ಶ್ರೀ ಪಾತಾಳ ಪಂಚ ನಾಗೇಂದ್ರಸ್ವಾಮಿ ದೇವಸ್ಥಾನದಲ್ಲಿ 36ನೇ ವಾರ್ಷಿಕೋತ್ಸವ

Varta Mitra News

 

ಬೆಂಗಳೂರು,ಆ.11- ಜೆಸಿನಗರದ ಮಹಾಲಕ್ಷ್ಮಿಪುರಂನಲ್ಲಿರುವ ಶ್ರೀ ಪಾತಾಳ ಪಂಚ ನಾಗೇಂದ್ರಸ್ವಾಮಿ ದೇವಸ್ಥಾನದಲ್ಲಿ ನಾಗರಪಂಚಮಿ ಹಾಗೂ ಗಂಗಮ್ಮ ದೇವಿ ಜಾತ್ರೆಯ 36ನೇ ವಾರ್ಷಿಕೋತ್ಸವವನ್ನು ಇಂದಿನಿಂದ ಆ.18ರವರೆಗೆ ಹಮ್ಮಿಕೊಳ್ಳಲಾಗಿದೆ.
ಇಂದು ಸಂಜೆ 7 ಗಂಟೆಗೆ ಗಂಗಮ್ಮ ದೇವಿಗೆ ವಿಶೇಷ ಅಲಂಕಾರ ಹಾಗೂ 7.30ಕ್ಕೆ ಅನ್ನದಾನವನ್ನು ಏರ್ಪಡಿಸಲಾಗಿದೆ. ಇದೇ ವೇಳೆ ನೃತ್ಯ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.

ಆ.13ರಂದು ಬೆಳಗ್ಗೆ 10 ಗಂಟೆಗೆ ಗಂಗಮ್ಮ ದೇವಿಗೆ ಪಂಚಾಮೃತ ವಿಶೇಷ ಅಭಿಷೇಕ, 14ರಂದು ಬೆಳಗ್ಗೆ 9 ಗಂಟೆಗೆ ಹಾಲಿನ ಕೊಡ ಮೆರವಣಿಗೆ ನಂತರ ಭಕ್ತಾದಿಗಳು ದೇವಿಗೆ ಹಾಲಿನ ಅಭಿಷೇಕ ಮಾಡಬಹುದಾಗಿದೆ.
ಸಂಜೆ 7.30ಕ್ಕೆ ಹಸಿ ಕರಗ ಏರ್ಪಡಿಸಲಾಗಿದ್ದು, ಮುಖ್ಯ ಬೀದಿಗಳಲ್ಲಿ ಮೆರವಣಿಗೆ ನಡೆಯಲಿದೆ. ಆ.15ರಂದು ನಾಗರಪಂಚಮಿ ಹಾಗೂ ಗಂಗಮ್ಮ ದೇವಿ ಜಾತ್ರೆ ಪ್ರಯುಕ್ತ ಬೆಳಗಿನ ಜಾವ 3.30ಕ್ಕೆ ನಾಗೇಂದ್ರ ಸ್ವಾಮಿಗೆ ವಿಶೇಷ ಅಭಿಷೇಕ, 6 ಗಂಟೆಗೆ ಮಹಾಮಂಗಳಾರತಿ, 9 ಗಂಟೆಗೆ ಮೂರ್ತಿ ಹೋಮ ಹಾಗೂ ತಪೆÇೀವನದಲ್ಲಿ ವೇದ ಮಾತೆಯಾದ ಗಂಗಮ್ಮ ದೇವಿಗೆ ವಿಶೇಷ ಅಲಂಕಾರ ಪೂಜೆ ನಡೆಯಲಿದೆ.
ಸಂಜೆ 6 ಗಂಟೆಗೆ ಹಿನ್ನೆಲೆ ಗಾಯಕಿ ರಮಾ ಹಾಗೂ ರಾಧಿಕಾ ದಯಾನಂದ ತಂಡದವರಿಂದ ಭಕ್ತಿಗೀತೆ, ಭಾವಗೀತೆ ಮತ್ತು ಜನಪದಗೀತೆ ಕಾರ್ಯಕ್ರಮ ನಡೆಯಲಿದೆ.

ಆ.16ರಂದು ಬೆಳಗ್ಗೆ 7 ಗಂಟೆಗೆ ಗಂಗಮ್ಮ ದೇವಿಗೆ ವಿಶೇಷ ಅಭಿಷೇಕ , 10 ಗಂಟೆಗೆ ಅಂಬಲಿ ಪೂಜೆ , 17ರಂದು 9 ಗಂಟೆಗೆ ಲಲಿತಸಹಸ್ರನಾಮ ಕುಂಕುಮಾರ್ಚನೆ ನಡೆಯಲಿದ್ದು, ಸಂಜೆ 7.30ಕ್ಕೆ ಅನ್ನದಾನ ಏರ್ಪಡಿಸಲಾಗಿದೆ.
ಆ.18ರಂದು ಸಂಜೆ 4.30ಕ್ಕೆ ಪ್ರಮುಖ ಬೀದಿಗಳಲ್ಲಿ ಗಂಗಮ್ಮ ದೇವಿಯ ಮೆರವಣಿಗೆ ನಡೆಯಲಿದೆ.
ಶಾಸಕರಾದ ಕೆ.ಗೋಪಾಲಯ್ಯ, ಮುನಿರತ್ನಂ ನಾಯ್ಡು, ಮಾಜಿ ಶಾಸಕ ನೆ.ಲ.ನರೇಂದ್ರ ಬಾಬು, ವಿರೋಧ ಪಕ್ಷದ ಮಾಜಿ ಮುಖಂಡ ಎಂ.ನಾಗರಾಜು, ಪಾಲಿಕೆ ಸದಸ್ಯರಾದ ಕೇಶವಮೂರ್ತಿ, ವಿಧಾನಪರಿಷತ್ ಸದಸ್ಯ ಎಂ.ಡಿ.ಲಕ್ಷ್ಮಿನಾರಾಯಣ, ಬಿಬಿಎಂಪಿ ಮಾಜಿ ಉಪಮಹಾಪೌರ ಎಸ್.ಹರೀಶ್ ಸೇರಿದಂತೆ ಹಲವಾರು ಮುಖಂಡರು ಪಾಲ್ಗೊಳ್ಳಲಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ