ಚೆನ್ನೈ: ಜು-26; ತಮಿಳುನಾಡಿ ಉಪಮುಖ್ಯಮಂತ್ರಿ ಓ ಪನ್ನೀರ್ ಸೆಲ್ವಂ ಖಾಸಗಿ ಉಪಯೋಗಕ್ಕಾಗಿ ಮಿಲಿಟರಿ ಹೆಲಿಕ್ಯಾಪ್ಟರ್ ಬಳಸಿಕೊಂಡಿದ್ದು, ಈಗ ವಿವಾದಕ್ಕೆ ಕಾರಣವಾಗಿದೆ.
ತಮ್ಮ ಸಹೋದರನನ್ನು ಚೆನ್ನೈಯಿಂದ ಮುಂಬೈಗೆ ಕರೆದೊಯ್ಯಲು ಮಿಲಿಟರಿ ಹೆಲಿಕಾಪ್ಟರ್ ಆ್ಯಂಬುಲೆನ್ಸ್ ವ್ಯವಸ್ಥೆ ಮಾಡಿಕೊಟ್ಟಿದ್ದಕ್ಕೆ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಅವರಿಗೆ ತಮಿಳುನಾಡಿನ ಉಪಮುಖ್ಯಮಂತ್ರಿ ಒ. ಪನ್ನೀರ್ ಸೆಲ್ವಂ ಅವರು ಧನ್ಯವಾದ ಹೇಳಿದ್ದು ಈಗ ವಿವಾದಕ್ಕೀಡಾಗಿದೆ.
ಖಾಸಗಿ ಉಪಯೋಗಕ್ಕೆ ಮಿಲಟರಿ ಹೆಲಿಕಾಪ್ಟರ್ ಹೇಗೆ ಬಳಸಿಕೊಳ್ಳಲಾಯಿತು ಎಂದು ಪ್ರಶ್ನಿಸಿರುವ ತಮಿಳುನಾಡಿನ ಡಿಎಂಕೆ ಪಕ್ಷದ ನಾಯಕ ಸ್ಟಾಲಿನ್, ಅಧಿಕಾರ ದುರುಪಯೋಗದ ಕಾರಣ ಕೇಂದ್ರ ರಕ್ಷಣಾ ಸಚಿವೆ ಹಾಗೂ ತಮಿಳುನಾಡಿನ ಡಿಸಿಎಂ ಪನೀರ್ಸೆಲ್ವಂ ಕೂಡಲೇ ನೈತಿಕ ಹೊಣೆಹೊತ್ತು ರಾಜೀನಾಮೆ ನೀಡಬೇಕೆಂದು ಆಗ್ರಹಿಸಿದ್ದಾರೆ.
ರಕ್ಷಣಾ ಸಚಿವರ ನೆರವಿಗೆ ನೇರವಾಗಿ ಧನ್ಯವಾದ ತಿಳಿಸಲು ದೆಹಲಿಗೆ ತೆರಳಿದ್ದ ಪನ್ನೀರ್ ಸೆಲ್ವಂ ಭೇಟಿಗೂ ಮುನ್ನ ಮಾಧ್ಯಮಗಳೆದುರು ಈ ವಿಷಯ ತಿಳಿಸಿ, ಆ ಮೂಲಕವೇ ಅವರಿಗೆ ಹೃತ್ಪೂರ್ವಕ ಧನ್ಯವಾದ ತಿಳಿಸಿದ್ದರು. ಈ ಮಾಹಿತಿಯನ್ನು ಬಹಿರಂಗಪಡಿಸಿದ ಕಾರಣದಿಂದ ಬೇಸರಗೊಂಡ ರಕ್ಷಣಾ ಸಚಿವರು ಪನ್ನೀರ್ ಸೆಲ್ವಂರನ್ನು ಭೇಟಿಯಾಗಲು ಅವಕಾಶ ನೀಡಲಿಲ್ಲ ಎಂದು ಸ್ಟಾಲಿನ್ ಪ್ರತಿಕ್ರಿಯಿಸಿದ್ದಾರೆ.
Favour Backfires, DMK Wants Defence Minister,O Panneerselvam To Quit