ಕೊಪ್ಪಳ ಜೂ. 04. *ಫಸಲ್ ಭೀಮಾ ಯೋಜನೆ ಹಣ ವಿಳಂಬ ರೈತರ ಖಾತೆಗೆ ಜಮಾ ಆಗದ 2016-2017 ರ ಮತ್ತು 2017-2018 ರ ವಿಮಾ ಹಣ ಬಿಡುಗಡೆ ಮಾಡಲು ಒತ್ತಾಯಿಸಿ ಹಾಗೂ ತೊಗರಿ ಮತ್ತು ಕಡಲೆ ಬೆಂಬಲ ಬೆಲೆಗಳ ಬಾಕಿ ಹಣ ಬಿಡುಗಡೆಗಾಗಿ ಒತ್ತಾಯಿಸಿ ರಾಜ್ಯ ಸರ್ಕಾರದ ವಿರುದ್ಧ ಹಾಗೂ ವಿಮಾ ಕಂಪನಿಗಳ ವಿರುದ್ಧ ಬೆಳಗ್ಗೆ ಗಂಜ್ ಸರ್ಕಲ್ ನಿಂದ ಜಿಲ್ಲಾಧಿಕಾರಿ ಭವನದ ವರೆಗೂ ಪಾದಯಾತ್ರೆ ಮಾಡುವ ಮೂಲಕ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು ಈ ಸಂದರ್ಭದಲ್ಲಿ ಜಿಲ್ಲಾ ರೈತ ಮೋರ್ಚಾ ಅಧ್ಯಕ್ಷರು ಮಲ್ಲಿಕಾರ್ಜುನ್ ಗಡಿಗಿ ಅವರ ನೇತೃತ್ವದಲ್ಲಿ ಪ್ರತಿಭಟನೆ ಮಾಡಲಾಯಿತು
. ಈ ಪ್ರತಿಭಟನೆ ಕಾರ್ಯಕ್ರಮದಲ್ಲಿ ಸಂಸದ ಸಂಗಣ್ಣ ಕರಡಿ , ಬೂತ್ ಸಮಿತಿ ಅಧ್ಯಕ್ಷರಾದ ಅಮರೇಶ ಕರಡಿ , ತಾಲ್ಲೂಕು ಪಂಚಾಯಿತಿ ಸದಸ್ಯರಾದ ಪಾಲಾಕ್ಷಪ್ಪ ಗುಂಗಾಡಿ ಮತ್ತು ಚಂದ್ರಕಾಂತ ನಾಯಕ ಎ ಪಿ ಎಮ್ ಸಿ ಸದಸ್ಯರಾದ ಬಸವರಾಜ ಈಶ್ವರಗೌಡ್ರ , ಹಾಗು ಮಹಾಂತೇಶ ಪಾಟೀಲ್ ಮೈನಳ್ಳಿ , ಮಂಜುನಾಥ ಹಂದ್ರಾಳ , ಮತ್ತು ಹಿರಿಯರು , ಮುಖಂಡರು , ಪಕ್ಷದ ಕಾರ್ಯಕರ್ತರು ಅಭಿಮಾನಿಗಳು ಹಾಗು ಮುಂತಾದವರು ಭಾಗವಹಿಸಿದರು