ಟ್ರೆಕ್ಕಿಂಗ್ ಮಾಡುವವರಿಗೆ ‘6ನೇ ಮೈಲಿ’ ಎಚ್ಚರಿಕೆಯ ಸಂದೇಶ: ಸಂಚಾರಿ ವಿಜಯ್

ಬೆಂಗಳೂರು: ರಾಷ್ಟ್ರ ಪ್ರಶಸ್ತಿ ಪುರಸ್ಕೃತ ನಟ  ಸಂಚಾರಿ ವಿಜಯ್ ಅಭಿನಯದ 6ನೇ ಮೈಲಿ ಸಿನಮಾ ಈ ತಿಂಗಳಲ್ಲಿ ಬಿಡುಗಡೆಯಾಗಿದ್ದು ತೀವ್ರ ಕುತೂಹಲ ಮೂಡಿಸಿದೆ.
ನಿರ್ದೇಶಕರು ಸ್ವ ಅನುಭವದ ಹಲವು ಘಟನೆಗಳನ್ನು ತೆರೆಯ ಮೇಲೆ ತರಲಾಗಿದೆ, ಚಿತ್ರಕತೆ ಟ್ರೆಕ್ಕಿಂಗ್ ಸಂಬಂಧಿಸಿದ್ದಾಗಿದ್ದು, ಅದರಲ್ಲೂ ವಿಶೇಷವಾಗಿ ಧವಳಗಿರಿಯ 6ನೇ ಮೇಲಿ ಎಂಬ ಸ್ಥಳದ್ದಾಗಿದೆ. ಶೇ, 60 ರಷ್ಟು ಕಥೆ ನೈಜ ಘಟನೆಗಳನ್ನಾಧರಿಸಿದ್ದು, ಉಳಿದ ಶೇ 40 ಭಾಗವನ್ನು ಕಾದಂಬರಿ ಆಧಾರಿತವಾದದ್ದಾಗಿದೆ ಎಂದು ಸಂಚಾರಿ ವಿಜಯ್ ತಿಳಿಸಿದ್ದಾರೆ.
ನಿರ್ದೇಶಕ ಸೀನಿ ಕಥೆಗಾಗಿ ಪೊಲೀಸ್ ಅಧಿಕಾರಿ ಅಣ್ಣಾ ಮಲೈ ಅವರ ಸಹಾಯ ಪಡೆದಿದ್ದಾರೆ, ಟ್ರೆಕ್ಕಿಂಗ್ ವೇಳೆ ಜನ ನಾಪತ್ತೆಯಾಗುವುದಕ್ಕೆ ನಕ್ಸಲೈಟ್ಸ್ ಕೂಡ ಕಾರಣರಾಗಿದ್ದಾರೆ,
ಸಿನಿಮಾದಲ್ಲಿ ವಿಜಯ್ ತಂಡವನ್ನು ಸ್ಥಳಗಳಿಗೆ ಕರೆದುಕೊಂಡು ಹೋಗುವ ಟ್ರೆಕ್ಕರ್ ಅಗಿದ್ದಾರೆ.ಟ್ರೆಕ್ಕಿಂಗ್ ಗಾಗಿ ಹಲವು ಮಂದಿ ತೆರಳುತ್ತಾರೆ , ಆದರೆ ಅಲ್ಲಿ ಅವರ ಹಣೆ ಬರಹ ಏನಾಗಿರುತ್ತದೆ ಎಂಬುದು ಅವರಿಗೆ ತಿಳಿದಿರುವುದಿಲ್ಲ, ಸಿನಿಮಾದಲ್ಲಿ ಟ್ರೆಕ್ಕಿಂಗ್ ಹೋಗುವವರಿಗೆ ಎಚ್ಚರಿಕೆಯ ಸಂದೇಶ ನೀಡಲಾಗಿದೆ ಎಂದು ತಿಳಿಸಿದ್ದಾರೆ,
ಚಿತ್ರಕತೆ ಸಿನಿಮಾಗೆ ಮತ್ತೊಂದು ಪ್ಲಸ್ ಪಾಯಿಂಟ್ ಆಗಲಿದೆ,ಪ್ರತಿಯೊಂದು ಪಾತ್ರವನ್ನು ಪ್ರೇಕ್ಷಕರಿಗೆ ಸಂಪರ್ಕಿಸಲು ನಿರ್ದೇಶಕರು ಪ್ರಯತ್ನಿಸಿದ್ದಾರೆ, ಸಿನಿಮಾದಲ್ಲಿ ಸುಮಾರು 100 ಕಲಾವಿದರಿದ್ದು, ಎಲ್ಲರೂ ರಂಗಭೂಮಿ ಹಿನ್ನೆಲೆ ಉಳ್ಳವರಾಗಿದ್ದಾರೆ, ಪ್ರತಿಯೊಬ್ಬರದ್ದು ಪ್ರಮುಖ ಪಾತ್ರವಾಗಿದೆ.
ಸಿನಿಮಾಗೆ ಸಾಯಿಕಿರಣ್ ಸಂಗೀತ ನೀಡಿದ್ದಾರೆ, ಸಿನಿಮಾದ ಒಂದು ಹಾಡಿಗಾಗಿ ಡೆತ್ ಮೆಟಲ್ ಸಂಗೀತ ಬಳಸಿದ್ದಾರೆ, ಇದು ಕನ್ನಡದಲ್ಲೇ ಮೊದಲ ಬಾರಿಗೆ ಬಳಸಲಾಗಿದೆ, ಈ ಹಾಡಿಗಾಗಿ ಹಾಲಿವುಡ್ ಸಂಗೀತಗಾಕಕ ಸಹಾಯ ಪಡೆದುಕೊಳ್ಳಲಾಗಿದೆ, ಇದಕ್ಕಾಗಿ ನಿರ್ಮಾಪಕರು ಲಂಡನ್ ನ ಮೆಟ್ರೊಪೊಲೀಸ್ ಸ್ಟುಡಿಯೋಗೆ ತೆರಳಿ ಹಾಡನ್ನು ಸಿದ್ದಪಡಿಸಿಕೊಂಡು ಬಂದಿದ್ದಾರೆ.
ನರತಜ್ಞ ಶೈಲೇಶ್ ಕುಮಾರ್  ಸಿನಿಮಾ ನಿರ್ಮಾಣ ಮಾಡಿದ್ದಾರೆ,ಆರ್ ಜೆ ನೇತ್ರಾ ಮತ್ತು ಸುದೇಶ್ ಮತ್ತಿತರರು ನಟಿಸಿದ್ದಾರೆ.
ಧವಳಗಿರಿ ಎಂಬ ಪ್ರದೇಶದಲ್ಲಿ ನಡೆದ ಘಟನೆಯನ್ನಾಧರಿಸಿದ ಕಥೆಯಾಗಿದ್ದು,ಸಿರಸಿ ಮತ್ತು ಯೆಲ್ಲಾಪುರಗಳಲ್ಲಿ ಶೂಟಿಂಗ್ ಮುಗಿಸಲಾಗಿದೆ, ಬಹುತೇಕ ಸಿನಿಮಾ ಶೂಟಿಂಗ್ ರಾತ್ರಿ ವೇಳೆ ನಡೆದಿದ್ದು  ಅದೊಂದು ಆಹ್ಲಾದಕರ ಅನುಭವವಾಗಿತ್ತು ಎಂದು ವಿಜಯ್ ತಿಳಿಸಿದ್ದಾರೆ,.

 

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ