ಬೆಂಗಳೂರು,ಆ.11- ಮುಂಬರುವ ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ರಾಜಕೀಯ ಚಟುವಟಿಕೆಗಳು ಗರಿಗೆದರಿದ್ದು ಬೆಂಗಳೂರು ನಗರವನ್ನು ಬಿಜೆಪಿ ಪ್ರಮುಖ ಕೇಂದ್ರವನ್ನಾಗಿಟ್ಟುಕೊಂಡು ಕಾರ್ಯತಂತ್ರ ರೂಪಿಸಲಿದೆ.
ಕೇವಲ ರಾಜ್ಯ ಲೋಕಸಭೆ ಚುನಾವಣೆಗೆ ಮಾತ್ರವಲ್ಲ, ದಕ್ಷಿಣ ಭಾರತ ರಾಜ್ಯಗಳ ಲೋಕಸಭೆ ಚುನಾವಣೆಗೆ ಬಿಜೆಪಿ ಚಾಣಾಕ್ಯ ಅಮಿತ್ ಷಾ ಇಲ್ಲಿಂದಲೇ ರಣತಂತ್ರ ರೂಪಿಸಲಿದ್ದಾರೆ. ದಕ್ಷಿಣ ರಾಜ್ಯಗಳಲ್ಲಿ ಪಕ್ಷ ಹೆಚ್ಚು ಸೀಟುಗಳನ್ನು ಗೆಲ್ಲಬೇಕೆಂದು ಈಗಾಗಲೇ ಪಕ್ಷ ನಾಯಕರಿಗೆ ಸೂಚಿಸಿದ್ದಾರೆ.
ಈ ಹಿನ್ನೆಲೆಯಲ್ಲಿ ಅಮಿತ್ ಷಾ ತಂಡ ನಾಯಕರ ಜೊತೆ ನಿರಂತರ ಸಂಪರ್ಕದಲ್ಲಿರುತ್ತದೆ, ಚುನಾವಣಾ ಕಾರ್ಯತಂತ್ರ ಬದಲಾವಣೆ ಮಾಡುತ್ತಿರುತ್ತದೆ. ದಕ್ಷಿಣದ ಕೇರಳ, ತಮಿಳುನಾಡು, ಆಂಧ್ರಪ್ರದೇಶ, ಕರ್ನಾಟಕ, ತೆಲಂಗಾಣ ರಾಜ್ಯಗಳ ಚುನಾವಣಾ ತಂತ್ರವನ್ನು ಅಮಿತ್ ಶಾ ಕರ್ನಾಟಕದಲ್ಲೇ ಸಿದ್ಧಪಡಿಸಲಿದ್ದಾರೆ. ಬೆಂಗಳೂರಿನಲ್ಲಿಯೇ ತಮ್ಮ ಕಚೇರಿಯನ್ನು ಅವರು ಹೊಂದಿದ್ದಾರೆ.
2018ರ ಕರ್ನಾಟಕ ವಿಧಾನಸಭೆ ಚುನಾವಣೆ ಈಗಷ್ಟೇ ಮುಗಿದಿದೆ. ಚುನಾವಣೆ ವೇಳೆ ಅಮಿತ್ ಷಾ, ಶಿವಾನಂದ ಸರ್ಕಲ್ ಬಳಿ ಮನೆಯೊಂದನ್ನು ಬಾಡಿಗೆಗೆ ಪಡೆದಿದ್ದರು. ಆ ಮನೆಯಲ್ಲಿಯೇ ಲೋಕಸಭೆ ಚುನಾವಣೆಯ ಕಾರ್ಯತಂತ್ರಗಳೂ ಕೂಡ ಸಿದ್ಧವಾಗಲಿವೆ.
ಅದಾಗಲೇ ಕಚೇರಿ ಆರಂಭಗೊಂಡಿದ್ದು, ಅಲ್ಲಿ ತಂಡ ತನ್ನ ಕಾರ್ಯ ನಿರ್ವಹಿಸುತ್ತಿದೆ. ಯಾವುದೇ ತಾಂತ್ರಿಕ ನೆರವು ಬೆಂಗಳೂರಿನಲ್ಲಿ ಬೇಗ ಲಭ್ಯವಾಗುವುದರಿಂದ ಅಮಿತ್ ಷಾ ಉದ್ಯಾನನಗರಿಯಲ್ಲಿ ಹೆಡ್ ಕ್ವಾಟ್ರರ್ಸ್ ಮಾಡಿಕೊಂಡಿದ್ದು, ಮೂರು ಜನರ ತಂಡ ಬೆಂಗಳೂರಿನಲ್ಲಿ ಬೀಡುಬಿಡಲಿದೆ. ಈ ತಂಡಗಳು ಪಕ್ಷದ ರಾಷ್ಟ್ರೀಯ ಕಚೇರಿ ಜೊತೆ ನಿರಂತರ ಸಂಪರ್ಕದಲ್ಲಿ ಇರುತ್ತದೆ. ದಕ್ಷಿಣದ ಯಾವ ರಾಜ್ಯದಲ್ಲಿ ಯಾವ ಕಾರ್ಯತಂತ್ರ ಅನುಸರಿಸಬೇಕು ಎಂಬ ಸೂಚನೆಯನ್ನು ಅಲ್ಲಿಂದಲೇ ತಂಡಕ್ಕೆ ರವಾನೆ ಆಗಲಿದೆ.
ವಿಧಾನಸಭೆ ಚುನಾವಣೆಗಾಗಿ ಬೆಂಗಳೂರಿನಲ್ಲಿ ಬೀಡುಬಿಟ್ಟಿದ್ದ ಅಮಿತ್ ಷಾ ಮತ್ತವರ ವೃತ್ತಿಪರ ಕಾರ್ಯತಂಡ ಇಲ್ಲಿದ್ದುಕೊಂಡೇ ಕಾರ್ಯತಂತ್ರ ಮುಂದುವರಿಸಲಿದೆ. ಹೀಗಾಗಿ ಬೆಂಗಳೂರು ಲೋಕಸಭೆ ಚುನಾವಣೆಯ ಪ್ರಮುಖ ವೇದಿಕೆಯಾಗಲಿದೆ.
ಅಮಿತ್ ಷಾ ತಂಡ ದಕ್ಷಿಣ ಭಾರತದ ಐದು ರಾಜ್ಯಗಳ ಲೋಕಸಭೆ ಚುನಾವಣೆ ರಣತಂತ್ರ ರೂಪಿಸಲಿದ್ದು, ಅದರಲ್ಲಿ ಹೆಚ್ಚಾಗಿ ಕರ್ನಾಟಕದ ಕಡೆ ತಮ್ಮ ಗಮನವನ್ನು ಫೆÇೀಕಸ್ ಮಾಡಲಿದೆ. ಹೀಗಾಗಿ ಬೆಂಗಳೂರನ್ನು ತಮ್ಮ ಪ್ರಧಾನ ಕಚೇರಿಯನ್ನಾಗಿ ಮಾಡಿಕೊಳ್ಳುತ್ತಿದೆ.
ಅಮಿತ್ ಷಾ ಬೆಂಗಳೂರನ್ನೇ ತನ್ನ ಪ್ರಧಾನ ಕಚೇರಿಗೆ ಆರಿಸಿಕೊಳ್ಳಲು ಸುಲಭವಾಗಿ ನೇಮಕಾತಿ, ತಾಂತ್ರಿಕ ಸೌಲಭ್ಯ ಮತ್ತು ಮೂಲಭೂತ ಸೌಕರ್ಯ ಪ್ರಮುಖ ಕಾರಣವಾಗಿದ್ದು, ಅವರ ಅಸೋಸಿಯೇಟೆಡ್ ಆಫ್ ಬ್ರಿಲಿಯಂಟ್ ಮೈಂಡ್ಸ್ ತಂಡವನ್ನು ವಾಪಸ್ ಬೆಂಗಳೂರಿಗೆ ಬರುವಂತೆ ಸೂಚಿಸಿದ್ದಾರೆ.
ಮೂರು ಸದಸ್ಯರ ತಂಡ ಬೆಂಗಳೂರಿನಲ್ಲಿ ಕಚೇರಿ ಹೊಂದಿದ್ದು, ಕೇಂದ್ರದ ನಾಯಕರ ಜೊತೆ ನೇರ ಸಂಪರ್ಕ ಹೊಂದಿದೆ. ಬೆಂಗಳೂರನ್ನು ಕಂಟ್ರೋಲ್ ರೂಂ ಮಾಡಿಕೊಂಡಿರುವ ಯೋಜನೆ ಸರಿಯಾಗಿದೆ. ರಾಜ್ಯಗಳ ಪ್ರವಾಸ, ನಿರ್ಧಿಷ್ಟ ವಿಶ್ಲೇಷಣೆ, ಪ್ರಚಾರ ತಂತ್ರ, ಮತದಾರರ ಪೆÇ್ರಫೈಲ್ ಮತ್ತು ಸಂಶೋಧನೆಗೆ ನೆರವಾಗುತ್ತದೆ ಎಂದು ಬಿಜೆಪಿ ಪದಾಧಿಕಾರಿಯೊಬ್ಬರು ತಿಳಿಸಿದ್ದಾರೆ.
ನಮ್ಮ ಪಕ್ಷಕ್ಕೆ ಬೆಂಗಳೂರು ಸೂಕ್ತವಾದ ಪ್ರಾದೇಶಿಕ ಕಚೇರಿಯಾಗಿದೆ. ನಾವಿಲ್ಲದಿದ್ದರೂ ನಗರದ ಸಂಪರ್ಕ, ಪ್ರತಿಭೆ ಮತ್ತು ಭಾಷೆಗಳು ತಂತ್ರಜ್ಞಾನ ಕೌಶಲ್ಯತೆ ಇಲ್ಲಿ ಬಹಳ ಸುಲಭವಾಗಿ ಲಭ್ಯವಾಗುತ್ತದೆ. ಕರ್ನಾಟಕದಲ್ಲಿ ಒಟ್ಟು 28 ಲೋಕಸಭಾ ಕ್ಷೇತ್ರಗಳಿದ್ದು, ಸುಮಾರು 20-22 ಕ್ಷೇತ್ರಗಳನ್ನು ವಶಕ್ಕೆ ಪಡೆಯಲು ಬಿಜೆಪಿ ಪ್ರಯತ್ನಿಸುತ್ತಿದೆ, ತಮ್ಮ ವೈಯಕ್ತಿಕ ಸೇನೆಯನ್ನು ಬಳಸಿಕೊಳ್ಳುವ ಅಮಿತ್ ಷಾ ಪ್ರಚಾರ ತಂತ್ರಗಾರಿಕೆ ರೂಪಿಸಲು ಬೆಂಗಳೂರನ್ನು ದಕ್ಷಿಣ ಭಾರತದ ಪ್ರಧಾನ ಕೇಂದ್ರವಾಗಿರಿಸಿಕೊಳ್ಳಲಿದ್ದಾರೆ ಎಂದು ಹೇಳಿದ್ದಾರೆ.