ಫ್ರಿಡ್ಜ್‌ನಲ್ಲಿ ಪತ್ನಿ ಶವ, ಸೂಟ್‌ಕೇಸ್‌ನಲ್ಲಿ ಹೆಣ್ಣು ಮಕ್ಕಳಶವವಿಟ್ಟು ಆತ್ಮಹತ್ಯೆಗೆ ಶರಣಾದ ವ್ಯಕ್ತಿ

ಅಲಹಾಬಾದ್:ಆ-21: ಪತ್ನಿಯ ಶವ ಫ್ರಿಡ್ಜ್‌ನಲ್ಲಿ, ಹೆಣ್ಣು ಮಕ್ಕಳಿಬ್ಬರ ಶವ ಸೂಟ್‌ಕೇಸ್‌ನಲ್ಲಿ, ಮತ್ತೊಬ್ಬ ಮಗಳ ದೇಹ ಕೋಣೆಯೊಂದರಲ್ಲಿಟ್ಟು ತಂದೆ ಆತ್ಮಹತ್ಯೆಗೆ ಶರಣಾಗಿರುವ ಭೀಕರ ಘಟನೆ ಅಲಹಾಬಾದ್ ಧೂಮ್‌ಗಂಜ್‌ ನಲ್ಲಿ ನಡೆದಿದೆ.

ಬಾಗಿಲು ಒಡೆದು ಮನೆಯೊಳಗೆ ಪ್ರವೇಶಿಸಿದಾಗ ಈ ಭಯಕಂರ ದೃಶ್ಯಗಳನ್ನು ಕಂಡ ಪೊಲೀಸ್‌ ಅಧಿಕಾರಿಗಳೇ ಬೆಚ್ಚಿ ಬಿದ್ದಿದ್ದಾರೆ.

ಅಲಹಾಬಾದ್‌ನ ಹಿರಿಯ ಎಸ್‌ಪಿ ನಿತಿನ್‌ ತಿವಾರಿ ಅವರು ಸ್ಥಳಕ್ಕಾಗಮಿಸಿ ಪರಿಶೀಲನೆ ನಡೆಸಿದ್ದು, ನೇಣು ಬಿಗದ ಸ್ಥಿತಿಯಲ್ಲಿ ಮನೋಜ್​ ಕುಮಾರ್​ ಎಂಬವರ ದೇಹ ಪತ್ತೆಯಾಗಿದೆ. ಆತನೇ ಹೆಂಡತಿ ಹಾಗೂ ಮಕ್ಕಳನ್ನು ಕೊಲೆ ಮಾಡಿ ಫ್ರಿಡ್ಜ್​, ಅಲ್ಮೆರಾ, ಸ್ಯೂಟ್​ಕೇಸ್​ನಲ್ಲಿ ಮೃತದೇಹಗಳನ್ನು ಇಟ್ಟಿದ್ದಾನೆ. ಕೌಟುಂಬಿಕ ಜಗಳ ಅಥವಾ ಮೇಲಿನ ಪತ್ನಿಅನುಮಾನದಿಂದ ವ್ಯಕ್ತಿ ಈ ಕೃತ್ಯ ಎಸಗಿದ್ದಾನೆ ಎಂಬುದು ತಿಳಿದುಬಂದಿದೆ ಎಂದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ