‘ಸೀತಾರಾಮ ಕಲ್ಯಾಣ’ ಕ್ಕೆ ಬರಲಿದ್ದಾರೆ ಬಿ-ಟೌನ್ ಬ್ಯೂಟಿ ಜಾಕ್ವೆಲಿನ್ ಫರ್ನಾಂಡೀಸ್!

ಬೆಂಗಳೂರು: ನಿಖಿಲ್ ಕುಮಾರ ಸ್ವಾಮಿ ಅಭಿನಯದ ಜಾಗ್ವಾರ್ ಸಿನಿಮಾದಲ್ಲಿ ದಕ್ಷಿಣ ಭಾರತದ ಪ್ರಸಿದ್ಧ ನಟಿ ತಮನ್ನಾ ಭಾಟಿಯಾ ವಿಶೇಷ ಹಾಡಿನಲ್ಲಿ ನಟಿಸಿದ್ದರು. ಈಗ ಸೀತಾರಾಮ ಕಲ್ಯಾಣ ಸಿನಿಮಾದಲ್ಲಿ  ಬಾಲಿವುಡ್ ಬೆಡಗಿ ಜಾಕ್ವೆಲಿನ್ ಫರ್ನಾಂಡೀಸ್ ಸ್ಪೆಷಲ್ ಸಾಂಗ್ ಗೆ ಸ್ಟೆಪ್ಸ್ ಹಾಕಲಿದ್ದಾರೆ.
ಆಪ್ ಕಾ ಕ್ಯಾ ಹೋಗಯಾ, ಜಾದು ಕೀ ಜಪ್ಪಿ ಮತ್ತು ಬಾಗಿ -2 ಸಿನಿಮಾದ ಏಕ್ ದೋ ತೀನ್ ಹಾಡಿಗೆ ಸಖತ್ ಸ್ಟೆಪ್ ಹಾಕಿ ಜಾಕ್ವೆಲಿನ್ ಪ್ರಸಿದ್ದರಾಗಿದ್ದಾರೆ.
ಸೀತಾರಾಮ ಕಲ್ಯಾಣಕ್ಕೆ ಜಾಕ್ವೆಲಿನ್ ಕರೆ ತರಲು ಸಿನಿಮಾ ತಂಡ ಮಾತುಕತೆ ನಡೆಸಿದೆ. ಇದಕ್ಕೆ ನಟಿ ಒಪ್ಪಿದ್ದು, ಹಣಕಾಸಿನ ಮಾತುಕತೆ ಮಾತ್ರ ಬಾಕಿಯಿದೆ, ರೇಸ್ -3 ಸಿನಿಮಾದಲ್ಲಿ  ಸಲ್ಮಾನ್ ಖಾನ್ ಜೊತೆ ನಟಿಸುವ ಮೂಲಕ ಲೈಮ್ ಲೈಟ್ ಆಗಿರುವ ಜಾಕ್ವೆಲಿನ್ ಸದ್ಯ ಸುಶಾಂತ್ ಸಿಂಗ್ ರಜಪೂತ್ ಜೊತೆ ನಟಿಸುತ್ತಿದ್ದಾರೆ,
ಸೀತಾರಾಮ ಕಲ್ಯಾಣದಲ್ಲಿ ಡ್ಯಾನ್ಸ್ ಮಾಡಲು ಜಾಕ್ವೆಲಿನ್ ಒಪ್ಪಿದ್ದು, ಎಲ್ಲವೂ ಯೋಜನೆ ಪ್ರಕಾರ ನಡೆದರೇ  ಸ್ಯಾಂಡಲ್ ವುಡ್ ನಲ್ಲಿ ಮೊದಲ ಬಾರಿಗೆ ಜಾಕ್ವೆಲಿನ್ ಹೆಜ್ಜೆ ಹಾಕಲಿದ್ದಾರೆ.
ಚೆನ್ನಾಂಬಿಕಾ ಪ್ರೊಡಕ್ಷನ್ ಅಡಿಯಲ್ಲಿ ನಿರ್ಮಾಣವಾಗುತ್ತಿರುವ ಸೀತಾರಾಮ ಕಲ್ಯಾಣ ಚಿತ್ರವನ್ನು ಹರ್ಷ ನಿರ್ದೇಶಿಸುತ್ತಿದ್ದಾರೆ. ರಚಿತಾ ರಾಮ್, ಮಧು, ಶರತ್ ಕುಮಾರ್ ಮುಂತಾದವರು ನಟಿಸಿದ್ದಾರೆ.

 

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ