ಶೇ.0.65 ರಿಂದ ಶೇ.0.50ಕ್ಕೆ ಆಡಳಿತಾತ್ಮಕ ಶುಲ್ಕ ಕಡಿತಗೊಳಿಸಲು ಇಪಿಎಫ್‍ಒ ಟ್ರಸ್ಟಿಗಳ ಸಭೆಯಲ್ಲಿ ನಿರ್ಧರಿಸಲಾಗಿದೆ

ನವದೆಹಲಿ, ಮೇ 28-ಆಡಳಿತಾತ್ಮಕ ಶುಲ್ಕವನ್ನು ಶೇ.0.5ರಷ್ಟು ಕಡಿಮೆ ಮಾಡಲು ನೌಕರರ ಪಿಂಚಣಿ ಸಂಸ್ಥೆ (ಇಪಿಎಫ್‍ಒ)ನಿರ್ಧರಿಸಿದ್ದು, ಇದರಿಂದ ಸುಮಾರು 5 ಲಕ್ಷ ಉದ್ಯೋಗದಾತರಿಗೆ ವಾರ್ಷಿಕ 900 ಕೋಟಿ ರೂ ಉಳಿತಾಯವಾಗಲಿದೆ. ಜೂ.1 ರಿಂದ ಇದು ಅನ್ವಯವಾಗಲಿದೆ. ಉದ್ಯೋಗದಾತರಿಂದ ಪಾವತಿಸಲಾದ ಒಟ್ಟು ವೇತನದಲ್ಲಿ ಶೇ.0.65 ರಿಂದ ಶೇ.0.50ಕ್ಕೆ ಆಡಳಿತಾತ್ಮಕ ಶುಲ್ಕ ಕಡಿತಗೊಳಿಸಲು ಇಪಿಎಫ್‍ಒ ಟ್ರಸ್ಟಿಗಳ ಸಭೆಯಲ್ಲಿ ನಿರ್ಧರಿಸಲಾಗಿದೆ. ಇದು ಉದ್ಯೋಗದಾತರಿಗೆ ತಮ್ಮ ನೌಕರರನ್ನು ಇಪಿಎಫ್‍ಒ ನಡೆಸುವ ಸಾಮಾಜಿಕ ಭದ್ರತಾ ಯೋಜನೆಯ ವ್ಯಾಪ್ತಿಗೆ ತರುವುದಕ್ಕೆ ಅನುಕೂಲ ಮಾಡಿಕೊಡಲಿದೆ ಎಂದು ಸಂಸ್ಥೆಯ ಆಯುಕ್ತ ವಿ.ಪಿ. ಜೋಯ್ ಹೇಳಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ