ಮಲತಾಯಿ ಧೋರಣೆ ಅನುಸರಿಸುತ್ತಿರುವ ಕೇಂದ್ರದಿಂದ ರಾಜ್ಯಕ್ಕೆ ಮತ್ತೊಂದು ಅನ್ಯಾಯ

 

ಬೆಂಗಳೂರು, ಮೇ 31-ನಾಡು-ನುಡಿ, ನೆಲ-ಜಲ, ಸಂಸ್ಕøತಿ , ಪರಂಪರೆ ಇತಿಹಾಸ ಸೇರಿದಂತೆ ಪ್ರತಿಯೊಂದು ವಿಷಯದಲ್ಲೂ ಕರ್ನಾಟಕಕ್ಕೆ ಮಲತಾಯಿ ಧೋರಣೆ ಅನುಸರಿಸುವ ಕೇಂದ್ರ ಸರ್ಕಾರದಿಂದ ಮತ್ತೊಂದು ಅನ್ಯಾಯ ವಾಗಿದೆ.
ಬೆಂಗಳೂರಿನ ಹೊರವಲಯದ ತರಳು ಗ್ರಾಮದಲ್ಲಿರುವ ಕೇಂದ್ರ ಮೀಸಲು ಪೆÇಲೀಸ್ ಪಡೆಯ(ಸಿಆರ್‍ಪಿಎಫ್) ಎರಡು ತರಬೇತಿ ಕೇಂದ್ರಗಳನ್ನು ಉತ್ತರ ಪ್ರದೇಶಕ್ಕೆ ಸ್ಥಳಾಂತರ ಮಾಡಲು ಕೇಂದ್ರ ಸರ್ಕಾರ ಮುಂದಾಗಿದೆ.

ಸಿಆರ್‍ಪಿಎಫ್ ಈ ಎರಡು ತರಬೇತಿ ಕೇಂದ್ರಗಳನ್ನು ಸ್ಥಳಾಂತರಿಸಲು ಅಗತ್ಯ ಕ್ರಮ ಕೈಗೊಳ್ಳಲು ಮುಂದಾಗಬೇಕೆಂದು ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಹಿರಿಯ ಅಧಿಕಾರಿಗಳಿಗೆ ಪತ್ರ ಬರೆದಿದ್ದಾರೆ.
ಸ್ಥಳಾಂತರಗೊಳ್ಳಲಿರುವ ಎರಡು ಘಟಕಗಳು ಉತ್ತರಪ್ರದೇಶದ ಚಂದೌಲಿಗೆ ವರ್ಗಾವಣೆಯಾಗಲಿದೆ. ಮೊದಲ ಹಂತದಲ್ಲಿ ಬಾಡಿಗೆ ಕಟ್ಟಡದಲ್ಲಿ ಈ ಕೇಂದ್ರಗಳು ಕಾರ್ಯ ನಿರ್ವಹಿಸಲಿದ್ದು , ತದನಂತರ ಶಾಶ್ವತ ಕಟ್ಟಡ ನಿರ್ಮಾಣ ಮಾಡಲು ಗೃಹ ಇಲಾಖೆ ಮುಂದಾಗಿದೆ.

ತರಳು ಗ್ರಾಮದಲ್ಲಿ ಒಟ್ಟು ಎಂಟು ಸಾವಿರ ಸಿಆರ್‍ಪಿಎಫ್ ಸಿಬ್ಬಂದಿ ತರಬೇತಿ ಪಡೆಯುತ್ತಿದ್ದಾರೆ.
ಈ ಎರಡು ಕೇಂದ್ರಗಳು ಉತ್ತರ ಪ್ರದೇಶದ ವಾರಣಾಸಿ ವಿಭಾಗದ ಚಂದೌಲಿಗೆ ಸ್ಥಳಾಂತರಿಸಲು ಅಗತ್ಯ ಕ್ರಮ ಕೈಗೊಳ್ಳುವಂತೆ ಕಚೇರಿಗೆ ಪತ್ರ ಬರೆಯಲಾಗಿದೆ.

ಇದೀಗ ಸಿಆರ್‍ಪಿಎಫ್‍ನ ಈ ಎರಡು ಕೇಂದ್ರಗಳು ವಾರಣಾಸಿಯಲ್ಲಿ 4 ಸಾವಿರ ಚದರಡಿಯ ರೇಂಜ್ ಹೆಡ್‍ಕ್ವಾಟರ್ಸ್ ಮತ್ತು ಮುಘಲ್ ಸರಾಯಿಯಲ್ಲಿನ 57,840 ಚದರಡಿಯ ಗ್ರೂಪ್ ಸೆಂಟರ್ ಬಾಡಿಗೆ ಕಟ್ಟಡದಲ್ಲಿ ಕಾರ್ಯ ನಿರ್ವಹಿಸಲಿದೆ. ನಂತರದಲ್ಲಿ ಚಂದೌಲಿಯಲ್ಲಿ ಪೂರ್ಣ ಪ್ರಮಾಣದಲ್ಲಿ ಭೂಮಿ ಪಡೆದು ನೆಲೆ ಸ್ಥಾಪಿಸಿದ ಬಳಿಕ ಅಲ್ಲಿ ವರ್ಗಾವಣೆಗೊಳ್ಳಲಿವೆ ಎಂದು ಸಚಿವಾಲಯ ಮೂಲಗಳು ತಿಳಿಸಿವೆ.
ಸುಮಾರು 8,000 ಸಿಬ್ಬಂದಿಗಳನ್ನು ಹೊಂದಿರುವ ಕೇಂದ್ರೀಯ ಮೀಸಲು ಪೆÇಲೀಸ್ ಪಡೆಯ ಬೆಂಗಳೂರಿನ ಘಟಕವನ್ನು ವಾರಣಾಸಿ ಮತ್ತು ಮುಘಲ್ ಸರಾಯ್ ನಲ್ಲಿರುವ ಬಾಡಿಗೆ ಕಟ್ಟಡಕ್ಕೆ ತಾತ್ಕಾಲಿಕವಾಗಿ ಸ್ಥಳಾಂತರಿಸಲಾಗುತ್ತಿದೆ ಎಂದು ವರದಿಗಳು ತಿಳಿಸಿವೆ.
ಸಿಆರ್¿ಪಿಎಫ್ ಘಟಕ ಸ್ಥಾಪನೆಗೆ ಅಗತ್ಯವಿರುವ ಭೂಮಿಯನ್ನು ಸ್ವಾಧೀನಪಡಿಸಿಕೊಂಡ ಬಳಿಕ ಸಿಆರ್‍ಪಿಎಫ್ ಪಡೆಯನ್ನು ಹೊಸ ಸ್ಥಳಕ್ಕೆ ಸ್ಥಳಾಂತರ ಮಾಡಲಾಗುತ್ತದೆ.

ಬೆಂಗಳೂರಿನ ರಾಜನುಕುಂಟೆ ಸಮೀಪದ ತರಳು ಗ್ರಾಮದ 220 ಎಕರೆಯಷ್ಟು ವಿಸ್ತಾರವಾದ ಪ್ರದೇಶದಲ್ಲಿ ಸಿಆರ್‍ಪಿಎಫ್ ಘಟಕವನ್ನು ಸ್ಥಾಪಿಸಲಾಗಿದೆ. ಈ ಘಟಕ ಸಿಆರ್‍ಪಿಎಫ್‍ನ ಶ್ವಾನ ತಳಿ ಅಭಿವೃದ್ಧಿ ಹಾಗೂ ತರಬೇತಿ ಕೇಂದ್ರವಾಗಿ ಕಾರ್ಯ ನಿರ್ವಹಿಸುತ್ತಿದೆ.
ಮೂರು ಲಕ್ಷ ಸಿಬ್ಬಂದಿಯ ಪ್ರಬಲ ಪಡೆಯನ್ನು ಹೊಂದಿರುವ ಸಿಆರ್‍ಪಿಎಫ್, ದೇಶದ ಅತಿ ದೊಡ್ಡ ಅರೆ ಮಿಲಿಟರಿ ಪಡೆಯಾಗಿದೆ. ನಕ್ಸಲ್ ನಿಗೃಹ ಕಾರ್ಯಾಚರಣೆ ಹಾಗೂ ಜಮ್ಮು-ಕಾಶ್ಮೀರದಲ್ಲಿ ಉಗ್ರರ ವಿರುದ್ಧದ ಕಾರ್ಯಾಚರಣೆಯಲ್ಲಿ ಪ್ರಮುಖ ಪಾತ್ರವಹಿಸುತ್ತಿದೆ.

ಉತ್ತರಪ್ರದೇಶದಲ್ಲಿ ಈಗಾಗಲೇ 5 ಸಿಆರ್‍ಪಿಎಫ್ ಕೇಂದ್ರಗಳಿವೆ. ಲಖನೌ, ಅಲಹಾಬಾದ್, ರಾಂಪುರ, ಅಮೇಥಿ ಹಾಗೂ ನೊಯ್ಡಾದಲ್ಲಿ ಸಿಆರ್‍ಪಿಎಫ್ ಕೇಂದ್ರಗಳಿವೆ. ಇದೀಗ ಮತ್ತೊಂದು ಕೇಂದ್ರವನ್ನು ಬೆಂಗಳೂರಿನಿಂದ ಉತ್ತರಪ್ರದೇಶಕ್ಕೆ ಸ್ಥಳಾಂತರ ಮಾಡಲಾಗುತ್ತಿದೆ. ಕೇಂದ್ರದ ಈ ನಿರ್ಧಾರದಲ್ಲಿ ಯಾವುದೇ ರೀತಿಯ ಅರ್ಥವಿಲ್ಲ. ಕೇಂದ್ರ ಈ ನಿರ್ಧಾರಕ್ಕೆ ಯಾವುದೇ ಸ್ಪಷ್ಟನೆಗಳೂ ಇಲ್ಲ ಎಂದು ಕೆಪಿಸಿಸಿ ಕಾರ್ಯಕಾರಿ ಅಧ್ಯಕ್ಷ ದಿನೇಶ್ ಗುಂಡುರಾವ್ ಹೇಳಿದ್ದಾರೆ.
ಈ ನಡುವೆ ಕನ್ನಡ ಅಭಿವೃದ್ಧಿ ಪ್ರಾಧಿಕಾರ ಕೇಂದ್ರ ಗೃಹ ಸಚಿವಾಲಯಕ್ಕೆ ಪತ್ರ ಬರೆದಿದ್ದು, ತರಳು ಗ್ರಾಮದಿಂದ ಸಿಆರ್‍ಪಿಎಫ್ ಪ್ರಧಾನ ಕಚೇರಿಯನ್ನು ಸ್ಥಳಾಂತರ ಮಾಡುವ ನಿರ್ಧಾರವನ್ನು ಕೂಡಲೇ ರದ್ದು ಮಾಡುವಂತೆ ಆಗ್ರಹಿಸಿದೆ.

ಈಗಾಗಲೇ ಉತ್ತರ ಪ್ರದೇಶದಲ್ಲಿ ಸಿಆರ್‍ಪಿಎಫ್‍ನ ಐದು ಗ್ರೂಪ್ ಸೆಂಟರ್‍ಗಳಿದ್ದು, ಅಲಹಾಬಾದ್, ಲಖನೌ, ರಾಂಪುರ, ಗ್ರೇಟರ್ ನೊಯ್ಡಾ ಮತ್ತು ಅಮೇಠಿಯಲ್ಲಿ ಕಾರ್ಯನಿರ್ವಹಿಸುತ್ತಿವೆ. ಇದೀಗ ಚಂದೌಲಿ ಇದಕ್ಕೆ ಸೇರ್ಪಡೆಯಾಗಿದೆ. ಗೃಹ ಸಚಿವ ರಾಜನಾಥ್ ಸಿಂಗ್ ಅವರು ಜನಿಸಿರುವ ಬಾಬಹೋರಾ ಗ್ರಾಮವು ಚಂದೌಲಿ ಜಿಲ್ಲೆಯ ವ್ಯಾಪ್ತಿಗೆ ಬರುತ್ತದೆ. ಸಾಮಾನ್ಯವಾಗಿ ಗ್ರೂಪ್ ಸೆಂಟರ್‍ನಲ್ಲಿ ನಾಲ್ಕರಿಂದ ಐದು ಬೆಟಾಲಿಯನ್‍ಗಳನ್ನು ಹೊಂದಿರುತ್ತದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ