ಬ್ಯಾಂಕ್ ಮಿತ್ರರಿಂದ 27ಕ್ಕೆ ಬೃಹತ್ ಪ್ರತಿಭಟನೆ

ಹುಬ್ಬಳ್ಳಿ: ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕ್ ಮತ್ತು ಕಂಪನಿಯವರಿಂದ ಬ್ಯಾಂಕ್ ಮಿತ್ರರ ಮೇಲಿನ ದಬ್ಬಾಳಿಕೆ ಖಂಡಿಸಿ ಇದೇ 27 ರಂದು ಧಾರವಾಡ ಕೆವಿಜಿ ಬ್ಯಾಂಕ್ ಮುಂದೆ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ಕರ್ನಾಟಕ ರಾಜ್ಯ ಬ್ಯಾಂಕ್ ಮಿತ್ರಾಸ್ ಸಂಘದ ಪ್ರಧಾನ ಕಾರ್ಯದರ್ಶಿ ದೇವು ಸೊರಗಪ್ಪ ಹೇಳಿದ್ರು. ಹುಬ್ಬಳ್ಳಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ರಾಷ್ಟ್ರೀಕೃತ ಹಾಗೂ ಖಾಸಗಿ ಬ್ಯಾಂಕುಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಮಿತ್ರರ ಮೇಲೆ ನಿನಾಕಾರಣ ಒತ್ತಡ ಹೇರಲಾಗುತ್ತಿದೆ. ಗುತ್ತಿಗೆ ಆಧಾರದ ಮೇಲೆ ಕಾರ್ಯ ನಿರ್ವಹಿಸುತ್ತಿರುವ 7 ಸಾವಿರ ಬ್ಯಾಂಕ್ ಮಿತ್ರರ ಸಂಕಷ್ಟದಲ್ಲಿದ್ದು, ಸಂಘಕ್ಕೆ ಸೇರಿಕೊಳ್ಳುವವರನ್ನ ಕೆಲಸದಿಂದ ತಡಗೆದು ಹಾಕುತ್ತಿದ್ದಾರೆ. ಇದರಿಂದ ಬ್ಯಾಂಕ್ ಮಿತ್ರರಲ್ಲಿ ಅಭದ್ರತೆ ಕಾಡುತ್ತಿದೆ ಎಂದರು.‌ ಈ ಹಿಂದೆ ವಜಾ ಗೊಳಿಸಿದ್ದ ಇಬ್ಬರು ಬ್ಯಾಂಕ್ ಮಿತ್ರರನ್ನ ಮತ್ತೆ ಸೇರಿಸಿಕೊಳ್ಳುವಂತೆ ಕಾನೂನಾತ್ಮಕ ಹೋರಾಟ ನಡೆಸಿದ್ದೇವೆ. ಕಾರ್ಮಿಕ ನ್ಯಾಯಾಲಯದಲ್ಲಿ ವಜಾಗೊಂಡವರನ್ನ ಮತ್ತೆ ಕೆಲಸಕ್ಕೆ ಸೇರಿಸಿಕೊಳ್ಳುವಂತೆ ತಿಳಿಸಿದ್ದರು. ಆದರೆ, ಇದೂ ವರೆಗೂ ಬ್ಯಾಂಕ್ ಹಾಗೂ ಕಂಪನಿಯವರು ಕೆಲಸ ನೀಡಿಲ್ಲ ಎಂದು ಆರೋಪಿಸಿದರು‌. ಈ ಹಿನ್ನೆಲೆ ನ್ಯಾಯ ಒದಗಿಸುವಂತೆ ಆಗ್ರಹಿಸಿ ಇದೇ 27 ರಂದು ಕೆವಿಜಿ ಬ್ಯಾಂಕ್ ಪ್ರಧಾನ ಕಚೇರಿ ಎದುರು ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ