ಖಾಸಗಿ ಉಪಯೋಗಕ್ಕಾಗಿ ಮಿಲಿಟರಿ ಹೆಲಿಕ್ಯಾಪ್ಟರ್ ಬಳಕೆ: ವಿವಾದಕ್ಕೀಡಾಡ ಪನ್ನೀರ್ ಸೆಲ್ವಂ

ಚೆನ್ನೈ: ಜು-26; ತಮಿಳುನಾಡಿ ಉಪಮುಖ್ಯಮಂತ್ರಿ ಓ ಪನ್ನೀರ್ ಸೆಲ್ವಂ ಖಾಸಗಿ ಉಪಯೋಗಕ್ಕಾಗಿ ಮಿಲಿಟರಿ ಹೆಲಿಕ್ಯಾಪ್ಟರ್ ಬಳಸಿಕೊಂಡಿದ್ದು, ಈಗ ವಿವಾದಕ್ಕೆ ಕಾರಣವಾಗಿದೆ.

ತಮ್ಮ ಸಹೋದರನನ್ನು ಚೆನ್ನೈಯಿಂದ ಮುಂಬೈಗೆ ಕರೆದೊಯ್ಯಲು ಮಿಲಿಟರಿ ಹೆಲಿಕಾಪ್ಟರ್​ ಆ್ಯಂಬುಲೆನ್ಸ್​ ವ್ಯವಸ್ಥೆ ಮಾಡಿಕೊಟ್ಟಿದ್ದಕ್ಕೆ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್​ ಅವರಿಗೆ ತಮಿಳುನಾಡಿನ ಉಪಮುಖ್ಯಮಂತ್ರಿ ಒ. ಪನ್ನೀರ್​ ಸೆಲ್ವಂ ಅವರು ಧನ್ಯವಾದ ಹೇಳಿದ್ದು ಈಗ ವಿವಾದಕ್ಕೀಡಾಗಿದೆ.

ಖಾಸಗಿ ಉಪಯೋಗಕ್ಕೆ ಮಿಲಟರಿ ಹೆಲಿಕಾಪ್ಟರ್ ಹೇಗೆ ಬಳಸಿಕೊಳ್ಳಲಾಯಿತು ಎಂದು ಪ್ರಶ್ನಿಸಿರುವ ತಮಿಳುನಾಡಿನ ಡಿಎಂಕೆ ಪಕ್ಷದ ನಾಯಕ ಸ್ಟಾಲಿನ್​, ಅಧಿಕಾರ ದುರುಪಯೋಗದ ಕಾರಣ ಕೇಂದ್ರ ರಕ್ಷಣಾ ಸಚಿವೆ ಹಾಗೂ ತಮಿಳುನಾಡಿನ ಡಿಸಿಎಂ ಪನೀರ್​ಸೆಲ್ವಂ ಕೂಡಲೇ ನೈತಿಕ ಹೊಣೆಹೊತ್ತು ರಾಜೀನಾಮೆ ನೀಡಬೇಕೆಂದು ಆಗ್ರಹಿಸಿದ್ದಾರೆ.

ರಕ್ಷಣಾ ಸಚಿವರ ನೆರವಿಗೆ ನೇರವಾಗಿ ಧನ್ಯವಾದ ತಿಳಿಸಲು ದೆಹಲಿಗೆ ತೆರಳಿದ್ದ ಪನ್ನೀರ್​ ಸೆಲ್ವಂ ಭೇಟಿಗೂ ಮುನ್ನ ಮಾಧ್ಯಮಗಳೆದುರು ಈ ವಿಷಯ ತಿಳಿಸಿ, ಆ ಮೂಲಕವೇ ಅವರಿಗೆ ಹೃತ್ಪೂರ್ವಕ ಧನ್ಯವಾದ ತಿಳಿಸಿದ್ದರು. ಈ ಮಾಹಿತಿಯನ್ನು ಬಹಿರಂಗಪಡಿಸಿದ ಕಾರಣದಿಂದ ಬೇಸರಗೊಂಡ ರಕ್ಷಣಾ ಸಚಿವರು ಪನ್ನೀರ್​ ಸೆಲ್ವಂರನ್ನು ಭೇಟಿಯಾಗಲು ಅವಕಾಶ ನೀಡಲಿಲ್ಲ ಎಂದು ಸ್ಟಾಲಿನ್ ಪ್ರತಿಕ್ರಿಯಿಸಿದ್ದಾರೆ.

Favour Backfires, DMK Wants Defence Minister,O Panneerselvam To Quit

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ