ನಿಮ್ಮ ಲಿವಿಂಗ್ ಫಾರ್ಮುಲಾ ಏನು ಎಂದು ತಿಳಿದಿದೆಯೇ?

ನಿಮ್ಮ ವ್ಯಾಪಾರ-ವ್ಯವಹಾರ, ಕೆಲಸ-ಕಾರ್ಯ, ದಿನನಿತ್ಯದ ಜೀವನದಲ್ಲಿ ಸೋಲು, ನಷ್ಟ, ನಿರಾಶೆ, ಹತಾಷೆ, ವೈಫಲ್ಯಗಳೇ ಕಾಣುತ್ತಿವೆಯೇ…?

Jagapathi Chits and Mutual Funds

ಭವಿಷ್ಯದ ಕುರಿತು ಭಯ ಕಾಡುತ್ತಿದೆಯೇ…?

ಹೀಗಾದರೆ ಮುಂದೇನು ಎಂದು ಆತಂಕಕ್ಕೀಡಾಗಿದ್ದೀರೆ…?

ಇಲ್ಲಿದೆ ಪರಿಹಾರ… ಅದೇ ಲಿವಿಂಗ್ ಫಾರ್ಮುಲಾ

ಚಿಂತೆಯನ್ನು ಬಿಡಿ ಚಟುವಟಿಕೆಯತ್ತ ಸಾಗಿ, ಸೋಲನ್ನು ಗೆಲುವಿನ ಮೆಟ್ಟಿಲುಗಳನ್ನಾಗಿಸಲು, ವೈಫಲ್ಯವನ್ನು ಯಶಸ್ಸಿನ ಮೊದಲ ಹೆಜ್ಜೆಯನ್ನಾಗಿಸಲು ಇಲ್ಲಿದೆ ಮಾರ್ಗೋಪಾಯ. ಡಾ. ಶ್ರೀಕುಮಾರ್ ವದಕ್ಕೆಪ್ಪಾಟ್ ಅವರ ಲಿವಿಂಗ್ ಫಾರ್ಮುಲಾ.

ಸೋಲು, ವಿಫಲತೆ ಎದುರಾದಾಗ ಧೃತಿಗೆಡದೆ ಜೀವನದಲ್ಲಿ ಮುನ್ನಡೆಯುವ ಬಗೆ, ಅಪಜಯವನ್ನೂ ಗೆಲುವಿನಂತೆ ಸ್ವೀಕರಿಸುವ ಮನಸ್ಥಿತಿ, ಸೋಲನ್ನು ಸ್ವೀಕರಿಸುವ ರೀತಿ, ಅದನ್ನು ಗೆಲುವಾಗಿ ಪರಿವರ್ತಿಸುವ ಬಗೆ, ಆತ್ಮವಿಶ್ವಾಸವನ್ನು ಹೆಚ್ಚಿಸಿಕೊಳ್ಳುವ ವಿಧಾನ, ವ್ಯಾಪಾರ-ವ್ಯವಹಾರಗಳಲ್ಲಿ ಉನ್ನತಿ, ಉದ್ಯಮ-ಉದ್ಯೋಗಗಳಲ್ಲಿ ಕಾರ್ಯಕ್ಷಮತೆ, ಕೌಶಲಾಭಿವೃದ್ಧಿ, ಜೀವನಸಮತೋಲನ ಮೊದಲಾದ ಕುರಿತು ಮಾರ್ಗದರ್ಶನಗಳ ಮೂಲಕ ಪರಿಣತ ತಜ್ನರ ಮೂಲಕ ಮಾಹಿತಿ ನೀಡಿ, ಜೀವನೋತ್ಸಾಹಿಗಳನ್ನಾಗಿ ನಿಮ್ಮನ್ನು ನೀವೇ ರೂಪಿಸಿಕೊಳ್ಳುವ ಬಗೆಗಳ ಕುರಿತು ತರಬೇತಿ ನೀಡುವ ವಿಧಾನವೇ ಬಿಸಿನೆಸ್ ಯೋಗಿ ಡಾ. ಶ್ರೀಕುಮಾರ್ ವದಕ್ಕೆಪ್ಪಾಟ್ ಅವರ ಲಿವಿಂಗ್ ಫಾರ್ಮುಲಾ.

ಮಿಸ್ ಶೀಲಾ ಅವರು ಜೀವನ ಮತ್ತು ವ್ಯವಹಾರದಲ್ಲಿ ಹೆಣಗಾಡುತ್ತಿದ್ದರು. ಅವರ ವ್ಯವಹಾರವು ದಿನದಿಂದ ದಿನಕ್ಕೆ ನಷ್ಟ ಅನುಭವಿಸುತ್ತಾಹೋಯಿತು. ಮೂರು ವರ್ಷಗಳ ಹಿಂದೆ ಮಿ. ಶೀಲಾ ಮಹಿಳಾ ಉದ್ಯಮಿಗಳಿಗೆ ಮಾತ್ರವಲ್ಲ ಪುರುಷ ಉದ್ಯಮದಾರರಿಗೂ ಅಸೂಯೆ ಹುಟ್ಟಿಸುವಂತಹ ಯಶಸ್ವಿ ಉದ್ಯಮಿಯಾಗಿದ್ದವರು.  ಅತ್ಯುತ್ತಮ ಜೀವನ,  ಐಷಾರಾಮಿ ಮನೆ,  ಕಾರು, ಅದ್ಬುತವಾದ ಕೆಲಸ, ಯಶಸ್ವೀ ಉದ್ಯಮವನ್ನು ಹೊಂದಿದ್ದರು.

ತಮಗಿಷ್ಟವಾದದದ್ದನ್ನು ಯಾವುದೇ ಆಗಿರಲಿ ಖರೀದಿಸಲು ಬೆಲೆ ನೋಡುತ್ತಿರಲಿಲ್ಲ. ತಮ್ಮ ವ್ಯವಹಾರವನ್ನು ಆರಂಭಿಸುವ ಮೂರು ವರ್ಷಗಳ ಅವಧಿಯಲ್ಲಿಯೇ ಅವರು ಮೂರು ಶಾಖೆಗಳನ್ನು ಹೊಂದಿದ್ದರು. ಅವರ ಕೆಲವು ಸ್ನೇಹಿತರು ಅವರ ಬಗ್ಗೆ ಹೆಮ್ಮೆಪಡುತ್ತಿದ್ದರು ಮತ್ತು ಹಲವರು ಮೂರು ವರ್ಷಗಳ ಅವಧಿಯಲ್ಲಿ ಅವರ ಉತ್ಸಾಹಭರಿತ ಬೆಳವಣಿಗೆ, ಅಭಿವೃದ್ಧಿಯ ಬಗ್ಗೆ ಅಚ್ಚರಿಯನ್ನು ಪಡುತ್ತಿದ್ದರು. ಹೀಗೆ ಎಲ್ಲಾ ಚೆನ್ನಾಗಿಯೇ ನಡೆಯುತ್ತಿತ್ತು, ಆದರೆ ದಿನೇ ದಿನೇ ವ್ಯವಹಾರ ಕಳೆಗುಂದಲು ಪ್ರಾರಂಭಿಸಿತ್ತು. ಶೀಲಾ ಉದ್ಯಮದಲ್ಲಿ ನಷ್ಟ ಹೊಂದಲು ಆರಂಭಿಸಿದರು.  ನಷ್ಟ ಸರಿದೂಗಿಸಲು ಸಾಧ್ಯವಾದಷ್ಟು ಎಲ್ಲವನ್ನು ತಾವೇ ಮಾಡಲು ಆರಂಭಿಸಿದರು. ಸಿಬ್ಬಂದಿಗಳನ್ನು ಕಡಿಮೆ ಮಾಡಿದರು. ಇನ್ನು ಹೆಚ್ಚಿನ ಗಮನಗಳನ್ನು ಉದ್ಯಮದ ಅಭಿವೃದ್ಧಿ ಬಗ್ಗೆ ಹರಿಸತೊಡಗಿದರು. ಆದರೂ  ನಷ್ಟದಿಂದ ಎರಡು ಶಾಖೆಗಳನ್ನು ಮುಚ್ಚಲೇ ಬೇಕಾಯಿತು. ಹಣಕಾಸಿನ ತೊಂದರೆ ಹೆಚ್ಚಾಗಿ, ಸಾಲದ ಹೊರೆ ಅಧಿಕವಾಯಿತು. ಮುಂದೆ ಏನು ಮಾಡಬೇಕೆಂದು ತಿಳಿಯದೇ ಚಿಂತಾಕ್ರಾಂತರಾದರು.

ಸಾಲದೆಂಬಂತೆ ಮನೆ ಪರಿಸ್ಥಿತಿ ಹದಗೆಡತೊಡಗಿತು. ಪತಿ-ಪತ್ನಿ ನಡುವೆ ಮನಸ್ಥಾಪವೂ ಆರಂಭವಾಯಿತು.  ಮಗನೊಂದಿಗಿನ ಸಂಬಂಧವು ಹದಗೆಡುತ್ತಾ ಬಂದಿತು. ಇಂತಹ ಇಕ್ಕಟ್ಟಿನ ಸ್ಥಿತಿಯಲ್ಲಿ ಅವರು ತೆಗೆದುಕೊಂಡ ಒಂದು ಒಳ್ಳೆಯ ನಿರ್ಧಾರ ಓರ್ವ ತರಬೇತಿದಾರರ ಹತ್ತಿರ ವ್ಯಾಪಾರ ತರಬೇತಿ ಪಡೆದುಕೊಂಡಿದ್ದು.

ಆ ತರಬೇತಿದಾರರೇ ಡಾ. ಶ್ರೀಕುಮಾರ್ ವದಕ್ಕೆಪ್ಪಾಟ್.

ತರಬೇತಿಯ ಪ್ರಾರಂಭದ ಹಂತಗಳಲ್ಲಿ ಕೆಲವು  “ಅದು-ಇದು ಹೇಳಿಕೆಗಳು”, ಹೊಗಳಿಕೆಗಳಿಗೆ ಅಂಟಿಕೊಂಡಿದ್ದಾರೆ ಎಂದು ಅನಿಸುತ್ತಿತ್ತು. ತರಬೇತಿಯಲ್ಲಿ ದಿನದಿಂದ ದಿನಕ್ಕೆ ಆತ್ಮವಿಶ್ವಾಸ ಹೆಚ್ಚಿಸುವ ಬಗೆ ಹೇಳಿಕೊಡಲಾಯಿತು. ಜೀವನ ಒಂದು ಹೋರಾಟ ಅದನ್ನು ಹೋರಾಡಿ ಗೆಲ್ಲಲೇಬೇಕು ಎಂಬ ಛಲವನ್ನು ಅರಿತುಕೊಳ್ಳುವಂತೆ ತಿಳಿಸಲಾಯಿತು. ಆಗ ಹೇಳಿಕೆಗಿಂತ ಇದು ನಂಬಿಕೆಯ ಶಕ್ತಿ  ಎಂದು ಶೀಲಾ ಅರಿತು ನಂಬಿದರು.

ಈ ಪದ್ಧತಿಯನ್ನೇ ಶ್ರೀಕುಮಾರ್ ರವರು  ಲಿವಿಂಗ್ ಫಾರ್ಮುಲಾ ಎಂದು ಕರೆಯುತ್ತಾರೆ, ಅಂದರೆ ಜೀವನವನ್ನು ತಮಗೆ ಬೇಕಾದಂತೆ ತಾವೇ ರೂಪಿಸಿಕೊಳ್ಳುವ ಒಂದು ಕಲೆ. ನಮ್ಮ ಜೀವನದಲ್ಲಿ ಲಿವಿಂಗ್ ಫಾರ್ಮುಲಾ ಅಳವಡಿಸಿಕೊಂಡ ನಂತರ, ನಮ್ಮ ಮೆದುಳು ಅದರಂತೆಯೇ ಜೀವನದ ವಿವಿಧ ಸಂದರ್ಭಗಳಲ್ಲಿ ಪ್ರತಿಕ್ರಿಯಿಸಲು ಸಿದ್ದವಾಗುತ್ತದೆ. ಪ್ರತಿಯೊಬ್ಬರು ತಮ್ಮದೇ ಆದ ಸಿಕ್ರೇಟ್ ಲಿವಿಂಗ್ ಫಾರ್ಮುಲಾವನ್ನು ಹೊಂದಿರುತ್ತಾರೆ, ಅದು ಪ್ರತಿಯೊಬ್ಬರಿಗೂ ಪ್ರತ್ಯೇಕವಾಗಿ ಮತ್ತು ಸುಪ್ತವಾಗಿರುತ್ತದೆ.

ನಾವು ಪ್ರತಿಬಾರಿ ಏಕೆ ಹೋರಾಟ ಮಾಡಬೇಕು?” ಎಂಬ ಪ್ರಶ್ನೆ ಕಾಡುತ್ತದೆ ಆದರೆ, ಸಮರ್ಪಕವಾಗಿ ಉತ್ತರವನ್ನು ಎಂದಿಗೂ ಪಡೆಯಲಾಗುವುದಿಲ್ಲ. ಈ  ಸ್ವಪ್ರಶ್ನೆಗೆ ಉತ್ತರ ದೊರೆಯದಿದ್ದಲ್ಲಿ ಇನ್ನಷ್ಟು ಗೊಂದಲಕ್ಕೊಳಗಾಗುವುದು ಸಾಮಾನ್ಯ. ನೀವು ಹೆಚ್ಚು ಪ್ರಶ್ನೆ ಕೇಳಿದಲ್ಲಿ ಹೆಚ್ಚು ಶಕ್ತಿಯನ್ನು ಹರಿಸುತ್ತೀರಿ. ಜೀವನದಲ್ಲಿ ಏನು ನಡೆಯುತ್ತಿದೆ ಎಂಬುದನ್ನು ತಿಳಿದುಕೊಳ್ಳಲು ಹಾಗೂ ಅದನ್ನು ಎದುರಿಸಲು ಉತ್ಸಾಹವನ್ನು ನೀವು ಕಳೆದುಕೊಳ್ಳುತ್ತೀರಿ. ನಿಮಗೆ ಬೆಂಬಲ ಬೇಕು ಎಂದು ಬಯಸುತ್ತೀರಿ, ಆದರೆ ನಿಮ್ಮ ಸುತ್ತಲಿನ ಜನರು ನಿಮ್ಮನ್ನು ಬೆಂಬಲಿಸುತ್ತಿಲ್ಲ ಎಂದು ಭಾವಿಸಲಾರಂಭಿಸುತ್ತೀರಿ. ಇದು ಒಂದು ಸುಳಿಯಾಗಿ ಪರಿವರ್ತಿಸಲು ಆರಂಭವಾಗುತ್ತದೆ. ಈ ಸುಳಿಗಳಿಂದ ಹೊರಬರುವುದು ಹೇಗೆ? ಈ ಋಣಾತ್ಮಕ ಚಿಂತನೆಗಳಿಂದ ದೂರವಾಗುವುದು ಹೇಗೆ ಎಂಬುದರ ಬಗ್ಗೆ ಅರಿವು ಮೂಡಿಸುವುದು ಹಾಗೂ ನಮ್ಮನ್ನು ಜಾಗೃತಗೊಳಿಸುವುದೇ ಈ ವಿಶೇಷ ತರಬೇತಿಯ ಉದ್ದೇಶ.

ನಿಮ್ಮಲ್ಲಿ ಪ್ರಶ್ನೆಯಿದೆ ಎಂದರೆ ಉತ್ತರವೂ ನಿಮ್ಮಲ್ಲೇ ಇರುತ್ತದೆ. ಆದರೆ ನೀವು ಅದನ್ನು ಅರಿತುಕೊಳ್ಳಬೇಕು ಅಷ್ಟೇ. ಗೊಂದಲದ ಮನಸ್ಥಿತಿಯಲ್ಲಿ, ತೊಂದರೆಯ್ಯಲ್ಲಿದ್ದಾಗ ಪ್ರೆಶ್ನೆಗಳಿಗೆ ಉತ್ತರ ಕೇಳಿದಾಗ ಅನಗತ್ಯ ಗೊಂದಲಗಳ ಸುಳಿಗೆ ಸಿಲುಕುತ್ತೀರಿ.  ಇದು  ಹತಾಶೆಗೆ ಕಾರಣವಾಗುತ್ತದೆ, ಹತಾಶೆಯು ಖಿನ್ನತೆಯನ್ನು ಉಂಟುಮಾಡುತ್ತದೆ. ಈ ಗೊಂದಲವನ್ನು ನೀವು ದೂರವಿಡಬೇಕು. ಸಂಕುಚಿತ ಮನಸ್ಥಿತಿ ಬಿಟ್ಟು ವಿಶಾಲತೆಯನ್ನು ರೂಢಿಸಿಕೊಳ್ಳಬೇಕು, ಧನಾತ್ಮಕ ಚಿಂತನೆಗಳಲ್ಲಿ ತೊಡಗಿಕೊಳ್ಳಬೇಕು.

ಹೀಗೆ ಶೀಲಾ ತನ್ನ  ಗೊಂದಲವನ್ನು ದೂರವಿಡಲು ಪ್ರಾರಂಭಿಸಿದರು. ದಿನದಿಂದ ದಿನಕ್ಕೆ ಮತ್ತೆ ಉದ್ಯಮದಲ್ಲಿ ಅಭಿವೃದ್ಧಿಯತ್ತ ಮುಖ ಮಾಡಿದರು. ವ್ಯವಹಾರವು ಅವರ ಪರವಾಗಿ ಕೆಲಸ ಮಾಡಲು ಪ್ರಾರಂಭಿಸಿತು. ಕೇವಲ ಹತ್ತು ತಿಂಗಳ ಅವಧಿಯಲ್ಲಿ,  ವ್ಯವಹಾರ ವಹಿವಾಟು ನಾಲ್ಕು ಪಟ್ಟು ಹೆಚ್ಚಿತು. ಹೀಗೆ ವೈಫಲ್ಯವನ್ನೇ ಯಶಸ್ವೀಯ ಮಾರ್ಗವಾಗಿ ಬದಲಾಯಿಸಿಕೊಂಡರು.

ನಿಮ್ಮ ಲಿವಿಂಗ್ ಫಾರ್ಮುಲಾವನ್ನು ಅನ್ವೇಷಿಸುವುದು ಒಂದು ಅವಕಾಶ, ಅದೊಂದು ದೈವಿಕ ಕರೆ. ನಿಮ್ಮ ಲಿವಿಂಗ್ ಫಾರ್ಮುಲಾವನ್ನು ಕಂಡುಕೊಳ್ಳುವುದರಿಂದ ನಿಮ್ಮ ಗೊಂದಲವನ್ನು ತೆಗೆದು ಹಾಕಲಾಗುತ್ತದೆ. ಧೃಢತೆ ಹೆಚ್ಚಾಗುತ್ತದೆ. ನಿಮ್ಮ ದೈವಿಕ ಕರೆಗೆ ಬಾಗಿಲು ತೆರೆಯುತ್ತದೆ. ಅದನ್ನು ಕಂಡುಕೊಳ್ಳುವುದರಿಂದ ನಿಮ್ಮ ಜೀವನವನ್ನು ನೀವು ಕಾಣುವ ರೀತಿಯಲ್ಲಿ ಒಂದು ಅದ್ಭುತವಾದ ಧನಾತ್ಮಕ ಬದಲಾವಣೆಯಾಗುತ್ತದೆ.  ಸಾಕ್ಷಾತ್ಕಾರವಾಗುತ್ತದೆ.  ಚಿಂತನಾ ಲಹರಿಗಳನ್ನು ವಿಭಿನ್ನ ರೀತಿಯಲ್ಲಿ  ಹೊಸ ಪ್ರಪಂಚಕ್ಕೆ ಪರಿವರ್ತಿಸುತ್ತದೆ. ಜೀವನ ಮತ್ತು ವ್ಯವಹಾರದಲ್ಲಿ ಸವಾಲುಗಳನ್ನು ತೆಗೆದುಕೊಳ್ಳಲು ನೀವು ಹೆಚ್ಚು ಧೈರ್ಯಶಾಲಿ ಮತ್ತು ವಿಶ್ವಾಸ ಹೊಂದುತ್ತೀರಿ.

ನಿಮ್ಮ ವ್ಯವಹಾರದಲ್ಲಿ ಇಂತಹ ಪವಾಡವನ್ನು ಉಂಟುಮಾಡಲು ವೃತ್ತಿಪರ ಗುರು, ಟ್ರಾನ್ಸ್ಫರ್ಮೇಷನ್ ಕೋಚ್ ನ ಅಗತ್ಯವಿರುತ್ತದೆ. ಅವರು ಯೋಚನೆ ಮಾಡುವುದರಲ್ಲಿ ಪರಿಣಿತರು ಹಾಗೂ ನಿಮ್ಮ ಸಮಸ್ಯೆಗಳಿಗೆ ಪರಿಹಾರಗಳನ್ನು ನೀಡುವಲ್ಲಿ ಉತ್ತಮ ಮಾರ್ಗದರ್ಶಕರು. ಸರಿಯಾದ ನಿರ್ಧಾರಗಳನ್ನು ತೆಗೆದುಕೊಳ್ಳುವಲ್ಲಿ ಅವರು ನೆರವಾಗುತ್ತಾರೆ. ಅಂತಹ ಒಬ್ಬ ಮೇಧಾವಿ ಟ್ರಾನ್ಸ್ಫರ್ಮೇಷನ್ ಕೋಚ್ ಡಾ. ಶ್ರೀಕುಮಾರ್ ವದಕ್ಕೆಪ್ಪಾಟ್

ಡಾ. ಶ್ರೀಕುಮಾರ್ ವದಕ್ಕೆಪ್ಪಾಟ್ ಅವರನ್ನು ಸಂಪರ್ಕಿಸಲು

ದೂರವಾಣಿ ಸಂಖ್ಯೆ. 9845823272

ಇಮೇಲ್. sreekumar@result-coach.com / sreekumar@businessyogi.co.in / sreekumarv24@gmail.com

 

Jagapathi Chits and Mutual Funds

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ