ಚಂಡಿಗಢ, ಜೂ. 4-ಮಹಿಳಾ ಸರ್ಕಾರಿ ಉದ್ಯೋಗಿಗಳು ಹೆರಿಗೆ (ಮೆಟೆರ್ನಿಟಿ) ರಜೆ ಪಡೆದು ಶಿಶುವಿನ ಪಾಲನೆ-ಪೆÇೀಷಣೆ ಮಾಡುತ್ತಾರೆ. ಆದರೆ ನವಜಾತ ಶಿಶುವಿನ ಆರೈಕೆಗೆ ನೆರವಾಗಲು ಎಲ್ಲ ಪುರುಷ ಸರ್ಕಾರಿ ನೌಕರರಿಗೂ 15 ದಿನಗಳ ರಜೆ ಮಂಜೂರು ಮಾಡಲು ಹರ್ಯಾಣ ಸರ್ಕಾರ ನಿರ್ಧರಿಸಿದೆ. ಈ ರಜೆಯ ಹೆಸರು ಪೆಟೆರ್ನಿಟಿ ಲೀವ್.. ಅರ್ಥಾತ್ ಪಿತೃತ್ವ ರಜೆ..!
ಹರ್ಯಾಣ ಮುಖ್ಯಮಂತ್ರಿ ಮನೋಹರ್ ಲಾಲ್ ಅವರು ಕೈಗೊಂಡಿರುವ ಈ ನಿರ್ಧಾರಕ್ಕೆ ರಾಜ್ಯದ ಸರ್ಕಾರಿ ನೌಕರರು ಫುಲ್ ಖುಷ್ ಆಗಿದ್ದಾರೆ. ಕೇಂದ್ರ ಸರ್ಕಾರದಲ್ಲಿ ಈ ಯೋಜನೆ ಜಾರಿಯಲ್ಲಿದ್ದರೂ ಪರಿಣಾಮಕಾರಿಯಾಗಿ ಅನುಷ್ಠಾನಗೊಂಡಿಲ್ಲ. ಆದರೆ ಹೆರಿಗೆ ಸಂದರ್ಭದಲ್ಲಿ ತಮ್ಮ ಪತ್ನಿಗೆ ನೆರವಾಗಲು ಹಾಗೂ ನವಜಾತ ಶಿಶುವಿನ ಆರೈಕೆಯಲ್ಲಿ ಮಡದಿಗೆ ನೆರವಾಗಲು ರಾಜ್ಯ ಸರ್ಕಾರದ ಪುರುಷ ಉದ್ಯೋಗಿಗಳು ಇನ್ನು ಮುಂದೆ 15 ದಿನಗಳ ತಂದೆತನದ ರಜೆ ಪಡೆಯಲಿದ್ದಾರೆ.
ಮಹಿಳಾ ಪೆÇಲೀಸ್ ಬಲ ಹೆಚ್ಚಳ : ರಾಜ್ಯ ಪೆÇಲೀಸ್ ಇಲಾಖೆಯಲ್ಲಿ ಮಹಿಳಾ ಸಿಬ್ಬಂದಿ ಸಂಖ್ಯೆಯನ್ನು ಶೇ.11 ರಿಂದ ಶೇ.20ಕ್ಕೆ ಹೆಚ್ಚಿಸಲು ಹಾಗೂ ವಿವಿಧ ಇಲಾಖೆಗಳಲ್ಲಿ ಖಾಲಿ ಇರುವ ಉದ್ಯೋಗಗಳನ್ನು ಭರ್ತಿ ಮಾಡಲು ಮುಖ್ಯಮಂತ್ರಿ ನಿರ್ಧರಿಸಿದ್ದಾರೆ.