ಹೊಸದಿಲ್ಲಿ: ಇದು ಸಾರ್ವಕಾಲಿಕ ಅನುಭವ, ಒಮ್ಮೊಮ್ಮೆ ಕೆಲವು ಉತ್ಪನ್ನಗಳು ಅಥವಾ ಐಟಂಗಳನ್ನು ವೆಬ್‌ನಲ್ಲಿ ಹುಡುಕುತ್ತಿದ್ದಾಗ ನಿಮಗಿಷ್ಟವಾದ ಕಾರ್ಯಕ್ರಮಗಳ ವಿಡಿಯೋಗಳನ್ನು ವೀಕ್ಷಿಸುತ್ತಿದ್ದಾಗ ಅವುಗಳ ಬದಲಾಗಿ ಜಾಹೀರಾತುಗಳು ಡಿಸ್‌ಪ್ಲೇ ಮೇಲೆ ಬರುತ್ತವೆ.
ಅಚಾನಕ್ ಆಗಿ ಬರುವ ಬೇಡ ಎನಿಸಿದ ಜಾಹೀರಾತಿನಿಂದ ನಿಮ್ಮ ಮೂಡ್ ಹಾಳಾಗುವುದಲ್ಲದೇ, ಕೋಪವೂ ಬರುವುದು. ಆದರೆ Google ಇದೀಗ ಆ ತೊಂದರೆಯನ್ನು ತಪ್ಪಿಸಲು ಸಿದ್ಧವಾಗಿದೆ. ಪ್ರಪಂಚದ ಅತಿದೊಡ್ಡ ಜಾಹೀರಾತು ಜಾಲವೆನಿಸಿರುವ ವೆಬ್ ಕೆಲವೊಂದಿಷ್ಟು ನಿಯಂತ್ರಣಗಳು ಹಾಗೂ ಪ್ರತ್ಯೇಕ ಜಾಹೀರಾತು ವೀಕ್ಷಣೆಗೆ ಬೇಕಾದ ಸಿಸ್ಟಮ್ ತಯಾರಿಸಿದೆ.
2012ರಲ್ಲಿ ಜಾಹೀರಾತು ಬ್ಯಾನರ್‌ಗಳನ್ನು ಮ್ಯೂಟ್ ಮಾಡುವ ಆಯ್ಕೆ ನೀಡಿದ್ದ ಗೂಗಲ್ ಈಗ ಸಂಪೂರ್ಣ ಜಾಹೀರಾತನ್ನು ಸ್ಥಗಿತ ಮಾಡುವ ಟೆಕ್ನಾಲಜಿ ತಯಾರಿಯಲ್ಲಿದೆ. ಇದು YouTube ಮತ್ತು Gmailಗೂ ಅನ್ವಯಿಸುತ್ತದೆ. ಈಗ ಬಳಕೆದಾರ ನೇರವಾಗಿ ನಿರ್ದಿಷ್ಟ ಕಂಪನಿಗಳ, ಬ್ರಾಂಡ್‌ಗಳ ಜಾಹೀರಾತುಗಳನ್ನು ಶಾಶ್ವತವಾಗಿ ಬರದ ಹಾಗೆ ಮಾಡಬಹುದು.
ಕಳೆದ ವರ್ಷ ಜಾಹೀರಾತು ಮಾರಾಟದಲ್ಲಿ $ 95.4 ಬಿಲಿಯನ್ ಗಳಿಸಿದ ಗೂಗಲ್, ಆನ್‌ಲೈನ್ ಮಾರ್ಕೆಟಿಂಗ್ ಮೂಲಕ ಬಳಕೆದಾರರ ಮೆಚ್ಚುಗೆಗೆ ಪಾತ್ರವಾಗಿತ್ತು. ಆದರೆ ಗ್ರಾಹಕರನ್ನು ಗುರಿಯಾಗಿಟ್ಟುಕೊಂಡು ಅಂತರ್ಜಾಲ ಬಳಕೆದಾರರ ವೈಯಕ್ತಿಕ ಮಾಹಿತಿಯನ್ನು ಹೇಗೆ ಬಳಸುತ್ತಾರೆ ಎಂಬ ಬಗ್ಗೆ ಹೆಚ್ಚು ಎಚ್ಚರಿಕೆಯಿಂದ ಉನ್ನತ ಮಟ್ಟದ ಪರಿಶೀಲನೆ ನಡೆಸುತ್ತಿದೆ. ಪ್ರತಿದಿನ ಶತಕೋಟಿ ಜನರು ಡೇಟಾದೊಂದಿಗೆ ನಮ್ಮ ಮೊರೆ ಹೋಗುತ್ತಾರೆ ಎಂದು ಗೂಗಲ್‌ನ ಪ್ರದರ್ಶನ ಜಾಹೀರಾತು ವ್ಯವಹಾರ ನಡೆಸುತ್ತಿರುವ ಉಪಾಧ್ಯಕ್ಷ ಬ್ರಾಡ್ ಬೆಂಡರ್ ಹೇಳಿದರು.
ಹೊಸ ವಿಶೇಷತೆಗಳನ್ನೊಳಗೊಂಡ ಈ ಸಾಪ್ಟವೇರ್ ಆ್ಯಡ್ ಸೆಟಿಂಗ್‌ನಲ್ಲಿ ಆದಷ್ಟು ಬೇಗ ದೊರೆಯುತ್ತದೆ ಎಂದು ಕಂಪನಿ ತಿಳಿಸಿದೆ.