ಮುಂದುವರೆದ ಅಧಿಕಾರಿಗಳ ವರ್ಗಾವಣೆ ಪರ್ವ

ಬೆಂಗಳೂರು,ಆ.2-ರಾಜ್ಯದಲ್ಲಿ ವಿವಿಧ ಇಲಾಖೆಯ ಅಧಿಕಾರಿಗಳ ವರ್ಗಾವಣೆ ಪರ್ವ ಮುಂದುವರೆದಿದ್ದು, ಇಂದು ಸಹ ಅಭಿವೃದ್ಧಿ ಮತ್ತು ಸ್ಥಳೀಯ ಆಡಳಿತ ಶಾಖೆಯ 44 ಅಧಿಕಾರಿಗಳನ್ನು ತಕ್ಷಣದಿಂದ ಜಾರಿಗೆ ಬರುವಂತೆ ವರ್ಗಾವಣೆ ಮಾಡಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಅಧೀನ ಕಾರ್ಯದರ್ಶಿ ಆದೇಶ ಹೊರಡಿಸಿದ್ದಾರೆ.
ತುಮಕೂರು ಜಿಲ್ಲೆ ಗುಬ್ಬಿ ತಾಲ್ಲೂಕು ಪಂಚಾಯ್ತಿ ಕಾರ್ಯ ನಿರ್ವಾಹಕ ಅಧಿಕಾರಿ ಎಸ್.ಶಿವಪ್ರಕಾಶ್ ಅವರನ್ನು ಕೊರಟಗೆರೆ ತಾಲ್ಲೂಕು ಪಂಚಾಯ್ತಿಗೆ, ಬಾಗಲಕೋಟೆ ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಆರ್.ಎನ್.ಬಂಗಾರಪ್ಪನವರ್ ಅವರನ್ನು ಬೆಳಗಾವಿ ಜಿಲ್ಲೆಯ ಅಥಣಿ ತಾಪಂಗೆ, ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿಬಿದನೂರು ತಾಪಂ ಕಾರ್ಯ ನಿರ್ವಾಹಕ ಅಧಿಕಾರಿ ಡಾ.ನಾರಾಯಣಸ್ವಾಮಿ ಸಿ.ಎನ್ ಅವರನ್ನು ಕೋಲಾರ ತಾಪಂಗೆ , ಚಿಕ್ಕಮಗಳೂರಿನ ನರಸಿಂಹರಾಜಪುರ ತಾಪಂ ಕಾರ್ಯ ನಿರ್ವಾಹಣಾಧಿಕಾರಿ ಪ್ರಕಾಶ್ ವಡ್ಡರ ಅವರನ್ನು ರಾಯಚೂರು ಜಿಲ್ಲೆ ಲಿಂಗಸಗೂರು ತಾಪಂಗೆ ವರ್ಗಾವಣೆ ಮಾಡಲಾಗಿದೆ.
ಶಿವಮೊಗ್ಗ ಜಿಲ್ಲೆಯ ಭದ್ರಾವತಿ ತಾಪಂ ಕಾರ್ಯನಿರ್ವಾಹಣಾಧಿಕಾರಿ ಸಿದ್ದಲಿಂಗಯ್ಯ ಅವರನ್ನು ಸೊರಬ ತಾಪಂಗೆ, ಕಲಬುರಗಿ ಜಿಲ್ಲೆಯ ಸೇಡಂ ತಾಪಂ ಕಾರ್ಯನಿರ್ವಾಹಣಾಧಿಕಾರಿ ಬಾಬು ರಾಥೋಡ್ ಅವರನ್ನು ಸಿಂಧನೂರು ತಾಪಂಗೆ, ನೆಲಮಂಗಲ ತಾಪಂ ಕಾರ್ಯ ನಿರ್ವಾಹಣಾಧಿಕಾರಿ ಎನ್.ನೋಮೇಶ್ ಕುಮಾರ್ ಅವರನ್ನು ಬೆಂಗಳೂರು ದಕ್ಷಿಣ ತಾಲ್ಲೂಕು ಪಂಚಾಯ್ತಿಗೆ, ಕೋಲಾರ ತಾಪಂ ಕಾರ್ಯನಿರ್ವಾಹಣಾಧಿಕಾರಿ ನಾಗರಾಜ ಅವರನ್ನು ಬೆಂಗಳೂರು ನಗರ ಜಿಲ್ಲಾ ಪಂಚಾಯತ್‍ನ ಸಹಾಯಕ ಕಾರ್ಯದರ್ಶಿಯಾಗಿ ನೇಮಿಸಲಾಗಿದೆ.
ಹಾವೇರಿಯ ಡಿಆರ್‍ಡಿಎ ಕೋಶದ ಸಹಾಯಕ ಯೋಜನಾಧಿಕಾರಿ ಎಸ್‍ಡಿಎಂ ಇಸ್ಮಾಯಿಲ್ ಅವರನ್ನು ಸವಣೂರು ತಾಪಂನ ಕಾರ್ಯ ನಿರ್ವಹಣಾಧಿಕಾರಿಯಾಗಿ, ರಾಮನಗರ ಜಿಲ್ಲಾ ಪಂಚಾಯ್ತಿಯ ಸಹಾಯಕ ಕಾರ್ಯದರ್ಶಿ ಚಂದ್ರು ಅವರನ್ನು ಮಾಗಡಿ ತಾಲ್ಲೂಕು ಪಂಚಾಯ್ತಿಯ ಕಾರ್ಯ ನಿರ್ವಹಣಾಧಿಕಾರಿಯಾಗಿ, ಬೆಂಗಳೂರು ಜಿಪಂ ಸಹಾಯಕ ಕಾರ್ಯದರ್ಶಿ ಹನುಮಂತ ರಾಯಪ್ಪ ಎಚ್‍ಆರ್ ಅವರನ್ನು ನೆಲಮಂಗಲ ತಾಪಂನ ಕಾರ್ಯ ನಿರ್ವಾಹಕ ಅಧಿಕಾರಿಯಾಗಿ ವರ್ಗಾವಣೆಗೊಳಿಸಲಾಗಿದೆ.
ಇದೇ ರೀತಿ ಕುಮ್ಮಟ, ಲಿಂಗಸಗೂರು, ಹಿರಿಯೂರು, ಮೊಳಕಾಲ್ಮೂರು, ಹುಬ್ಬಳ್ಳಿ, ಯಾದಗಿರಿ, ಕಲಘಟ್ಟಗಿ,ಶಿರಾ, ಹೊಸದುರ್ಗ, ಚಿಕ್ಕನಾಯಕನಹಳ್ಳಿ, ಸಿಂಧನೂರು, ಬೇಲೂರು, ಆಲೂರು, ಶಿರಸಿ, ಇಂಡಿ, ನಾಗಮಂಗಲ, ಕುಣಿಗಲ್, ಧಾರವಾಡ, ಬೈಲಹೊಂಗಲ, ದೇವದುರ್ಗ,ಬಸವ ಕಲ್ಯಾಣ, ಮುಂಡಗೋಡ, ಸವದತ್ತಿ, ಶ್ರೀರಂಗಪಟ್ಟಣ, ಹೆಗ್ಗಡದೇವನಕೋಟೆ, ಅಥಣಿ, ಖಾನಾಪುರ, ನರಗುಂದ, ಜಮಖಂಡಿ ತಾಪಂಗಳ ಕಾರ್ಯ ನಿರ್ವಾಹಕ ಅಧಿಕಾರಿಗಳನ್ನು ವರ್ಗಾವಣೆ ಮಾಡಿ ಆದೇಶ ಹೊರಡಿಸಲಾಗಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ