ತುಮಕೂರು,ಜು.5-ನಗರದ ಜೀವನಾಡಿ ಹೇಮಾವತಿ ಬುಗಡನಹಳ್ಳಿ ಕೆರೆಗೆ ಹರಿದುಬಂದಿದ್ದು, ಜನರಲ್ಲಿ ಸಂತಸ ಮೂಡಿದೆ. ಇಂದು ಬೆಳಗ್ಗೆ ಬುಗಡನಹಳ್ಳಿ ಕೆರೆಗೆ ಶಾಸಕ ಜಿ.ಬಿ.ಜ್ಯೋತಿ ಗಣೇಶ್, ಗಂಗಾಪೂಜೆ ನೆರವೇರಿಸಿದರು. ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಧಿಕಾರಿಗಳು ಜಲ ಸಂಗ್ರಹಾರಗಳಿಗೆ ನೀರನ್ನು ತುಂಬಿಸುವ ಕೆಲಸ ಮಾಡಬೇಕು. ನೀರು ಎಲ್ಲಿಯೂ ಪೆÇೀಲಾಗಾದಂತೆ ಎಚ್ಚರ ವಹಿಸಬೇಕೆಂದು ಅಧಿಕಾರಿಗಳಿಗೆ ತಾಕೀತು ಮಾಡಿದರು. ಶಾಸಕರಾದ ಮಾದುಸ್ವಾಮಿ ಅವರ ನೇತೃತ್ವದಲ್ಲಿ ಬಿ.ಎಸ್.ನಾಗೇಶ್, ಮಸಾಲೆ ಜಯರಾಮ್ ಸೇರಿದಂತೆ ಮುಖ್ಯಮಂತ್ರಿ ಕುಮಾರಸ್ವಾಮಿ ಹಾಗೂ ಡಿ.ಕೆ.ಶಿವಕುಮಾರ್ ಅವರನ್ನು ಭೇಟಿ ಮಾಡಿ ತಕ್ಷಣವೇ ಗೊರೂರಿನಿಂದ ತುಮಕೂರಿನ ಹೇಮಾವತಿಗೆ ನೀರು ಹರಿಸುವಂತೆ ಮನವಿ ಮಾಡಲಾಯಿತು. ಇದಕ್ಕೆ ಸ್ಪಂದಿಸಿರುವ ಅವರು ನೀರನ್ನು ಹರಿಸಿದ್ದಾರೆ. ಅವರಿಗೆ ಅಭಿನಂದಿಸುತ್ತೇವೆ ಎಂದರು. ಮಹಾನಗರಪಾಲಿಕೆ ಮೇಯರ್ ಸುದೀಶ್ವರ್, ವರೋಧ ಪಕ್ಷದ ನಾಯಕ ಇಂದ್ರಕುಮಾರ್,ಪಾಲಿಕೆ ಆಯುಕ್ತ ಮಂಜುನಾಥ್, ಸದಸ್ಯರಾದ ಬಾವಿಕಟ್ಟೆ ನಾಗಣ್ಣ, ನಯಾಜ್ ಅಹಮ್ಮದ್ ಸೇರಿದಂತೆ ಮತ್ತಿತರರು ಇದ್ದರು.