ್, ಸೌಮ್ಯಭಾರ್ಗವ, ನವೀನ್, ಪ್ರೇಮನಾಗಯ್ಯ, ಸಂತೋಷ್ ಹಾಗೂ ಇನ್ನಿತರ ಮುಖಂಡರ ಸಹಕಾರದೊಂದಿಗೆ ದೇಣಿಗೆ ಸಂಗ್ರಹಿಸಿ ಮಡಿಕೇರಿಗೆ ಕಳುಹಿಸಿಕೊಡಲಾಯಿತು. ಸಾರ್ವಜನಿಕರಿಂದ ಸಂಗ್ರಹವಾಗಿರುವ ಸುಮಾರು ಐದು ಲಕ್ಷ ಹಣವನ್ನು ಸೇವಾ ಭಾರತಿ ಟ್ರಸ್ಟ್ಗೆ ಹಸ್ತಾಂತರ ಮಾಡಲಾಯಿತು.
ಮಡಿಕೇರಿಯ ಸಹೋದರರು ಮನೆ ನಿರ್ಮಿಣ ಮಾಡುವ ಸಂದರ್ಭದಲ್ಲಿ ಮತ್ತಷ್ಟು ಆರ್ಥಿಕ ನೆರವನ್ನು ದೊರಕಿಸಿಕೊಡಲಾಗುವುದು ಎಂದು ಯಶವಂತಪುರ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಧ್ಯಕ್ಷ ಮಾರೆಗೌಡ ತಿಳಿಸಿದರು.