ಬೀದರ್:ಫೆ-25: ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಅವರು ಇಂದು ಬೀದರ್ ನ ಗುರುದ್ವಾರಕ್ಕೆ ಭೇಟಿ ನೀಡಿ ಗುರು ಗ್ರಂಥ ಸಾಹೇಬ ದರ್ಶನ ಪಡೆದರು.
ಬೀದರ್ ನ ಗುರುದ್ವಾರಕ್ಕೆ ಬಂದ ಶಾ ಅವರನ್ನು ಗುರುದ್ವಾರ ಪ್ರಬಂಧಕ ಸಮಿತಿ ಅಧ್ಯಕ್ಷ ಬಲಬೀರ್ ಸಿಂಗ್ ಶಾಲು ಹೊದಿಸಿ ಬೆಳ್ಳಿ ಖಡ್ಗ ನೀಡಿ ಗೌರವಿಸಿದರು.
ನಂತರ ಅಮೃತ ಕುಂಡದ ಬಳಿ ಬಂದು ತೀರ್ಥ ಸ್ವೀಕರಿಸಿದರು. ಅಲ್ಲಿಂದ ಗುರುದ್ವಾರಕ್ಕೆ ಬಂದು ಶಿರಬಾಗಿ ನಮಸ್ಕರಿಸಿದರು. ಆವರಣದಲ್ಲಿ 20 ನಿಮಿಷ ಕಳೆದು ಬೀದರ್ ತಾಲ್ಲೂಕಿನ ರೇಕುಳಕಿ ಮೌಂಟ್ಗೆ ತೆರಳಿದರು.
ಈ ವೇಳೆ ಅಮಿತ್ ಶಾ ಪತ್ನಿ ಸೋನಲ್ ಶಾ,ಸಂಸದ ಭಗವಂತ ಖೂಬಾ, ವಿಧಾನ ಪರಿಷತ್ ಸದಸ್ಯ ರಘುನಾಥ ಮಲ್ಕಾಪುರೆ, ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಶೈಲೇಂದ್ರ ಬೆಲ್ದಾಳೆ ಮೊದಲಾದವರು ಉಪಸ್ಥಿತರಿದ್ದರು.
Bidar,BJP President Amit Shah, visits,Gurudwara