ನವದೆಹಲಿ: ಟೀಂ ಇಂಡಿಯಾದ ಮಿಸ್ಟರ್ ಕೂಲ್ ಧೋನಿ ವಿಶ್ವ ಕ್ರಿಕೆಟ್ನಲ್ಲಿ ಮಿಸ್ಟರ್ ಕೂಲ್ ಅಂತಾನೆ ಫೇಮಸ್. ತಂಡ ಅದೆಷ್ಟೊ ಬಾರಿ ಒತ್ತದಲ್ಲಿ ಸಿಲುಕಿದ್ರು ಸ್ವಲ್ಪವೂ ಧೃತಿಗೆಡದೇ ತಮ್ಮ ಚಾಣಾಕ್ಷ ತಂತ್ರದಿಂದ ಅದೆಷ್ಟೊ ಬಾರಿ ತಂಡವನ್ನ ಗೆಲ್ಲಿಸಿಕೊಟ್ಟ ಚಾಂಪಿಯನ್ ಆಟಗಾರ.
ಮಾಹಿ ಆನ್ಫೀಲ್ಡ್ ಮತ್ತು ಆಫ್ ದಿ ಫೀಲ್ಡ್ನಲ್ಲಿ ಯಾವಗಲೂ ಕೂಲ್ ಅನ್ನೋದು ಎಲ್ಲರಿಗೂ ಗೊತ್ತು. ಇದಕ್ಕೆ ಕಾರಣ ಏನು ಅನ್ನೋದು ಯಾರಿಗೂ ಗೊತ್ತಿರಲ್ಲಲ್ಲ. ಇದೀಗ ಈ ಬಗ್ಗೆ ಸ್ವತಃ ಧೋನಿ ಉತ್ತರಿಸಿದ್ದಾರೆ. ಮಾಹಿ ಒತ್ತಡದಲ್ಲಿ ಇರದಿರಲು ತಮ್ಮ ಮುದ್ದಿನ ಮಗಳು ಝೀವಾ ಕಾರಣವಂತೆ.
ಮುದ್ದಿನ ಮಗಳು ಝೀವಾ ಬಗ್ಗೆ ಮಾತನಾಡಿರುವ ಧೋನಿ, ಝೀವಾ ಅತ್ತ ಇತ್ತ ಓಡಾಡಿಕೊಂಡಿದ್ರೆ ಚೆನ್ನಾಗಿರುತ್ತೆ. ಬೆಳಗ್ಗೆ ಎದ್ದ ತಕ್ಷಣ ಆಚೆ ಈಚೆ ಓಡಾಡುತ್ತಾಳೆ. ಅವಳು ಏನು ಮಾಡುತ್ತಾಳೆ ಅನ್ನೋದರ ಬಗ್ಗೆ ಎಚ್ಚರಿಕೆ ಅವಳಿಗಿದೆ. ಒಂದು ವೇಳೆ ಅವಳಾಗಿಯೇ ಗಾಯ ಮಾಡಿಕೊಂಡರೂ ನಾವು ಆತಂಕಪಡೊದಿಲ್ಲ. ಅವಳು ನಮ್ಮ ಸುತ್ತ ಇರೋದ್ರಿಂದ ನನ್ನ ಒತ್ತಡ ಕಡಿಮೆಯಾಗುತ್ತೆ ಅಂತ ಮಿಸ್ಟರ್ ಕೂಲ್ ಹೇಳಿಕೊಂಡಿದ್ದಾರೆ.
ಮೂರುವ ವರೆ ವರ್ಷದ ಝೀವಾಗೆ ಅವಳದ್ದೆ ಆದ ಗುಣಗಳಿವೆ. ನಾನು ಎಲ್ಲಿಯೇ ಹೋಗಲಿ ಜನ ನನ್ನ ಬಳಿ ಬಂದು ಝೀವಾ ಎಲ್ಲಿ ? ಏನು ಮಾಡುತ್ತಿದ್ದಾಳೆ ಅಂತಾ ಕೇಳ್ತಾರೆ. ಆಗ ನಾನು ಈಗಷ್ಟೆ ಇಲ್ಲೆಲ್ಲೊ ಇದ್ಲು ಎಂದು ಹೇಳುತ್ತೇನೆ ಎಂದು ಮಗಳ ಬಗ್ಗೆ ಮಾಹಿ ಹೇಳಿದ್ದಾರೆ.