ಭಾರೀ ಪ್ರಮಾಣದ ಹಣ ಪಡೆದು ವಂಚಿಸಿದ ಆರೋಪ, ಭಾರತೀಯ ಮೂಲದ ಅಮೆರಿಕದ ಉದ್ಯಮಿ

ನ್ಯೂಯಾರ್ಕ್, ಜೂ.16- ಹೂಡಿಕೆದಾರರು, ವೈದ್ಯರು ಮತ್ತು ರೋಗಿಗಳಿಂದ ಭಾರೀ ಪ್ರಮಾಣದ ಹಣ ಪಡೆದು ವಂಚಿಸಿದ ಆರೋಪದ ಮೇಲೆ ಭಾರತೀಯ ಮೂಲದ ಅಮೆರಿಕದ ಉದ್ಯಮಿ ಮತ್ತು ಪಾಲುಗಾರ್ತಿಯನ್ನು ನ್ಯಾಯಾಲಯವೊಂದು ದೋಷಿಗಳು ಎಂದು ಪರಿಗಣಿಸಿದೆ.
ರಕ್ತ ಪರೀಕ್ಷೆ ಕಂಪೆನಿಯೊಂದರ ಮಾಜಿ ಅಧ್ಯಕ್ಷ ರಮೇಶ್ ಸನ್ನಿ ಬಲ್ವಾನಿ(53) ಹಾಗೂ ಸಂಸ್ಥೆಯ ಸಹ ಸ್ಥಾಪಕಿ ಎಲೆಜಬೆತ್ ಹೋಮ್ಸ್ (34) ಅಮೆರಿಕದ ಮ್ಯಾಜಿಸ್ಟ್ರೇಟ್ ಕೋರ್ಟ್‍ನಿಂದ ದೋಷಿಗಳಾಗಿ ಪರಿಗಣಿಸಲ್ಪಟ್ಟಿದ್ದಾರೆ.
ರಕ್ತ ಪರೀಕ್ಷೆ ಮತ್ತು ಇತರೆ ರೋಗಗಳ ಪರೀಕ್ಷಾ ಸಾಧನಗಳ ನಿಖರತೆ ಬಗ್ಗೆ ಸುಳ್ಳು ಭರವಸೆಗಳನ್ನು ನೀಡಿ ವೈದ್ಯರು, ಹೂಡಿಕೆದಾರರು ಮತ್ತು ರೋಗಿಗಳಿಂದ ಕೋಟ್ಯಂತರ ರೂ.ಗಳ ಹಣ ಪಡೆದು ವಂಚಿಸಿದ ಆರೋಪಕ್ಕೆ ಇವರಿಬ್ಬರು ಗುರಿಯಾಗಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ