ಆಕಸ್ಮಿಕ ಬೆಂಕಿಗೆ ಮನೆ ಭಸ್ಮ

ಕುಣಿಗಲ್, ಜು.2-ಆಕಸ್ಮಿಕ ಬೆಂಕಿಯಿಂದಾಗಿ ಮನೆ ಸಂಪೂರ್ಣ ಹೊಗೆಯಿಂದ ತುಂಬಿಕೊಂಡು ಮನೆಯ ವಸ್ತುಗಳು ಸಂಪೂರ್ಣ ಸುಟ್ಟು ಹೋಗಿರುವ ಘಟನೆ ಪಟ್ಟಣ ಪೆÇಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ನವಚೇತನ ಅಂಧರ ಮಕ್ಕಳ ಶಾಲೆಯ ಸಂಸ್ಥಾಪಕ ದಿವಂಗತ ಕೆಂಪೇಗೌಡರ ಪತ್ನಿ ಕಮಲಮ್ಮ (70) ಅವರು ಕೆ.ಎಸ್.ಅಗ್ರಹಾರದಲ್ಲಿ ಒಬ್ಬರೇ ವಾಸವಿದ್ದಾರೆ. ನಿನ್ನೆ ಸಂಜೆ ನೀರು ಕಾಯಿಸಲು ನೀರಿನ ಒಲೆಗೆ ಬೆಂಕಿ ಹಚ್ಚಿದ್ದರು.ಈ ವೇಳೆ ಬೆಂಕಿಯ ತೀವ್ರತೆ ಜಾಸ್ತಿಯಾಗಿ ಪಕ್ಕದಲ್ಲೇ ಇದ್ದ ತೆಂಗಿನ ಸಿಪ್ಪೆಗೆ ಬೆಂಕಿ ಹೊತ್ತಿಕೊಂಡು ಅಕ್ಕಪಕ್ಕದ ವಸ್ತುಗಳಿಗೆಲ್ಲ ಬೆಂಕಿ ತಗುಲಿ ಹೊಗೆ ಆವರಿಸಿಕೊಂಡಿದೆ. ತಕ್ಷಣವೇ ಕಮಲಮ್ಮ ಅವರು ಮನೆಯಿಂದ ಹೊರಗೆ ಓಡಿ ಬಂದಿದ್ದಾರೆ. ಬೆಂಕಿಯ ತೀವ್ರತೆ ಹೆಚ್ಚಾದ ಪರಿಣಾಮ ಮನೆಯಲ್ಲಿದ್ದ ಎಲ್ಲಾ ಸಾಮಾನುಗಳಿಗೆ ಬೆಂಕಿಗೆ ಆಹುತಿಯಾಗಿದೆ. ತಕ್ಷಣವೇ ಸ್ಥಳೀಯರು ಅಗ್ನಿಶಾಮಕದಳ ಹಾಗೂ ಪೆÇಲೀಸರಿಗೆ ವಿಷಯ ತಿಳಿಸಿದ್ದಾರೆ.
ಸ್ಥಳಕ್ಕಾಗಮಿಸಿದ ಅಗ್ನಿಶಾಮಕದಳದ ಸಿಬ್ಬಂದಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದೆ. ಪಟ್ಟಣ ಪೆÇಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ