ಬೆಳಗಾವಿ, ಕಲಬುರಗಿ, ಮೈಸೂರಿನಲ್ಲಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ. ಚಾಮರಾಜನಗರ, ಹಾಸನದಲ್ಲಿ ವೈದ್ಯಕೀಯ ಕಾಲೇಜು ಸ್ಥಾಪನೆ. ಇದಕ್ಕಾಗಿ 200 ಕೋಟಿ ಅನುದಾನ ಮೀಸಲು.

ಬಜೆಟ್ ಮುಖ್ಯಾಂಶಗಳು

ರಾಜ್ಯದಲ್ಲಿ ಅಬಕಾರಿ ಸುಂಕ ಶೇ. 4ರಷ್ಟು ಹೆಚ್ಚಳ. ಮದ್ಯ ಮತ್ತೆ ದುಬಾರಿ, ಖಾಸಗಿ ವಾಹನ ತೆರಿಗೆಯನ್ನು ಪ್ರತಿ ಚದರ ಮೀಟರ್​​ಗೆ ಶೇ.50ರಷ್ಟು ಹೆಚ್ಚಳ.

ಮುಖ್ಯಮಂತ್ರಿ ಮಾತೃಶ್ರೀ ಯೋಜನೆ ಜಾರಿ. ಪ್ರತಿ ಬಿಪಿಎಲ್​ ಕುಟುಂಬದ ಗರ್ಭಿಣಿಯರಿಗೆ 6 ತಿಂಗಳವರೆಗೆ 1 ಸಾವಿರ ರೂಪಾಯಿ ಸಹಾಯಧನ. ಮಾತೃಶ್ರೀ ಯೋಜನೆಗಾಗಿ 350 ಕೋಟಿ ರೂ. ಮೀಸಲು

ಕುಡಿಯುವ ನೀರಿನ ಶುದ್ಧೀಕರಣಕ್ಕೆ ಜಲಧಾರೆ ಯೋಜನೆ ಜಾರಿ. ಜಲಾಶಯಗಳಿಂದ ಕುಡಿಯುವ ನೀರು ಶುದ್ಧೀಕರಣ. ಜಲಧಾರೆ ಯೋಜನೆಗಾಗಿ 53 ಕೋಟಿ ಮೀಸಲು. ಗ್ರಾಮೀಣ ಪ್ರದೇಶದಲ್ಲಿ ಕುಡಿಯುವ ನೀರಿಗಾಗಿ ಜಲಧಾರೆ ಯೋಜನೆ ಜಾರಿ.

ಬೆಂಗಳೂರಿನಲ್ಲಿ 6 ಎಲಿವೇಟೆಡ್​ ಕಾರಿಡಾರ್ ನಿರ್ಮಾಣ. 15,825 ಕೋಟಿ ರೂಪಾಯಿ ವೆಚ್ಚದಲ್ಲಿ ಯೋಜನೆ ಜಾರಿ. ಟ್ರಾಫಿಕ್​ ಕಂಟ್ರೋಲ್​​ಗೆ ಸಿಗ್ನಲ್​ ಫ್ರೀ ಕಾರಿಡಾರ್. ಬೆಳ್ಳಂದೂರು ಕೆರೆ ಅಭಿವೃದ್ಧಿಗೆ 50 ಕೋಟಿ ಮೀಸಲು. ಬೆಂಗಳೂರು ಹೊರವಲಯದಲ್ಲಿ ಫೆರಿಫೆರಲ್​ ರಿಂಗ್ ರಸ್ತೆ.

ಹಿರಿಯ ನಾಗರಿಕರ ಮಾಸಾಶನ ಹೆಚ್ಚಳ. 600 ರೂಪಾಯಿಯಿಂದ 1000 ರೂಪಾಯಿಗೆ ಮಾಸಾಶನ ಹೆಚ್ಚಳ. ಇದರಿಂದ 32 ಲಕ್ಷ ಹಿರಿಯ ನಾಗರಿಕರಿಗೆ ಲಾಭ. ಕರ್ನಾಟಕ ರಾಜ್ಯ ಬ್ರಾಹ್ಮಣ ಅಭಿವೃದ್ಧಿ ಮಂಡಳಿಗೆ 25 ಕೋಟಿ ಮೀಸಲು.

ಕಠೀರವ ಕ್ರೀಡಾಂಗಣದಲ್ಲಿ ಯೋಗ ಕೇಂದ್ರ ಸ್ಥಾಪನೆ

ಕನಕಪುರದಲ್ಲಿ ವೈದ್ಯಕೀಯ ಕಾಲೇಜು ಸ್ಥಾಪನೆ. ಮಂಡ್ಯ ವೈದ್ಯಕೀಯ ವಿಜ್ಞಾನ ಸಂಸ್ಥೆ 800 ಹಾಸಿಗೆ ಆಸ್ಪತ್ರೆಯಾಗಿ ಮೇಲ್ದರ್ಜೆಗೆ. ಮೇಲ್ದರ್ಜೆಗೇರಿಸಲು 30 ಕೋಟಿ ರೂಪಾಯಿ ಮೀಸಲು. ಕಿದ್ವಾಯಿ ಕ್ಯಾನ್ಸರ್​​ ಆಸ್ಪತ್ರೆಯಲ್ಲಿ ಬೋನ್​ ಮ್ಯಾರೋ ಕಸಿ ಚಿಕಿತ್ಸೆ. ಇದಕ್ಕಾಗಿ 12 ಕೋಟಿ ರೂ. ಅನುದಾನ ಮೀಸಲು. ರಾಮನಗರದಲ್ಲಿ 40 ಕೋಟಿ ವೆಚ್ಚದಲ್ಲಿ 300 ಹಾಸಿಗೆ ಸೂಪರ್​ ಸ್ಪೆಷಾಲಿಟಿ ಆಸ್ಪತ್ರೆ.

ಬೆಳಗಾವಿ, ಕಲಬುರಗಿ, ಮೈಸೂರಿನಲ್ಲಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ. ಚಾಮರಾಜನಗರ, ಹಾಸನದಲ್ಲಿ ವೈದ್ಯಕೀಯ ಕಾಲೇಜು ಸ್ಥಾಪನೆ. ಇದಕ್ಕಾಗಿ 200 ಕೋಟಿ ಅನುದಾನ ಮೀಸಲು.

ಚಿತ್ರದುರ್ಗದಲ್ಲಿ ಎಲ್​ಇಡಿ ಬಲ್ಬ್​​​ಗಳ ಉತ್ಪಾದನಾ ಘಟಕ ಸ್ಥಾಪನೆ. ಚೀನಾ ಬಲ್ಬ್​ಗಳ ಹಾವಳಿ ತಡೆಯಲು ರಾಜ್ಯ ಸರ್ಕಾರದಿಂದ ಹೊಸ ಕ್ರಮ.

ನಮ್ಮ ಮೆಟ್ರೋ 3ನೇ ಹಂತದ ವಿಸ್ತರಣೆ. ಜೆ.ಪಿ.ನಗರದಿಂದ ಕೆ.ಆರ್.ಪುರಂ 42.75 ಕಿ.ಮೀ, ಟೋಲ್ ಗೇಟ್​ನಿಂದ ಕಡಬಗೆರೆ 12.5 ಕಿ.ಮೀ, ಗೊಟ್ಟಿಗೆರೆಯಿಂದ ಬಸವಪುರ 3.07 ಕಿ.ಮೀ, ಹೆಗಡೆ ನಗರದಿಂದ ಏರೋಸ್ಪೇಸ್ ಪಾರ್ಕ್ 18.95 ಕಿ.ಮೀ, ಕೋಗಿಲು ಕ್ರಾಸ್​ನಿಂದ ರಾಜಾನುಕುಂಟೆ 10.6. ಕಿ.ಮೀ ಹಾಗೂ ಇಬ್ಬಲೂರಿನಿಂದ ಕರ್ಮಲ್ ರಾಮ್ 6.67 ಕಿ.ಮೀ, ಒಟ್ಟು 95 ಕಿ.ಮೀ ಮೆಟ್ರೊ ವಿಸ್ತರಣೆಗೆ ಸಮ್ಮತಿ.

ರೈತ ಮಹಿಳೆಯರ ಅಭಿವೃದ್ಧಿಗಾಗಿ ಭೂ ಒಡೆತನ ಯೋಜನೆ ಜಾರಿ. ಮಹಿಳೆಯರ ಭೂಮಿಗೆ ಕೊಳವೆ ಬಾವಿ, ಕೃಷಿ ಯಂತ್ರಗಳ ವಿತರಣೆ. ಕಾಲನಿ ಹಾಗೂ ತಾಂಡಾಗಳ ಅಭಿವೃದ್ಧಿಗೆ ‘ಪ್ರಗತಿ ಕಾಲನಿ’ ಯೋಜನೆ ಜಾರಿ. ಇದಕ್ಕಾಗಿ ಕನಿಷ್ಠ 1 ಕೋಟಿಯಿಂದ 5 ಕೋಟಿವರೆಗೂ ಅನುದಾನ. ಪರಿಶಿಷ್ಟ ಜಾತಿ ಹಾಗೂ ಪಂಗಡದ ಪದವೀಧರರಿಗೆ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತರಬೇತಿ.

ರಾಜ್ಯಾದ್ಯಂತ ಆದಿ ಶಂಕರಾಚಾರ್ಯ ಜಯಂತಿ ಆಚರಣೆಗೆ ಸರ್ಕಾರ ನಿರ್ಧಾರ

ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಮೊಬೈಲ್ ಬಿಡಿ ಭಾಗಗಳ ಉತ್ಪಾದನೆ ಘಟಕ ಸ್ಥಾಪನೆ. ಚೀನಾದಿಂದ ಆಮದಾಗುತ್ತಿರುವ ಮೊಬೈಲ್​ಗಳ ಕಡಿವಾಣಕ್ಕೆ ಸರ್ಕಾರದ ಕ್ರಮ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ