ಬಜೆಟ್ ಮುಖ್ಯಾಂಶಗಳು
ಬಳ್ಳಾರಿ ಜಿಲ್ಲೆಯಲ್ಲಿ ವಸ್ತ್ರ ಉದ್ಯಮಕ್ಕೆ ಆದ್ಯತೆ. ತುಮಕೂರಿನಲ್ಲಿ ಸ್ಪೋರ್ಟ್ಸ್ ಮತ್ತು ಫಿಟ್ನೆಸ್ ವಸ್ತುಗಳ ಉತ್ಪಾದನಾ ಘಟಕ ಸ್ಥಾಪನೆ. 4 ವರ್ಷದಲ್ಲಿ 2000 ಕೋಟಿ ಬಂಡವಾಳ ಹೂಡಿಕೆ ಉದ್ದೇಶ ಹೊಂದಿದ್ದು, ಇದರಿಂದ 1 ಲಕ್ಷ ಉದ್ಯೋಗ ಸೃಷ್ಟಿಸುವ ಗುರಿ.
ಕಾರವಾರ, ಯಾದಗಿರಿ, ತುಮಕೂರು, ಹಾವೇರಿಯಲ್ಲಿ ಇಸ್ರೇಲ್ ಮಾದರಿಯ ನೀರಾವರಿ ವ್ಯವಸ್ಥೆ. ಮೊದಲು 5 ಲಕ್ಷದವರೆಗೆ ಸಾಲಕ್ಕೆ ಶೂನ್ಯ ಬಡ್ಡಿ; ಅತ್ಯುತ್ತಮ ಗುಣಮಟ್ಟ ಬೀಜ ದೃಡೀಕರಣ ಕೇಂದ್ರ ಸ್ಥಾಪನೆಗೆ ಸರ್ಕಾರ ನಿರ್ಧಾರ. ಸ್ವಸಹಾಯ ಗುಂಪುಗಳ ಆದಾಯ ಹೆಚ್ಚಿಸಲು ಕಾಯಕ.
ರಾಜ್ಯಾದ್ಯಂತ 1.9 ಲಕ್ಷ ಕೃಷಿ ಹೊಂಡಗಳ ನಿರ್ಮಾಣ. ಇಸ್ರೇಲ್ ಮಾದರಿ ಕೃಷಿ ಪದ್ಧತಿಗೆ 150 ಕೋಟಿ; 5 ಸಾವಿರ ಹೆಕ್ಟೇರ್’ನಲ್ಲಿ ಇಸ್ರೇಲ್ ಮಾದರಿ ಕೃಷಿ ಆರಂಭ
ಸರ್ಕಾರಿ ಅಧಿಕಾರಿಗಳು, ಸಹಕಾರಿ ಸಂಘಗಳ ಮುಖಂಡರ ಸಾಲಮನ್ನಾ ಇಲ್ಲ. ಮೇಕೆದಾಟು ಯೋಜನೆಗೆ ಒಪ್ಪಿಗೆ ಸಿಕ್ಕರೆ ತಿರುವಳಿ ಪಡೆದು ಯೋಜನೆ ಕಾರ್ಯಗತ
ಶಿಕ್ಷಣ ಇಲಾಖೆಗೆ 150 ಕೋಟಿ ರೂಪಾಯಿ ಜಿಲ್ಲಾ ಹಾಗೂ ತಾಲೂಕು ಕೇಂದ್ರಗಳಲ್ಲಿ ಇಂದಿರಾ ಕ್ಯಾಂಟೀನ್. ಕನಕಪುರ ಹೊಸ ವೈದ್ಯಕೀಯ ಕಾಲೇಜು ಸ್ಥಾಪನೆ. ಸಂಧ್ಯಾ ಸುರಕ್ಷಾ ಯೋಜನೆಗೆ 1000 ರೂ.ಗೆ ಏರಿಕೆ
ಮೈಸೂರು ಜಿಲ್ಲೆಯಲ್ಲಿ ICB ಚಿಪ್ ತಯಾರಿಕಾ ಸಂಸ್ಥೆ ಸ್ಥಾಪನೆ. ಬೀದರ್ ಜಿಲ್ಲೆಯಲ್ಲಿ ಕೃಷಿ ಹೊಸ ತಂತ್ರಜ್ಞಾನ ಯಂತ್ರಗಳ ಘಟಕ ಸ್ಥಾಪನೆ. ಈ ಯೋಜನೆಗಳ ಅನುಷ್ಠಾನಕ್ಕೆ ವಿಶೇಷ ತರಬೇತಿ.
ಪ್ರತಿ ಜಿಲ್ಲೆಯಲ್ಲಿ 6 ತಿಂಗಳಿನಿಂದ 2 ವರ್ಷದವರೆಗೆ ತರಬೇತಿ. ಬಂಡವಾಳ ಹೂಡುವ ಕಂಪನಿಗಳಿಗೆ 2000 ಕೋಟಿ ನೆರವು. ಏಳು ಜಿಲ್ಲೆಯಲ್ಲಿ ಕೈಗಾರಿಕಾ ತರಬೇತಿಗೆ 500 ಕೋಟಿ ಮೀಸಲು.
ಬೆಂಗಳೂರಿನಲ್ಲಿ ಬಡವರಿಗೆ ಸೂರು ಕಲ್ಪಿಸಲು ಬಹುಮಹಡಿ ಮನೆ ಯೋಜನೆ ಜಾರಿ.
ಸರ್ಕಾರಿ ಶಾಲಾ ಕಾಲೇಜು ಕಟ್ಟಡ ದುರಸ್ಥಿಗೆ 150 ಕೋಟಿ ರೂ. ಮೀಸಲು
ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಗೆ 100 ಕೋಟಿ ಅನುದಾನ, ಹಾಸನದಲ್ಲಿ ಮೆಗಾ ಹಾಲಿನ ಡೈರಿ ಸ್ಥಾಪನೆಗೆ 50 ಕೋಟಿ ಅನುದಾನ
ಹಾಸನದಲ್ಲಿ 160 ಕೆರೆಗಳ ಅಭಿವೃದ್ಧಿಗೆ 70 ಕೋಟಿ ರೂ. ಅನುದಾನ, ಪ್ರತಿ ಜಿಲ್ಲೆಗೊಂದು ವೃದ್ದಾಶ್ರಮ
ಕೆಂಪೇಗೌಡ ಬಡಾವಣೆಯಲ್ಲಿ 3 ಸಾವಿರ ಹೊಸ ನಿವೇಶನ ಹಂಚಿಕೆ, ಬೆಂಗಳೂರಿನಲ್ಲಿ ಫೆರಿಫರಲ್ ರಿಂಗ್ ರಸ್ತೆ ಹಿಂದುಳಿದ ಮಠಗಳಿಗೆ ಅನುದಾನ
ಹಿರಿಯರ ಮಾಸಾಶನ 600 ರಿಂದ 1 ಸಾವಿರಕ್ಕೆ ಹೆಚ್ಚಳ; ಗರ್ಭಿಣಿಯರಿಗೆ ಪ್ರತಿ ತಿಂಗಳು 1000 ರೂ ಭತ್ಯೆ, 350 ಕೋಟಿ ಮೀಸಲು
ಬಂಡವಾಳ ಹೂಡಲು ವಿಶ್ವಮಟ್ಟದ ಉದ್ಯಮಿಗಳು ಉತ್ಸುಕ ಹಿನ್ನೆಲೆಯಲ್ಲಿ ಕೆಆರ್ಎಸ್ನ್ನು ಡಿಸ್ನಿಲ್ಯಾಂಡ್ ಮಾದರಿಯಲ್ಲಿ ಅಭಿವೃದ್ಧಿ. ದಿವ್ಯಾಂಗರಿಗೆ ಶೇ.3ರಷ್ಟು ಮೀಸಲಾತಿ. ಆನ್ಲೈನ್ನಲ್ಲೇ ಅರ್ಜಿ ಪಡೆದು ದಿವ್ಯಾಂಗರಿಗೆ ಮನೆ ಹಂಚಿಕೆ
ಮಹದಾಯಿ ನದಿ ನೀರು ಹಂಚಿಕೆ ವಿವಾದ. ನ್ಯಾಯಾಧಿಕರಣದ ತೀರ್ಪಿನಂತೆ ಅಭಿವೃದ್ಧಿಗೆ ಕ್ರಮ. ಆಲಮಟ್ಟಿ ಜಲಾಶಯದಲ್ಲಿ ಹೆಚ್ಚುವರಿ ನೀರು ಸಂಗ್ರಹಕ್ಕೆ ಕ್ರಮ. ಹೇಮಾವತಿ ನದಿಯಿಂದ ಹಾಸನ ತಾಲೂಕಿನ 160 ಕೆರೆ ತುಂಬಿಸಲು ಕ್ರಮ.