ಇಲಾಖೆಯಲ್ಲಿ ಈ ವರೆಗೂ ಹಸ್ತಕ್ಷೇಪ ಮಾಡಿಲ್ಲ

ಹುಬ್ಬಳ್ಳಿ- ನೀರಾವರಿ ಇಲಾಖೆಯಲ್ಲಿ ಈವರೆಗೂ ನಾನು ಹಸ್ತಕ್ಷೇಪ ಮಾಡಿಲ್ಲ. ಒಂದು ವೇಳೆ ಕಾಂಗ್ರೆಸ್ ನಾಯಕರ ಭಾವನೆ ಇದಲ್ಲಿ, ಹಸ್ತಕ್ಷೇಪ ಮಾಡಿದ್ದೇನೆಂದು ಕಾಂಗ್ರೆಸ್ ಅಧ್ಯಕ್ಷರು ಕೇಳಿದರೆ ಉತ್ತರ ಕೊಡುತ್ತೇನೆ ಎಂದು ಲೋಕೋಪಯೋಗಿ ಸಚಿವ ಎಚ್ ಡಿ ರೇವಣ್ಣಾ ಹೇಳಿದರು. ಹುಬ್ಬಳ್ಳಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಇಲಾಖೆಗಳಲ್ಲಿ ಹಸ್ತಕ್ಷೇಪ ವಿಚಾರವಾಗಿ ಈ ಹಿಂದೆಯು ಹೇಳಿದೆ ಇಗಲ್ಲೂ ಹೇಳುತ್ತಿದ್ದೆನೆ ಕಾಂಗ್ರೆಸ್ ಅಧ್ಯಕ್ಷರಿಗೆ ಬಹಿರಂಗವಾಗಿ ಹೇಳಿದ್ದೇನೆ‌, ಡಿ.ಕೆ. ಶಿವಕುಮಾರ ಮತ್ತು ನಾನು ಚೆನ್ನಾಗಿದ್ದೀವಿ, ಪೂರ್ಣ ಬಜೆಟ್ ಅಥವಾ ಪೂರಕ ಬಜೆಟ್ ಬಗ್ಗೆ ನನ್ನ ಸಲಹೆ ಕೇಳಿದ್ರೆ ಹೇಳ್ತೀನಿ. ಸೂಪರ್ ಸಿಎಮ್ ಎಂದು ನನಗೆ ಪುಕ್ಕಟೆ ಪ್ರಚಾರ ಸಿಗುತ್ತಿದೆದರು ಅಲ್ಲದೆ ರಾಜ್ಯದಲ್ಲಿ ಯಾರೂ ಧೃತಿಗೆಡಬೇಕಿಲ್ಲ, ಐದು ವರ್ಷ ನಾವೇ ಇರ್ತೀವಿ ನಾನು ನನ ಇಲಾಖೆಯ ಸಂಬಂಧಿಸಿದ ಕೆಲಸ ಬಿಟ್ಟು ಬೇರೇನೂ ಮಾಡಿಲ್ಲ ಮಾಡೋದು ಇಲ್ಲಾ, ಉನ್ನತ ಶಿಕ್ಷಣಕ್ಕೆ ಬಸವರಾಜ್ ಹೊರಟ್ಟಿಯವರ ಕೊಡುಗೆ ದೊಡ್ಡದಿದೆ ಅವರು ನಮ್ಮ ಪಕ್ಷದ ನಾಯಕರು, ಯಾವ ಖಾತೆ ಕೊಟ್ಟರೂ ಅವರಿಗೆ ನಿರ್ವಹಿಸುವ ಸಾಮರ್ಥ್ಯವಿದೆ ಬರುವ ದಿನಗಳಲ್ಲಿ ಹೊರಟ್ಟಿಯವರಿಗೆ ಸಚಿವ ಸ್ಥಾನ ಕೊಡುವಂತೆ ದೇವೇಗೌಡರು, ಕುಮಾರಸ್ವಾಮಿಯವರಿಗೆ ಕೇಳುತ್ತೇನೆ. ರಂಗಪ್ಪರನ್ನು ಸಲಹೆಗಾರರಾಗಿ ನೇಮಕ ಮಾಡುವುದು ಹಾಗೂ ರೋಹಿಣಿ ಸಿಂಧೂರಿಯನ್ನು ಹಾಸನ ಜಿಲ್ಲಾಧಿಕಾರಿ ಮಾಡುವ ವಿಚಾರ ಸಿ.ಎಮ್‌. ನೋಡಿಕೊಳ್ಳುತ್ತಾರೆ ಎಂದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ