ರೈಲ್ವೆ ನಿಲ್ದಾಣದಲ್ಲಿ ಯುವತಿಗೆ ಬಲವಂತದಿಂದ ಕಿಸ್ ಮಾಡಲು ಯತ್ನಿಸಿದ ವ್ಯಕ್ತಿ

ಮುಂಬೈ :ಫೆ-23: ವ್ಯಕ್ತಿಯೋರ್ವ ರೈಲ್ವೆ ನಿಲ್ದಾಣದಲ್ಲಿ ಬಲವಂತದಿಂದ ಯುವತಿಗೆ ಕಿಸ್‌ ಮಾಡಲು ಯತ್ನಿಸಿದ ಘಟನೆ ಮುಂಬೈನ ತುರ್‌ಭೇ ರೈಲ್ವೇ ನಿಲ್ದಾಣದಲ್ಲಿ ನಡೆದಿದೆ.

ಈ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ದಾಖಲಾಗಿದ್ದು, ವಿಡಿಯೋ ವೈರಲ್‌ ಆಗಿದೆ. ವಿಡಿಯೋದಲ್ಲಿ ಕಂಡು ಬರುವಂತೆ ಆರೋಪಿ ಕಾಮುಕ ವ್ಯಕ್ತಿಯು ಹುಡುಗಿಯತ್ತ ನಡೆದುಕೊಂಡು ಹೋಗುತ್ತಿದ್ದಾನೆ; ಆಕೆಯನ್ನು ಸಮೀಪಿಸುತ್ತಿದ್ದಂತೆಯೇ ಆಕೆಯನ್ನು ಬಲವಂತದಿಂದ ಬರಸೆಳೆದ ಆತ ಆಕೆಗೆ ಕಿಸ್ ಮಾಡಲು ಯತ್ನಿಸಿದ್ದಾನೆ.

ತನ್ನ ಮೇಲಿನ ಈ ಅನಿರೀಕ್ಷಿತ ಲೈಂಗಿಕ ದಾಳಿಯಿಂದ ಭಯಗೊಂಡ ಆಕೆ ಪ್ರತಿರೋಧ ಒಡ್ಡಿದ್ದಾಳೆ; ಆಗ ಏನೂ ಆಗಿಲ್ಲವೆಂಬಂತೆ ಕಾಮುಕ ವ್ಯಕ್ತಿ ಅಲ್ಲಿಂದ ನಡೆದುಕೊಂಡು ಹೋಗಿದ್ದಾನೆ.

ಇನ್ನು ಕಾಮುಕನನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.

man tries,to forcibly kiss girl,navi-mumbai railway station

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ