10ನೇ ಬೆಂಗಳೂರು ಅಂತರಾಷ್ಟ್ರೀಯ ಸಿನಿಮೋತ್ಸವಕ್ಕೆ ಚಾಲನೆ: ಭಾಷೆ, ಧರ್ಮವವೆಲ್ಲವನ್ನು ಮೀರಿ ಒಂದುಗೂಡಿಸುವ ಶಕ್ತಿ ಸಿನಿಮಾಗಿದೆ ಎಂದ ನಟಿ ಕರೀನಾ ಕಪೂರ್

ಬೆಂಗಳೂರು: ಫೆ-23: ಎಲ್ಲ ಭಾಷೆ, ಧರ್ಮ, ಜಾತಿ ಎಲ್ಲವನ್ನೂ ಮೀರಿ ಜನರನ್ನು ಒಂದುಗೂಡಿಸುವ ಶಕ್ತಿ ಸಿನಿಮಾರಂಗಕ್ಕಿದೆ. ಸಿನಿಮೋತ್ಸವಕ್ಕೆ ನೆರೆದಿದ್ದ ಜನಸ್ತೋಮ ಹಾಗೂ ಸರ್ಕಾರದಿಂದ ದೊರಕುತ್ತಿರುವ ಸಹಕಾರದಿಂದ ಸಂತಸವಾಗುತ್ತದೆ ಎಂದುಬಾಲಿವುಡ್ ನಟಿ ಕರೀನಾ ಕಪೂರ್ ಅಭಿಪ್ರಾಯಪಟ್ಟಿದ್ದಾರೆ.

ವಿಧಾನಸೌಧದ ಮುಂಭಾಗದಲ್ಲಿ ಬೆಂಗಳೂರು ಅಂತರರಾಷ್ಟ್ರೀಯ ಸಿನಿಮೋತ್ಸವಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಬೆಂಗಳೂರಿನಲ್ಲಿ ನಡೆಯುತ್ತಿದ್ದರೂ ಕೇವಲ ಕನ್ನಡ ಸಿನಿಮಾ ನೋಡಲು ನಾವಿಲ್ಲಿ ಬಂದಿಲ್ಲ. ವಿಶ್ವದ ಸಿನಿಮಾಗಳು ಪ್ರದರ್ಶಿತ ವಾಗುತ್ತವೆ. ಚಲನಚಿತ್ರ ಕ್ಷೇತ್ರಕ್ಕೆ ಕರ್ನಾಟಕದ ಸರ್ಕಾರ ಇಷ್ಟು ಪ್ರೋತ್ಸಾಹ ನಿಡುತ್ತಿರುವುದನ್ನು ಕಂಡು ಒಬ್ಬ ಕಲಾವಿದೆಯಾಗಿ ನಿಜಕ್ಕೂ ಸಂತಸ ತಂದಿದೆ ಎಂದ ಕರೀನಾ, ಕನ್ನಡದ ಚಲನಚಿತ್ರ ದಲ್ಲೂ ಒಮ್ಮೆ ನಟಿಸಿ ರಂಜಿಸುತ್ತೇನೆ ಎಂದು ಹೇಳಿದರು.

ಕಪೂರ್ ಕುಟುಂಬಕ್ಕೆ ಕರ್ನಾಟಕ, ಅದರಲ್ಲೂ ಮೈಸೂರು ಅಂದರೆ ಅಚ್ಚು ಮೆಚ್ಚು. ಅನೇಕ ಉತ್ತಮ ಚಿತ್ರಗಳಿಗೆ ಮೈಸೂರು ಪ್ರೇರಣೆ ನೀಡಿದೆ ಎಂದರು. ನನ್ನ ತಾತ ನಕ್ಷತ್ರದ ರೂಪದಲ್ಲಿ ಈಗ ಬೆಂಗಳೂರನ್ನು ನೋಡುತ್ತಿದ್ದಾರೆ. ಅವರು ಬೆಂಗಳೂರನ್ನು ಪ್ರೀತಿಸುತ್ತಿದ್ದರು. ಇಲ್ಲಿ ಅವರ ಅನೇಕ ಸಿನಿಮಾಗಳ ಚಿತ್ರೀಕರಣ ನಡೆದಿದೆ. ಭಾರತೀಯ ಚಿತ್ರೋದ್ಯಮದಲ್ಲಿ ಬೆಂಗಳೂರು ಒಂದು ಪ್ರಮುಖ ನಗರವಾಗಿದೆ ಎಂದರು.

ಚಿತ್ರೋತ್ಸವದಲ್ಲಿ ಅತಿಥಿಯಾಗಿ ಭಾಗವಹಿಸಿರುವ ಇರಾನ್‍ ನಟಿ ಫಾತ್ ಮಾ ಮೋಟಮೆಡ್‍ ಆರ್ಯ ಅವರು ಕೂಡ ಸಿನಿಮಾದ ಮಾಂತ್ರಿಕ ಶಕ್ತಿಯ ಬಗ್ಗೆ ಬೆರಗು ವ್ಯಕ್ತಪಡಿಸಿದರು. ‘ಸಿನಿಮಾ ಚಿತ್ರರಸಿಕರನ್ನು ಒಂದು ಕುಟುಂಬವನ್ನಾಗಿ ರೂಪಿಸುತ್ತದೆ. ಎಲ್ಲಿ ಸಿನಿಮಾ ಇರುವುದೋ ಅಲ್ಲಿ ಶಾಂತಿ ಹಾಗೂ ಮಾನವೀಯತೆ ಇರುತ್ತದೆ. ಭಾರತೀಯರ ಸಿನಿಮಾಪ್ರೇಮ ವಿಶ್ವಪ್ರಸಿದ್ಧವಾದುದು ಎಂದರು.

10th editionBengaluru International Film Festival,Kareena Kapoor

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ