ಬೆಂಗಳೂರು, ಜೂ.19- ಮತ್ತೊಂದು ಆದಾಯ ತೆರಿಗೆ ವಂಚನೆ ಪ್ರಕರಣ ದಾಖಲಾಗುತ್ತಿದ್ದಂತೆ ಜಲ ಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ಗೆ ಹೊಸ ಸಂಕಷ್ಟ ಎದುರಾಗಿದೆ.
ಇಂದು ವಿಚಾರಣೆ ನಡೆಸಿದ ಎಂ.ಎಸ್.ಆಳ್ವ ಅವರಿದ್ದ ಆರ್ಥಿಕ ಅಪರಾಧ ನ್ಯಾಯಾಲಯದ ಪೀಠ ಆಗಸ್ಟ್ 2ರಂದು ಡಿ.ಕೆ.ಶಿವಕುಮಾರ್ ಸೇರಿದಂತೆ ಎಲ್ಲಾ ಆರೋಪಿಗಳು ಖುದ್ದು ವಿಚಾರಣೆಗೆ ಹಾಜರಾಗಬೇಕೆಂದು ಸಮನ್ಸ್ ಜಾರಿ ಮಾಡಿದೆ.
ಆಂಜನೇಯ , ಹನುಮಂತಯ್ಯ, ರಾಜೇಂದ್ರ , ಸಚಿನ್ ನಾರಾಯಣ್, ಸುನೀಲ್ ಕುಮಾರ್ ಸೇರಿದಂತೆ ಇನ್ನು ಹಲವರನ್ನು ಆರೋಪಿಗಳನ್ನಾಗಿ ಮಾಡಲಾಗಿದೆ.
ಐಪಿಸಿ ಸೆಕ್ಷನ್ 277, 278 , 193, 199, 120ಬಿ ಕಾಯ್ದೆಯಡಿ ಐಟಿ ಇಲಾಖೆ ದೂರು ದಾಖಲಿಸಿತ್ತು.