ಸತೀಶ್ ನೀನಾಸಂ ಮತ್ತು ರಚಿತಾ ರಾಮ್ ನಟನೆಯ ಮಹೇಶ್ ಕುಮಾರ್ ನಿರ್ದೇಶನದ ಅಯೋಗ್ಯ ಚಿತ್ರದ ಬಹುತೇಕ ಶೂಟಿಂಗ್ ನಡೆದಿ ಮಂಡ್ಯದಲ್ಲಿ. ಚಿತ್ರದ ನಾಯಕಿ ರಚಿತಾ ರಾಮ್ ಮಂಡ್ಯದ ಜನತೆಯೊಂದಿಗೆ ಆಪ್ತವಾಗಿದ್ದಾರಂತೆ. ಎಷ್ಟರ ಮಟ್ಟಿಗೆ ಎಂದರೆ ಚಿತ್ರತಂಡದವರಿಗೆ ಒಂದು ಅಸಮಾನ್ಯ ಮನವಿಯನ್ನು ಮಾಡಿಕೊಂಡಿದ್ದಾರೆ. ಮಂಡ್ಯದ ಸುಜಾತಾ ಥಿಯೇಟರ್ ಹತ್ತಿರ ಚಿತ್ರೀಕರಣ ಮಾಡಿರುವುದರಿಂದ ಇಲ್ಲಿಯೇ ಚಿತ್ರವನ್ನು ಬಿಡುಗಡೆ ಮಾಡುವಂತೆ ನಿರ್ಮಾಪಕರಿಗೆ ರಚಿತಾ ರಾಮ್ ಮನವಿ ಮಾಡಿದ್ದಾರಂತೆ.ಮಂಡ್ಯದ ಸ್ಥಳೀಯ ಜನರೊಂದಿಗೆ ಅಲ್ಲಿ ರಚಿತಾ ರಾಮ್ ಚಿತ್ರ ವೀಕ್ಷಿಸಲಿದ್ದಾರೆ.ಚಿತ್ರೀಕರಣ ಒಂದು ಕಲಿಕೆಯ ಅನುಭವದಂತಿತ್ತು. ಅದು ಆರಂಭದಿಂದ ಕೊನೆಯವರೆಗೂ ಸಹ. ಸಾವಿರಾರು ಮಂದಿ ಚಿತ್ರೀಕರಣ ನೋಡಲು ಬರುತ್ತಿದ್ದರು, ಅವರೆಲ್ಲರೂ ಬಂದು ನಮ್ಮನ್ನು ಮಾತನಾಡಿಸುತ್ತಿದ್ದರು. ಸೆಲ್ಫಿ ತೆಗೆದುಕೊಂಡು ಅವರನ್ನು ಮಾತನಾಡಿಸಿದರೆ ಅವರಿಗೆ ಬಹಳ ಖುಷಿಯಾಗುತ್ತಿತ್ತು. ಮಂಡ್ಯದ ಜನ ಕಬ್ಬಿನ ಸಿಹಿಯಂತೆ ಒಳ್ಳೆಯ ಗುಣ ಹೊಂದಿದ್ದಾರೆ ಎನ್ನುತ್ತಾರೆ ರಚಿತಾ ರಾಮ್.ಚಿತ್ರೋದ್ಯಮದಲ್ಲಿ 5 ವರ್ಷಗಳನ್ನು ಕಳೆದು ಇಲ್ಲಿನ ಜನರ ಪ್ರೀತಿ, ವಿಶ್ವಾಸ ಪಡೆದಿರುವುದಕ್ಕೆ ನನಗೆ ಅತೀವ ಸಂತಸವಾಗುತ್ತಿದೆ. ಮಂಡ್ಯ ಶೈಲಿಯಲ್ಲಿ ಮಾತನಾಡುವುದನ್ನು ಕೇಳಿ ಇನ್ನೂ ಹೆಚ್ಚು ಸಂತೋಷವಾಯಿತು. ಚಿತ್ರ ನಿರ್ದೇಶಕ ಮತ್ತು ನಟ ಸತೀಶ್ ನೀನಾಸಂ ಇಬ್ಬರೂ ಮಂಡ್ಯದವರಾಗಿರುವುದರಿಂದ ಭಾಷೆ ಕಲಿಯುವುದು ಇನ್ನೂ ಸುಲಭವಾಯಿತು. ಮಂಡ್ಯದ ಹಳ್ಳಿಯ ಸಾಂಪ್ರದಾಯಿಕ ಹೆಣ್ಣುಮಗಳ ಪಾತ್ರವನ್ನು ಅಚ್ಚುಕಟ್ಟಾಗಿ ನಿರ್ವಹಿಸಲು ಸಾಧ್ಯವಾಯಿತು ಎನ್ನುತ್ತಾರೆ.
Seen By: 157 ಬೆಂಗಳೂರು: ದ್ವಾರಕೀಶ್ ಚಿತ್ರ ಬ್ಯಾನರ್ನ 52ನೇ ಸಿನಿಮಾದಲ್ಲಿ ಸೆಂಚ್ಯುರಿ ಸ್ಟಾರ್ ನಟಿಸುತ್ತಿದ್ದು ದಕ್ಷಿಣ ಭಾರತದ ಖ್ಯಾತ ನಿರ್ದೇಶಕರ ಪಿ,ವಾಸು ನಿರ್ದೇಶಿಸಲಿದ್ದಾರೆ. ಈ ಹಿಂದೆ ಡಾ, [more]
July 25, 2018VDಮನರಂಜನೆComments Off on ರಚಿತಾ ರಾಮ್ ಗೆ ಹಲವು ಪ್ರಥಮಗಳ ದಾಖಲೆಯಾಗುತ್ತಿದೆ ರುಸ್ತುಂ ಚಿತ್ರ!
Seen By: 102 ಬೆಂಗಳೂರು: ರವಿವರ್ಮ ಪ್ರಥಮ ಬಾರಿಗೆ ನಿರ್ದೇಶಕರಾಗಿ ರುಸ್ತುಂ ಸಿನಿಮಾ ಮೂಲಕ ಎಂಟ್ರಿ ಪಡೆಯುತ್ತಿದ್ದಾರೆ,ಜಯಣ್ಣ ಪ್ರೊಡಕ್ಷನ್ ಅಡಿಯಲ್ಲಿ ಹಲವು ಸ್ಟಾರ್ ನಟರು ರುಸ್ತುಂ ನಲ್ಲಿ [more]