ಉನ್ನತ ಶಿಕ್ಷಣ ಸಚಿವ ಜಿ.ಟಿ.ದೇವೇಗೌಡರುಮೈಸೂರು ಮುಕ್ತ ವಿವಿಯಿಂದ ಪದವಿ ಪಡೆಯಲಿ: ಬಸವರಾಜರಾಯರೆಡ್ಡಿ

 

ಬೆಂಗಳೂರು, ಆ.14-ಉನ್ನತ ಶಿಕ್ಷಣ ಸಚಿವ ಜಿ.ಟಿ.ದೇವೇಗೌಡ ಅವರು ಮೈಸೂರು ಮುಕ್ತ ವಿಶ್ವವಿದ್ಯಾನಿಲಯದಿಂದ ಪದವಿ ಪಡೆದುಕೊಳ್ಳಲಿ ಎಂದು ಮಾಜಿ ಸಚಿವ ಬಸವರಾಜರಾಯರೆಡ್ಡಿ ಸಲಹೆ ನೀಡಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿ.ಟಿ.ದೇವೇಗೌಡರು ಓದಿಲ್ಲ ಎಂಬ ಕೀಳರಿಮೆಯಿಂದ ಬಳಲುವುದು ಬೇಡ. ಅವರ ಊರಿನಲ್ಲಿ ಮುಕ್ತ ವಿವಿ ಇದೆ. ಸ್ನಾತಕೋತ್ತರ ಪದವಿ ಪಡೆದುಕೊಳ್ಳಲಿ. ಜಿ.ಟಿ.ದೇವೇಗೌಡ ಎಂ.ಎ ಎಂದು ಕರೆಸಿಕೊಳ್ಳಬಹುದು. ಓದದೆ ಇರುವುದು ಅಪರಾಧವಲ್ಲ, ಓದಿದವರಲ್ಲಿ ಎಷ್ಟೋ ಜನ ಕ್ರಿಮಿನಲ್‍ಗಳಿದ್ದಾರೆ ಎಂದು ಹೇಳಿದರು.
ಜಿ.ಟಿ.ದೇವೇಗೌಡರು ಓದಿಲ್ಲ ಎಂಬ ಹಿಂಜರಿಕೆ ಅನುಭವಿಸುವ ಅಗತ್ಯವಿಲ್ಲ. ಅಗತ್ಯವಿದ್ದರೆ ಮುಕ್ತ ವಿಶ್ವವಿದ್ಯಾನಿಲಯದಿಂದ ಒಂದು ಪದವಿ ಪಡೆದುಕೊಳ್ಳಲಿ ಮತ್ತು ಉನ್ನತ ಶಿಕ್ಷಣ ಇಲಾಖೆಯ ಯಾವುದೇ ಸಭೆಗಳಲ್ಲಾದರೂ ಸರಿ ಕನ್ನಡದಲ್ಲೇ ಮಾತನಾಡಲಿ. ಕನ್ನಡ ಒಂದು ಸಮೃದ್ಧ ಭಾಷೆ ಎಂದು ಸಲಹೆ ನೀಡಿದರು.
ಈ ಬಾರಿ ಲೋಕಸಭೆ ಚುನಾವಣೆಯಲ್ಲಿ ತಾವು ಸ್ಪರ್ಧಿಸುವುದಿಲ್ಲ. ಈಗಾಗಲೇ 12 ಚುನಾವಣೆಗಳನ್ನು ಎದುರಿಸಿದ್ದೇನೆ. 7 ಚುನಾವಣೆಯಲ್ಲಿ ಗೆದ್ದಿದ್ದೇನೆ. ಸಂಸದನಾಗಿ ಕೆಲಸ ಮಾಡಿ ಸಾಕಾಗಿ ಹೋಗಿದೆ. ಮುಂದಿನ ಐದು ವರ್ಷಕ್ಕೆ ಎದುರಾಗುವ ವಿಧಾನಸಭೆ ಚುನಾವಣೆವರೆಗೂ ಕಾಯುತ್ತಿರುತ್ತೇನೆ ಎಂದು ಹೇಳಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ