ಕಾನ್ಪುರ್, ಜೂ.16-ಮಣ್ಣು ತುಂಬಿದ್ದ ಟ್ರಕ್ಕೊಂದು ತಾತ್ಕಾಲಿಕ ನಿರ್ಮಾಣದ ಮನೆಗೊಂದಕ್ಕೆ ಅಪ್ಪಳಿಸಿದ ಪರಿಣಾಮ ಒಂದೇ ಕುಟುಂಬದ ಆರು ಮಂದಿ ಮೃತಪಟ್ಟು, ಇತರ ನಾಲ್ವರು ಗಾಯಗೊಂಡ ಭೀಕರ ದುರಂತ ಉತ್ತರಪ್ರದೇಶದ ಮಹಾರಾಜ್ಪುರ್ನ ಬಳಿ ಇಂದು ಮುಂಜಾನೆ ಸಂಭವಿಸಿದೆ.
ರಾಷ್ಟ್ರೀಯ ಹೆದ್ದಾರಿ-2ರಲ್ಲಿ ಸಂಭವಿಸಿದ ಈ ದುರ್ಘಟನೆಯಲ್ಲಿ ತಂದೆ, ಆತನ ಮಗ, ಸೊಸೆ, ಪುತ್ರಿ ಹಾಗೂ ಇಬ್ಬರು ಮೊಮ್ಮಕ್ಕಳು ಮೃತಪಟ್ಟಿದ್ದಾರೆ.
ಗಾಯಗೊಂಡ ಇತರ ನಾಲ್ವರನ್ನು ಆಸ್ಪತ್ರೆಗೆ ಸೇರಿಸಲಾಗಿದ್ದು, ಇಬ್ಬರ ಸ್ಥಿತಿ ಶೋಚನೀಯವಾಗಿದೆ ಎಂದು ಪೆÇಲೀಸ್ ವರಿಷ್ಠಾಧಿಕಾರಿ (ಗ್ರಾಮಾಂತರ) ಪ್ರದ್ಯುಮ್ನ ಸಿಂಗ್ ತಿಳಿಸಿದ್ದಾರೆ.
ಚಾಲಕನ ನಿಯಂತ್ರಣ ತಪ್ಪಿ ತಾತ್ಕಾಲಿಕ ಬಿಡಾರದ ಮನೆಗೆ ಅಪ್ಪಳಿಸಿತು. ಮುಂಜಾನೆಯ ನಿದ್ರೆಯಲ್ಲಿದ್ದವರಿಗೆ ಏನಾಗುತ್ತಿದೆ ಎಂಬುದು ತಿಳಿಯುವುದಕ್ಕೆ ಮುನ್ನವೇ ಅವರಲ್ಲಿ ಆರು ಮಂದಿ ಅಸುನೀಗಿದರು.