ರಚಿತಾ ರಾಮ್ ಗೆ ಹಲವು ಪ್ರಥಮಗಳ ದಾಖಲೆಯಾಗುತ್ತಿದೆ ರುಸ್ತುಂ ಚಿತ್ರ!

ಬೆಂಗಳೂರು: ರವಿವರ್ಮ ಪ್ರಥಮ ಬಾರಿಗೆ  ನಿರ್ದೇಶಕರಾಗಿ ರುಸ್ತುಂ ಸಿನಿಮಾ ಮೂಲಕ ಎಂಟ್ರಿ ಪಡೆಯುತ್ತಿದ್ದಾರೆ,ಜಯಣ್ಣ ಪ್ರೊಡಕ್ಷನ್ ಅಡಿಯಲ್ಲಿ ಹಲವು ಸ್ಟಾರ್ ನಟರು ರುಸ್ತುಂ ನಲ್ಲಿ ನಟಿಸುತ್ತಿದ್ದಾರೆ, ಶಿವರಾಜ್ ಕುಮಾರ್, ಶ್ರದ್ಧಾ ಶ್ರೀನಾಥ್ ಮತ್ತು ಬಾಲಿವುಡ್ ಹೀರೋ ವಿವೇಕ್ ಒಬೇರಾಯ್ ನಟಿಸುತ್ತಿದ್ದಾರೆ. ವಿವೇಕ್ ಒಬೇರಾಯ್ ಮೊದಲ ಬಾರಿಗೆ ಕನ್ನಡ ಸಿನಿಮಾದಲ್ಲಿ ನಟಿಸುತ್ತಿದ್ದಾರೆ.
ರುಸ್ತುಂ ಗೆ ನಾಯಕಿಯಾಗಿ ಡಿಂಪಲ್ ಕ್ವೀನ್ ರಚಿತಾ ರಾಮ್ ನಟಿಸುತ್ತಿದ್ದಾರೆ.ವಿವೇಕ್ ಮತ್ತು ರಚಿತಾ ಆಗಸ್ಟ್ ತಿಂಗಳಲ್ಲಿ ಶೂಟಿಂಗ್ ನಲ್ಲಿ ಭಾಗವಹಿಸಲಿದ್ದಾರೆ.
ಮೊದಲ ಬಾರಿಗೆ ಕನ್ನಡದಲ್ಲಿ ನಟಿಸುತ್ತಿರುವ ಬಾಲಿವುಡ್ ನಟ ವಿವೇಕ್ ಜೊತೆ ಬೆಳ್ಳಿಪರದೆ ಹಂಚಿಕೊಳ್ಳುತ್ತಿರುವುದು ನನ್ನ ಅದೃಷ್ಟ ಎಂದು ಹೇಳಿದ್ದಾರೆ, ರವಿವರ್ಮಾ ಮತ್ತು ಜಯಣ್ಣ ಕಾಂಬಿನೇಷನ್ ನ ಮೊದಲ ಚಿತ್ರವಾಗಿದೆ,  ಶಿವರಾಜ್ ಕುಮಾರ್  ಚಿತ್ರಗಳನ್ನು  ನೋಡುತ್ತಾ ನಾನು ಬೆಳೆದೆ, ಸೆಂಚ್ಯ ಸ್ಟಾರ್ ಜೊತೆ ಮೊದಲ ಬಾರಿಗೆ ನಾನು ನಟಿಸುತ್ತಿದ್ದೇನೆ ಎಂದು ತಿಳಿಸಿದ್ದಾರೆ.  ಶಿವರಾಜ್‌ಕುಮಾರ್ ಹಾಗೂ ಶ್ರದ್ಧಾ ಶ್ರೀನಾಥ್ ಜೋಡಿಯಾಗಿ ಕಾಣಿಸಿಕೊಳ್ಳುತ್ತಿರುವ ಈ ಚಿತ್ರದ ಶೂಟಿಂಗ್ ಭರದಿಂದ ಸಾಗುತ್ತಿದೆ.
ಮಹೇಂದ್ರನ್, ತೆಲುಗು ನಟ ಹರೀಶ್ ಉತ್ತಮನ್, ಅರ್ಜುನ್ ಗೌಡ ಸೇರಿದಂತೆ ಹಲವರು ನಟಿಸಿದ್ದಾರೆ.

 

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ