ಬೀಜಿಂಗ್ ನಲ್ಲಿ ಅಮೇರಿಕಾ ರಾಯಭಾರಿ ಕಛೇರಿ ಬಳಿ ಬಾಂಬ್ ಸ್ಫೋಟ

ಬೀಜಿಂಗ್:ಜು-26: ಚೀನಾ ರಾಜಧಾನಿ ಬೀಜಿಂಗ್ ನಲ್ಲಿರುವ ಅಮೆರಿಕಾ ರಾಯಭಾರಿ ಕಚೇರಿ ಸಮೀಪ ಪ್ರಬಲ ಬಾಂಬ್ ಸ್ಫೋಟ ಸಂಭವಿಸಿದೆ.

ಬೆಳಿಗ್ಗೆ 11 ಗಂಟೆ ಸುಮಾರಿಗೆ ರಾಯಭಾರಿ ಕಚೇರಿ ಬಳಿ ಸ್ಫೋಟ ಸಂಭವಿಸಿದ್ದು, ಘಟನೆಯಲ್ಲಿ ಯಾವುದೇ ಸಾವು-ನೋವುಗಳು ಸಂಭವಿಸಿಲ್ಲ ಎಂದು ಎಂದು ತಿಳಿದುಬಂದಿದೆ.

ಅಮೆರಿಕಾ ರಾಯಭಾರಿ ಕಚೇರಿ ಸಮೀಪವೇ ಭಾರತೀಯ ರಾಯಭಾರಿ ಕಚೇರಿ ಕೂಡ ಇದ್ದು, ಭಾರತೀಯ ರಾಯಭಾರಿ ಕಚೇರಿಯಲ್ಲಿದ್ದವರೆಲ್ಲರೂ ಕ್ಷೇಮವಾಗಿದ್ದಾರೆಂದು ಅಧಿಕಾರಿಗಳು ತಿಳಿಸಿದ್ದಾರೆ.

ಬಾಂಬ್ ಸ್ಫೋಟ ಸಂಭವಿಸಿದ ಸ್ಥಳದ ವಿಡಿಯೋಗಳು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ವಿಡಿಯೋದಲ್ಲಿರುವ ಪ್ರಕಾರ, ಸ್ಥಳದ ಸುತ್ತಲೂ ದಟ್ಟ ಕಪ್ಪು ಹೊಗೆ ಆವರಿಸಿರುವುದು ಕಂಡು ಬಂದಿದೆ. ಸ್ಥಳದಲ್ಲಿ ಭದ್ರತಾ ಪಡೆಗಳು ಹಾಗೂ ಪೊಲೀಸರು ದೌಡಾಯಿಸಿದ್ದು, ಪರಿಶೀಲನೆ ನಡೆಸುತ್ತಿದ್ದಾರೆ.

ವೀಸಾ ಸಂದರ್ಶನಕ್ಕಾಗಿ ಅಮೆರಿಕಾ ರಾಯಭಾರಿ ಕಚೇರಿಯ ಹೊರಗೆ ಹಲವಾರು ಚೀನಾ ರಾಷ್ಟ್ರದ ಪ್ರಜೆಗಳು ಸಾಲಿನಲ್ಲಿ ನಿಂತಿದ್ದರು. ಈ ವೇಳೆ ಸ್ಫೋಟ ಸಂಭವಿಸಿದೆ ಎಂದು ಹೇಳಲಾಗುತ್ತಿದೆ. ಘಟನೆ ಕುರಿತಂತೆ ಪ್ರತಿಕ್ರಿಯೆ ನೀಡಲು ಅಮೆರಿಕಾ ರಾಯಭಾರಿ ಕಚೇರಿ ನಿರಾಕರಿಸಿದೆ.

Beijing blast: Bomb detonated,US embassy

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ