ನವದೆಹಲಿ, ಮೇ 28-ಬಡ ಕುಟುಂಬಗಳಿಗೆ ಎಲ್ಪಿಜಿ ಸಿಲಿಂಡರ್ಗಳ ವ್ಯಾಪ್ತಿ ಹೆಚ್ಚಳ ಗುರಿ ಹೊಂದಿರುವ ತಮ್ಮ ಸರ್ಕಾರದ ಮಹತ್ವದ ಉಜ್ವಲ ಯೋಜನೆಯಿಂದ ಸಾಮಾಜಿಕ ಪರಿವರ್ತನೆಗೆ ಕಾರಣವಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಬಣ್ಣಿಸಿದ್ದಾರೆ.
ಉಜ್ವಲ ಫಲಾನುಭವಿಗಳೊಂದಿಗೆ ಸಂವಾದದಲ್ಲಿ ಮಾತನಾಡಿದ ಅವರು, ತಮ್ಮ ಸರ್ಕಾರ ದಲಿತರು ಮತ್ತು ಬುಡಕಟ್ಟು ಸಮುದಾಯದ ಪರ ಇರುವುದನ್ನು ಪ್ರತಿಪಾದಿಸಿದರು. ಸರ್ಕಾರ ಈವರೆಗೆ ನೀಡಿರುವ 10 ಕೋಟಿಗಳಲ್ಲಿ ನಾಲ್ಕು ಕೋಟಿ ಎಲ್ಪಿಜಿ ಸಂಪರ್ಕದ ಫಲಾನುಭವಿಗಳು ದಲಿತರು ಮತ್ತು ಬುಡಕಟ್ಟು ಸಮುದಾಯದವರೇ ಆಗಿದ್ದಾರೆ ಎಂದರು.
ಕೇಂದ್ರ ಸರ್ಕಾರ ದಲಿತರ ವಿರುದ್ಧವಾಗಿದೆ ಎಂಬ ಕಾಂಗ್ರೆಸ್ ಆರೋಪಗಳನ್ನು ತಳ್ಳಿ ಹಾಕಿದ ಪ್ರಧಾನಿ, ಯುಪಿಎ ಆಡಳಿತದಲ್ಲಿ ದಲಿತರಿಗೆ 445 ಪೆಟ್ರೋಲ್ ಪಂಪ್ಗಳನ್ನು ಮಾತ್ರ ನೀಡಲಾಗಿತ್ತು. ಆದರೆ ನಮ್ಮ ಸರ್ಕಾರದಲ್ಲಿ ನಾಲ್ಕು ವರ್ಷಗಳ ಅವಧಿಯಲ್ಲಿ 1,200ಕ್ಕೂ ಹೆಚ್ಚು ಪೆಟ್ರೋಲ್ ಪಂಪ್ಗಳನ್ನು ಮಂಜೂರು ಮಾಡಲಾಗಿದೆ ಎಂದು ಅವರು ಅಂಕಿ-ಅಂಶ ನೀಡಿದರು.