ಬೆಂಗಳೂರು, ಮೇ 28- ಮುಗಿಯಿತು ಆ ಬೇಸಿಗೆ… ಹೋಗೋಣ ಶಾಲೆಗೆ… ಇಂದಿನಿಂದ ಎಲ್ಲ ಕಡೆ ಶಾಲೆಗಳು ಪ್ರಾರಂಭವಾಗಿದ್ದು, ಮಕ್ಕಳೆಲ್ಲ ಸಮವಸ್ತ್ರ ತೊಟ್ಟು ಶಾಲೆಯತ್ತ ಹೆಜ್ಜೆ ಹಾಕುತ್ತಿದ್ದುದು ಕಂಡುಬಂತು.
ಎರಡು ತಿಂಗಳ ಬೇಸಿಗೆ ರಜೆ ಸಂಭ್ರಮ ಮುಗಿಸಿದ ಮಕ್ಕಳು ಪಠ್ಯ ಪುಸ್ತಕಗಳನ್ನು ಹೊತ್ತು ಶಾಲೆಯತ್ತ ನಡೆದರು.
ಗ್ರಾಮೀಣ ಭಾಗಗಳಲ್ಲಿ ಅಜ್ಜ-ಅಜ್ಜಿ, ನೆಂಟರಿಷ್ಟರ ಮನೆಯಲ್ಲಿ ಬೇಸಿಗೆ ರಜೆ ಕಳೆದ ಮಕ್ಕಳು ನಗರ ಪ್ರದೇಶಗಳಲ್ಲಿ ಶಿಬಿರಗಳಲ್ಲಿ ಸಂಭ್ರಮ ಪಟ್ಟ ಬಹುತೇಕ ಮಕ್ಕಳು ಬೇಸಿಗೆ ರಜೆ ಕಳೆದು ಇಂದಿನಿಂದ ಶಾಲೆಗೆ ಹೊರಟರು.
ಇನ್ನೂ ಹಲವು ಶಾಲೆಗಳಲ್ಲಿ ಮಕ್ಕಳನ್ನು ಸೇರಿಸಲು ಸರದಿ ಸಾಲಿನಲ್ಲಿ ನಿಂತಿದ್ದುದು ಕಂಡುಬಂತು. ಹಲವು ಪೆÇೀಷಕರು ತಾವು ಇಷ್ಟ ಪಟ್ಟ ಶಾಲೆಗೆ ಮಕ್ಕಳನ್ನು ಸೇರಿಸಲು ಸಾಧ್ಯವಾಗದೆ ಒದ್ದಾಡುತ್ತಿದ್ದುದೂ ಕಂಡುಬಂತು.
ಆರ್‍ಟಿಇ ನಲ್ಲಿ ಪ್ರವೇಶ ಪಡೆದ ಮಕ್ಕಳ ಪೆÇೀಷಕರು ಮಕ್ಕಳನ್ನು ಶಾಲೆಗೆ ಬಿಡುತ್ತಿದ್ದರು. ಎಲ್‍ಕೆಜಿ ಯಿಂದ ಎಸ್‍ಎಸ್‍ಎಲ್‍ಸಿವರೆಗೆ ಎಲ್ಲ ಮಕ್ಕಳು ಶಾಲೆಗೆ ತೆರಳುತ್ತಿದ್ದರು.
ಪುಟ್ಟ ಮಕ್ಕಳನ್ನು ಪೆÇೀಷಕರು ಕರೆತಂದು ಶಾಲೆಗೆ ಬಿಟ್ಟು ಹೋಗುತ್ತಿದ್ದರು. ಅಂದದ ಚೆಂದದ ಸಮವಸ್ತ್ರ ತೊಟ್ಟ ಮಕ್ಕಳು ಶಾಲೆಗೆ ಬರುತ್ತಿದ್ದರು. ಕೆಲವರು ಖುಷಿ ಖುಷಿಯಿಂದ ಶಾಲೆಗೆ ಬಂದರೆ, ಮತ್ತೆ ಕೆಲವು ಮಕ್ಕಳು ಪೆÇೀಷಕರನ್ನು ಬಿಟ್ಟು ಶಾಲೆಗೆ ಹೋಗಲು ಸಂಕಟ ಪಡುತ್ತಿದ್ದರು.
ಬಹುತೇಕ ಎಲ್ಲ ಶಾಲೆಗಳೂ ಆರಂಭವಾಗಿದ್ದು, ಮಣಭಾರದ ಪುಸ್ತಕಗಳನ್ನು ಇನ್ನು ಮುಂದೆ ಹೊತ್ತುಕೊಂಡು ಶಾಲೆಯತ್ತ ವಿದ್ಯಾರ್ಥಿಗಳು ಸಾಗಬೇಕಾಗಿದೆ.