ಬೀದಿ ನಾಯಿಗಳ ದಾಳಿಗೆ ಎರಡು ವರ್ಷ ಬಾಲಕಿ ಬಲಿ!

ಗಾಝಿಯಾಬಾದ್, ಮೇ 29- ಬೀದಿ ನಾಯಿಗಳ ದಾಳಿಗೆ ಎರಡು ವರ್ಷ ಬಾಲಕಿಯೊಬ್ಬಳು ಬಲಿಯಾದ ಹೃದಯ ವಿದ್ರಾವಕ ಘಟನೆ ಉತ್ತರಪ್ರದೇಶ ಗಾಝಿಯಾಬಾದ್‍ನಲ್ಲಿ ನಡೆದಿದೆ. ಇಲ್ಲಿನ ಮೋದಿ ನಗರದ ಭೀಮ್ ನಗರ್ ಎಂಬಲ್ಲಿ ಬೀದಿ ನಾಯಿಗಳ ದಾಳಿಗೆ ಶಿವಾನಿಯಾ ದುರಂತ ಸಾವಿಗೀಡಾಗಿದ್ದಾಳೆ.
ಈ ಬಾಲಕಿ ನಿನ್ನೆ ಅಪರಾಹ್ನ 2.30ರ ನಂತರ ಕಾಣೆಯಾಗಿದ್ದಳು. ಮನೆಯವರು ತೀವ್ರ ಹುಡುಕಾಟ ನಡೆಸಿದ ನಂತರ ಮನೆ ಪಕ್ಕದ ಮೈದಾನದಲ್ಲಿ ತೀವ್ರ ಗಾಯಗೊಂಡಿದ್ದ ಬಾಲಕಿ ಪತ್ತೆಯಾದಳು.
ಬೀದಿ ನಾಯಿಗಳು ಆಕೆಯನ್ನು ಎಳೆದಾಡಿ ಕಚ್ಚಿದ ಗಾಯಗಳಾಗಿದ್ದವು. ತಕ್ಷಣ ಆಕೆಯನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೆ ಮಾರ್ಗಮಧ್ಯೆ ಶಿವಾನಿಯಾ ಕೊನೆಯುಸಿರೆಳೆದಳು.
ಶಿವಾನಿಯಾ ತಂದೆ ಎಲೆಕ್ಟ್ರಿಷಿಯನ್. ಆಕೆ ತಾಯಿ ಪಾಯಲ್ ಗೃಹಿಣಿ. ಮನೆ ಮುಂದೆ ಆಡವಾಟುತ್ತಿದ್ದ ಮಗುವನ್ನು ಬಿಟ್ಟು ಹಿಂದಿನ ಮನೆಯಿಂದ ನೀರು ತರಲು ಪಾಯಲ್ ಹೋಗಿದ್ದಾಗ ಈ ಘಟನೆ ನಡೆದಿವೆ. ಬೀದಿ ನಾಯಿಗಳು ಆಕೆಯನ್ನು ಕಚ್ಚಿ ಮೈದಾನಕ್ಕೆ ಎಳೆದೊಯ್ದು ದಾಳಿ ನಡೆಸಿ ಕೊಂದಿವೆ.
ಈ ಘಟನೆಯಿಂದ ಮೋದಿನಗರ್ ಪ್ರದೇಶದ ಜನರು ಭಯಭೀತರಾಗಿದ್ದು, ಬೀದಿ ನಾಯಿಗಳ ಹಾವಳಿ ನಿಗ್ರಹಕ್ಕೆ ಆಗ್ರಹಿಸಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ