ಬೆಂಗಳೂರು: ಬಿಗ್ ಬಾಸ್ ಬೆಡಗಿ ನಿವೇದಿತಾ ಗೌಡ ವಿರುದ್ಧ ದೂರು ದಾಖಲಾಗಿದೆ.
ಅಪಾಯಕಾರಿ ಕಿಕಿ ಡ್ಯಾನ್ಸ್ ಮಾಡಿದ ಹಿನ್ನೆಲೆಯಲ್ಲಿ ಕನ್ನಡ ಒಕ್ಕೂಟದ ನಾಗೇಶ್ ಅವರು ದೂರು ದಾಖಲಿಸಿ, ನಿವೇದಿತಾ ಗೌಡ ವಿರುದ್ಧ ಕ್ರಮ ಕೈಗೂಳ್ಳುವಂತೆ ಆಗ್ರಹಿಸಿದ್ದಾರೆ. ಸದ್ಯ ನಗರದ ಹಲಸೂರು ಗೇಟ್ ಪೂಲೀಸ್ ಠಾಣೆಯಲ್ಲಿ ನಿವೇದಿತಾ ವಿರುದ್ಧ ದೂರು ದಾಖಲಾಗಿದೆ.
ಚಲಿಸುತ್ತಿರುವ ಕಾರಿನಲ್ಲಿ ಡ್ಯಾನ್ಸ್ ಮಾಡುವ ಚಾಲೆಂಜ್‍ನ್ನು ಬಿಗ್ ಬಾಸ್ ಬೆಡಗಿ ನಿವೇದಿತಾ ಗೌಡ ಸ್ವೀಕರಿಸಿದ್ದರು. ಕಾರು ಚಲಿಸುತಿದ್ದಾಗ ಅದೇ ವೇಗಕ್ಕೆ ತಕ್ಕಂತೆ ಹೆಜ್ಜೆ ಹಾಕೋದು ಸದ್ಯದ ಟ್ರೆಂಡ್ ಆಗಿದ್ದು, ವಿದೇಶದಲ್ಲಿ ಭಾರೀ ಪ್ರಮಾಣದಲ್ಲಿ ಈ ಚಾಲೆಂಜ್ ಸ್ವೀಕರಿಸುತ್ತಿದ್ದಾರೆ. ಈ ಚಾಲೆಂಜ್ ಭಾರತಕ್ಕೂ ಕಾಲಿಟ್ಟಿದ್ದು, ಬಿಟೌನ್ ತಾರೆಯರು ಚಾಲೆಂಜ್ ಸ್ವೀಕರಿಸಿದ್ದರು. ಆದರೆ ನಿವೇದಿತಾ ಗೌಡ ಚಲಿಸುತ್ತಿರುವ ಕಾರಿನಿಂದ ಕೆಳಗಿಳಿದು ಡ್ಯಾನ್ಸ್ ಮಾಡುವ ಮೂಲಕ ಕರ್ನಾಟಕ್ಕೆ ಈ ಚಾಲೆಂಜ್ ಅನ್ನು ಪರಿಚಯಿಸಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಅಪ್ಲೋಡ್ ಮಾಡುತ್ತಿದ್ದಂತೆ ನಿವೇದಿತಾ ಡ್ಯಾನ್ಸ್ ಗೆ ಪರ/ವಿರೋಧ ಕಮೆಂಟ್ ಕೂಡ ಬಂದಿದೆ.
ಇದೊಂದು ಅಪಾಯಕಾರಿ ಚಾಲೆಂಜ್ ಆಗಿದ್ದು, ಎಷ್ಟೋ ಮಂದಿ ಈ ಸಾಹಸ ಮಾಡೋದಕ್ಕೆ ಹೋಗಿ ಗಾಯ ಮಾಡಿಕೊಂಡಿದ್ದಾರೆ. ಐಟಿ ಸಿಟಿ ಬೆಂಗಳೂರಿಗೆ ಕಿಕಿ ಚಾಲೆಂಜ್ ಜ್ವರ ಬರಬಹುದು ಅಂತಾ ಟ್ರಾಫಿಕ್ ಪೊಲೀಸರು ಸಾಮಾಜಿಕ ಜಾಲತಾಣದಲ್ಲಿ ಕಿಕಿ ಚಾಲೆಂಜ್ ಅಪಾಯಕಾರಿ ಈ ರೀತಿ ಮಾಡಿದರೆ ಬೆಂಗಳೂರು ಟ್ರಾಫಿಕ್ ಪೊಲೀಸರು ಸುಮ್ಮನಿರಲ್ಲ ಎಂದು ಎಚ್ಚರಿಕೆ ಸಂದೇಶ ರವಾನಿಸಿದ್ದರು. ಕಿಕಿ ಚಾಲೆಂಜ್ ನಿಮ್ಮ ಬಾಡಿಗೂ ಗಾಡಿಗೂ ಅಪಾಯಕಾರಿ ಅಂತಾ ಜಾಗೃತಿ ನಡೆಸಿದರು. ಜೊತೆಗೆ ಕಿಕಿ ಚಾಲೆಂಜ್‍ನಿಂದ ತಲೆಬುರುಡೆ ಒಡೆದುಕೊಂಡ ಯುವಕನ ವಿಡಿಯೋ ಕೂಡ ಆಡುಗೋಡಿ ಟ್ರಾಫಿಕ್ ಪೊಲೀಸರು ಅಪ್ಲೋಡ್ ಮಾಡಿದರು.